- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ತಣ್ಣೀರು ಬಾವಿ ಬೀಚ್ ನಲ್ಲಿ ‘ಅಂತರರಾಷ್ಟ್ರೀಯ ಬೀಚ್ ಕ್ಲೀನ್ ಡೇ’

ಅಂತರರಾಷ್ಟ್ರೀಯ ಬೀಚ್ ಕ್ಲೀನ್ ಡೇ [1]ಮಂಗಳೂರು : ಕರಾವಳಿ ಕಾವಲು ಪೊಲೀಸ್ ಠಾಣೆ ಮತ್ತು ಕೋಸ್ಟ್ ಗಾರ್ಡ್ ಮಂಗಳೂರುರವರು ಜಂಟಿಯಾಗಿ ತಣ್ಣೀರು ಬಾವಿ ಬೀಚ್ ನಲ್ಲಿ ‘ಅಂತರರಾಷ್ಟ್ರೀಯ ಬೀಚ್ ಕ್ಲೀನ್ ಡೇ’ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸದರಿ ಕಾರ್ಯಕ್ರಮದ ಅದ್ಯಕ್ಷತೆಯನ್ನು ಶ್ರೀ. ಎಸ್.ಸಿ ಪಟ್ನಾಯಕ್, ಕಮಾಂಡೆಂಟ್, ಕೋಸ್ಟ್ ಗಾರ್ಡ್ ರವರು ವಹಿಸಿದ್ದು, ಹಾಗೂ ಶ್ರೀ ಅರುಣ್ ಕುಮಾರ್, ಕಮಾಂಡೆಂಟ್, ಕೋಸ್ಟ್ ಗಾರ್ಡ್, ಶ್ರೀ ಅಮಾನುಲ್ಲಾ. ಎ, ಪೊಲೀಸ್ ಉಪನಿರೀಕ್ಷಕರು, ಶ್ರೀ ಶ್ರೀಧರ್.ಎಸ್.ಆರ್, ಪೊಲೀಸ್ ಉಪನಿರೀಕ್ಷಕರು, ಹಾಗೂ ಠಾಣೆಯ ಎಲ್ಲಾ ಸಿಬ್ಬಂದಿಗಳು ಮತ್ತು ಕೋಸ್ಟ್ ಗಾರ್ಡ್ ನ ಸಿಬ್ಬಂದಿಗಳು ಹಾಜರಿದ್ದರು. ಹಾಗೂ ಎನ್.ಎಂ.ಪಿ.ಟಿ ಪ್ರೌಢ ಶಾಲೆಯ ಮತ್ತು ಕೂಳೂರು ಪ್ರೌಢಶಾಲೆಯ ಉಪಧ್ಯಾಯರುಗಳು ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಅಲ್ಲದೇ ಠಾಣಾ ಸರಹದ್ದಿನ ಸಾಗರರಕ್ಷಕ ದಳದ ಸದಸ್ಯರು ಹಾಜರಿದ್ದು ಬೀಚ್ನಲ್ಲಿ ಬಿದ್ದಿರುವ ಪ್ಲಾಸ್ಟಿಕ್, ರಬ್ಬರ್, ಕಸಗಳನ್ನು ಹೆಕ್ಕಿ ವಿಲೇವಾರಿ ಮಾಡಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಅಂತರರಾಷ್ಟ್ರೀಯ ಬೀಚ್ ಕ್ಲೀನ್ ಡೇ [2]
ಶ್ರೀ ಎಸ್.ಸಿ ಪಟ್ನಾಯಕ್, ಕಮಾಂಡೆಂಟ್, ಕೋಸ್ಟ್ ಗಾರ್ಡ್ ರವರು ಮಾತನಾಡಿ, ಬೀಚ್ ಕ್ಲೀನ್  ನ ಮಹತ್ವ ಮತ್ತು ಅಗತ್ಯದ ಕುರಿತು ತಿಳಿಸಿದರು. ಹಾಗೂ ಶ್ರೀ ಅಮಾನುಲ್ಲಾ. ಎ ರವರು ಅಂತರರಾಷ್ಟ್ರೀಯ ಬೀಚ್ ಕ್ಲೀನ್ ಡೇ ಯ ಬಗ್ಗೆ ತಿಳಿಸಿ ಬೀಚನ್ನು ಸ್ವಚ್ಚಗೊಳಿಸುವ ಉದ್ದೇಶಗಳನ್ನು ತಿಳಿಸಿ ಈ ವಿಚಾರದಲ್ಲಿ ಎಲ್ಲರಿಗೂ ಅರಿವುಮೂಡಿಸಿದರು. ಸದರಿ ಕಾರ್ಯಕ್ರಮವನ್ನು ಶ್ರೀ ಎಸ್.ಬಿ ನಾಯಕ್, ಪೊಲೀಸ್ ಅಧೀಕ್ಷಕರು, ಕರಾವಳಿ ಕಾವಲು ಪೊಲೀಸ್, ಉಡುಪಿರವರು ಮತ್ತು ಶ್ರೀ ಮುಕುಂದ ನಾಯಕ್, ಪೊಲೀಸ್ ನಿರೀಕ್ಷಕರು, ಕರಾವಳಿ ಕಾವಲು ಪೊಲೀಸ್ ಠಾಣೆ, ಮಂಗಳೂರುರವರುಗಳು ಸಂಯೋಜಿಸಿದ್ದರು.