- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕಾಳುಮೆಣಸು ಮತ್ತು ತೆಂಗು ಬೇಸಾಯದ ಬಗ್ಗೆ ತರಬೇತಿ ಕಾರ್ಯಕ್ರಮ ಮತ್ತು ವಿಚಾರ ಸಂಕಿರಣ

peraje [1]

ಮಡಿಕೇರಿ : ತೋಟಗಾರಿಕೆ ಇಲಾಖೆ ಜಿಲ್ಲಾ ಪಂಚಾಯತ್, ಮಡಿಕೇರಿ ಮತು ಪೆರಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ನಿ ಪೆರಾಜೆ, ಇದರ ಜಂಟಿ ಆಶ್ರಯದಲ್ಲಿ ಗೇರು, ಕಾಳುಮೆಣಸು ಮತ್ತು ತೆಂಗು ಬೇಸಾಯದ ಬಗ್ಗೆ ತರಬೇತಿ ಕಾರ್ಯಕ್ರಮ ಮತ್ತು ವಿಚಾರ ಸಂಕಿರಣವು ದಿನಾಂಕ 13.01.2020 ಸೋಮವಾರದಂದು, ಪೆರಾಜೆ ಪ್ರಾ.ಕೃ.ಪ.ಸ.ಸಂಘದ ಸಹಕಾರ ಸಧನದಲ್ಲಿ ಪೂರ್ವಾಹ್ನ 10.00 ಗಂಟೆಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರು ಮತ್ತು ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ನಾಗೇಶ್ ಕುಂದಲ್ಪಾಡಿಯವರು ವಹಿಸಿದ್ದರು.

peraje [2]

ಪೆರಾಜೆ ಗ್ರಾಮಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜಯಲಕ್ಷ್ಮೀ ಧರಣೀಧರರವರು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ತೋಟಗಾರಿಕಾ ಇಲಾಖೆಯ ಉಪನಿರ್ಧೇಶಕರಾದ ಶ್ರೀ ಚಂದ್ರಶೇಖರ ಕೆ. ಎಸ್ ಇವರು ಪ್ರಾಸ್ಥಾವಿಕವಾಗಿ ಮಾತನಾಡಿದರು.

ಡಾ. ಯದುಕುಮಾರು ಎನ್, ನಿವೃತ್ತ ಪ್ರಧಾನ ವಿಜ್ಞಾನಿ, ಐಸಿಎಆರ್ ಗೇರು ಸಂಶೋಧನ ನಿರ್ದೇಶನಾಲಯ, ಪುತ್ತೂರು ಇವರು ಗೇರು ಮತ್ತು ಕಾಳುಮೆಣಸು ಬೇಸಾಯದ ಬಗ್ಗೆ ಸಮಗ್ರ ಮಾಹಿತಿಯನ್ನು ರೈತ ಸದಸ್ಯರಿಗೆ ತಿಳಿಸಿದರು. ನಂತರ ಶ್ರೀ ಗೋಪಾಲಕೃಷ್ಣ ಎ.ಎಸ್ , ತಾಂತ್ರಿಕ ಅಧಿಕಾರಿಗಳು , ಸಿಪಿಸಿಆರ್ ಐ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ, ಕಿದು ನೆಟ್ಟಣ ಇವರು ತೆಂಗು ಬೆಳೆಯ ಸಮಗ್ರ ಮಾಹಿತಿಯನ್ನು ಮತ್ತು ಶ್ರೀ. ಬಿ.ಸಿ. ನಾಚಪ್ಪ, ವಿಷಯ ತಜ್ಞರು ಹಾರ್ಟಿ ಕ್ಲಿನಿಕ್, ತೋಟಗಾರಿಕೆ ಇಲಾಖೆ (ಜಿಪಂ) ಮಡಿಕೇರಿ ಇವರು ತೋಟಗಾರಿಕೆ ಬೆಳೆಗಳಲ್ಲಿ ಸಾವಯವ ಕೃಷಿ ಈ ವಿಚಾರದ ಉಪಯುಕ್ತ ಮಾಹಿತಿಗಳನ್ನು ರೈತ ಸದಸ್ಯರೊಂದಿಗೆ ಹಂಚಿಕೊಂಡರು. ಕಾರ್ಯಕ್ರಮದ ಪ್ರಾರಂಭದಲ್ಲಿ ಶಾಲಾ ವಿಧ್ಯಾರ್ಥಿಗಳಿಂದ ಪ್ರಾರ್ಥನೆ. ನಂತರದಲ್ಲಿ ತೋಟಗಾರಿಕಾ ಇಲಾಖೆ ಮಡಿಕೇರಿಯ ಅಧಿಕಾರಿಯವರಾದ ಡಾ| ವಿಜೇತ್.ಎಸ್ ಇವರು ಸರ್ವರನ್ನು ಸ್ವಾಗತಿಸಿದರು. ಕೊನೆಯಲ್ಲಿ ಸಂಘದ ಪ್ರ. ಮುಖ್ಯಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಹೆಚ್.ಕೆ ಇವರು ಸರ್ವರನ್ನು ವಂದಿಸಿದರು.

peraje [3]

ಕಾರ್ಯಕ್ರಮದಲ್ಲಿ ಸುಮಾರು 100 ಜನ ರೈತ ಸದಸ್ಯರು ಪಾಲ್ಗೊಂಡಿದ್ದು, ಸಮೂಹಿಕ ಸಹಭೋಜನ ಮತ್ತು ಹಣ್ಣಿನ ಗಿಡಗಳ ವಿತರಣೆ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

peraje [4]