- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸಾಹಿತ್ಯ ಸಮ್ಮೇಳನ : ಬಹುತ್ವದ ಸಂಸ್ಕೃತಿಯ ಅನಾವರಣ; ಕಲ್ಕೂರ

kalkura [1]

ಮಂಗಳೂರು : ತುಳುನಾಡಿನ ಬಹುತ್ವದ ಸಂಸ್ಕೃತಿಯು ಸಾಹಿತ್ಯ ಸಮ್ಮೇಳನದ ಮೂಲಕ ಅನಾವರಣಗೊಳ್ಳಲಿ ಎಂದು ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಹೇಳಿದರು.

ಜನವರಿ 29ರಂದು ಸಂತ ಆಗ್ನೇಸ್‌ ಕಾಲೇಜಿನಲ್ಲಿ ಜರಗಲಿರುವ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಮುಖ್ಯವಾಗಿ ವಿದ್ಯಾರ್ಥಿಗಳು ಸಾಹಿತ್ಯ ಹಾಗೂ ಸಂಸ್ಕೃತಿಯ ಬಗ್ಗೆ ಹೆಚ್ಚು ಒಲವನ್ನು ತೋರಿಸಬೇಕು. ಈ ನೆಲೆಯಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನವು ಪರಿಣಾಮಕಾರಿಯಾಗಿ ಯಶಸ್ಸನ್ನು ಕಾಣುವಂತಾಗಲೆಂದರು.

ಈ ಸಂದರ್ಭ ಆಗ್ನೇಸ್‌ ಕಾಲೇಜಿನ ಪ್ರಾಂಶುಪಾಲೆ ಸಿ| ಡಾ| ಎಂ. ಜೆಸ್ವೀನಾ ಎ.ಸಿ., ಸಂತ ಆಗ್ನೇಸ್‌ ಕಾಲೇಜು ಕುಲ ಸಚಿವರಾದ ಪ್ರೊ. ಚಾರ್ಲ್ಸ್ ಸಿ. ಪಾಯಸ್, ಪೊಳಲಿ ನಿತ್ಯಾನಂದ ಕಾರಂತ, ಡಾ. ಪ್ರಕಾಶ ಚಂದ್ರ ಶಿಶಿಲ,ಡಾ. ಸಂಪೂರ್ಣಾನಂದ ಬಳ್ಕೂರು, ಡಾ. ಉದಯಕುಮಾರ್, ಪ್ರೊ. ಚಂದ್ರ ಮೋಹನ್, ಡಾ. ಶೈಲಜಾ ಕೆ,ಕನ್ನಡ ಸಾಹಿತ್ಯ ಪರಿಷತ್ತ್ ಮಂಗಳೂರು ತಾಲೂಕು ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ ಬಿ. ಶೆಟ್ಟಿ, ಕೋಶಾಧಿಕಾರಿ ಪ್ರೊ. ಪಿ. ಕೃಷ್ಣಮೂರ್ತಿ, ಪದಾಧಿಕಾರಿಗಳಾದ ದೇವಕಿ ಅಚ್ಯುತ, ಪಧ್ಮನಾಭ ಭಟ್‌ಎಕ್ಕಾರು, ಮೋಲಿ ಮಿರಾಂದ, ಉಪಸ್ಥಿತರಿದ್ದರು.