- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಶಾಲೆಗಳಲ್ಲಿ ವಾರಕ್ಕೆ ಒಂದು ದಿನ ಬ್ಯಾಗ್ ರಹಿತ : ಸಚಿವ ಸುರೇಶ್ ಕುಮಾರ್

bag [1]

ಮೈಸೂರು : ಶಾಲೆಗಳಲ್ಲಿ ವಾರಕ್ಕೆ ಒಂದು ದಿನ ಬ್ಯಾಗ್ ರಹಿತ ದಿನ ಮಾಡಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.

ಮೈಸೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬರುವ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲಾಗುವುದು. ಶಿಕ್ಷಣ ತಜ್ಞರಿದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡುವ ದೃಷ್ಟಿಯಿಂದ ವಾರದಲ್ಲಿ ಒಂದು ದಿನ ಅಥವಾ ಹದಿನೈದು ದಿನಕ್ಕೊಮ್ಮೆ ವಿದ್ಯಾರ್ಥಿಗಳಿಗೆ ಬ್ಯಾಗ್ ಲೇಸ್ ಡೇ ಮಾಡಲಾಗುವುದು. ನಾಟಕ, ಸ್ವಚ್ಛತೆ, ಹಾಡುಗಾರಿಕೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಶಿಕ್ಷಣ ನೀಡಲಾಗುವುದು. ಶಾಲಾ ಮಕ್ಕಳ ಬ್ಯಾಗ್ ತೂಕವನ್ನು ಕಡಿಮೆ ಮಾಡಲು ಕೂಡ ಚಿಂತಿಸಲಾಗಿದೆ. ಮುಂದಿನ ವಾರ ಶಿಕ್ಷಣ ತಜ್ಞರೊಂದಿಗೆ ಸಂವಾದ ನಡೆಸಿ ಅಭಿಪ್ರಾಯ ಪಡೆಯಲಾಗುವುದು ಎಂದರು.

ಹಗರಿ ಬೊಮ್ಮನಹಳ್ಳಿ ಶಿಕ್ಷಕ ಅಮಾನತು ಪಕ್ಕೆಲುಬು ಉಚ್ಛಾರಣೆಗೆ ತಡವರಿಸಿದ್ದ ವಿದ್ಯಾರ್ಥಿಯ ವೀಡಿಯೋ ವೈರಲ್ ಮಾಡಿದ್ದ ಶಿಕ್ಷಕನ ವಿಚಾರಕ್ಕೆ ಪ್ರತಿಕ್ರಿಯಿಸಿ ಹೂವಿನ ಹಡಗಲಿ ಕುರುವತ್ತಿ ಶಾಲೆ ಶಿಕ್ಷಕ ಎಂದು ತಿಳಿದು ಬಂದಿದೆ. ಆ ಶಿಕ್ಷಕನನ್ನು ಅಮಾನತು ಮಾಡಲಾಗಿದೆ. ಪೊಲೀಸ್ ಕಂಪ್ಲೇಂಟ್ ಕೂಡ ಆಗಿದೆ. ಶಾಲಾ ಅವಧಿಯಲ್ಲಿ ಮೊಬೈಲ್ ಉಪಯೋಗಿಸುವ ಹಾಗಿಲ್ಲ. ಅದರ ಉಲ್ಲಂಘನೆ ಅವಕಾಶ ನೀಡಬಾರದು. ಮಗುವಿನ ಮನಸ್ಥಿತಿ , ಪೋಷಕರ ಮನಸ್ಥಿತಿ ಏನು ಆಗಬೇಡ.? ಮಗುವಿಗೆ ಇರುವ ಕೊರತೆ ಆಟದ ಸಂಗತಿ ಆಗಬಾರದು, ತಮಾಷೆ ಸಂಗತಿ ಆಗಬಾರದು. ಎಲ್ಲ ಡಿಡಿಪಿಐಗಳಿಗೆ ಪತ್ರ ಬರೆದಿದ್ದೇನೆ ಎಂದರು.

ಆದರ್ಶ ಶಾಲೆಯಲ್ಲಿ ನಡೆದ ಪ್ರಕರಣ ವಿಚಾರಕ್ಕೆ ಪ್ರತಿಕ್ರಿಯಿಸಿ ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮಕ್ಕಳ ಮಧ್ಯಾಹ್ನದ ಊಟದ ಬಗ್ಗೆ ಅಡುಗೆ ಸಿಬ್ಬಂದಿಗೆ ಜಾಗೃತಿ ಮೂಡಿಸಬೇಕಿದೆ. ಈ ಒಂದು ಘಟನೆಯಿಂದ ಎಲ್ಲಾ ಶಾಲೆಗಳಲ್ಲೂ ಇದೇ ರೀತಿ ಆಗುತ್ತಿದೆಯಾ ಎಂಬ ಭಾವನೆ ಮೂಡುತ್ತದೆ. ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಹೆಚ್ ಡಿ ಕೋಟೆಯಲ್ಲಿ ನಡೆದ ಘಟನೆ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಖಾಸಗಿ ಶಾಲೆಯನ್ನು ಬಿಟ್ಟು ಸಂತೊಷದಿಂದ ಸರ್ಕಾರಿಗೆ ಶಾಲೆಗೆ ಸೇರಿಸುವಂತೆ ಆಗಬೇಕು ಅನ್ನೋದು ನನ್ನ ಆಸೆ. ನನ್ನ ಅವಧಿಯಲ್ಲಿ ಖಾಸಗಿ ಶಾಲೆ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಿಗೆ ಸೇರಿಸುವಂತೆ ಆಗಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡ್ತೇನೆ. ಸರ್ಕಾರಿ ಶಾಲೆಗಳ ಕಾಯಕಲ್ಪಕ್ಕೆ ಸಾಕಷ್ಟು ಹಣ ಬೇಕು. ಒಟ್ಟು 60 ಸಾವಿರ ಶಾಲಾ ಕಟ್ಟಡಗಳಿವೆ. ಸಾಕಷ್ಟು ಹಳೆ ಕಟ್ಟಡಗಳಿಗೆ ಕಾಯಕಲ್ಪಬೇಕಿದೆ. ಬಜೆಟ್ ನಲ್ಲಿ ಹಣ ಕೇಳುತ್ತಿದ್ದೇವೆ. ಕಟ್ಟಡ ಮತ್ತು ಒಳಗಿನ ಶಿಕ್ಷಣಕ್ಕೆ ಕಾಯ ಕಲ್ಪ ಬೇಕಿದೆ ಎಂದರು.

ವಿಶ್ವವಿದ್ಯಾನಿಲಯಗಳಲ್ಲಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ವಿಷಯಗಳಿಗೆ ಗಮನ ಕೊಡಬೇಕು. ವಿವಿಗಳು ಕಲಿಕೆಯ ದೇಗುಲಗಳಾಗಬೇಕು. ಅದನ್ನು ಬಿಟ್ಟು ದ್ವೇಷದ ವಾತಾವರಣ ಸೃಷ್ಟಿ ಮಾಡುವುದು ಸರಿಯಲ್ಲ ಎಂದರು.