ಬೆಂಗಳೂರು : ಮುಸ್ಲಿಂರಿಗೆ ಬಂದಿರುವ ಅನುದಾನವನ್ನು ನಾನು ಖರ್ಚು ಮಾಡಲ್ಲ ಎಂಬ ವಿವಾದಿತ ಹೇಳಿಕೆ ನೀಡಿದ್ದ ಶಾಸಕ ರೇಣುಕಾಚಾರ್ಯ ವಿರುದ್ಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕ ರೇಣುಕಾಚಾರ್ಯರನ್ನು ಈ ಕೂಡಲೇ ಸಸ್ಪಂಡ್ ಮಾಡಬೇಕು. ವೋಟ್ ಹಾಕಿದವರಿಗೆ ಮಾತ್ರ ಕೆಲಸ ಮಾಡಬೇಕಾ? ಅವರು ಎಷ್ಟು ಸಾರಿ ಸೋತಿದ್ದಾರೆ ಅದಕ್ಕೆ ಅಲ್ಪ ಅಸಂಖ್ಯಾತರೇ ಕಾರಣನಾ? ವೋಟ್ ಹಾಕಿದವರಿಗೆ ಮಾತ್ರ ಕೆಲಸ ಅನ್ನೋ ಮಾತು ಖಂಡನೀಯ ಎಂದು ಗರಂ ಆದರು.
ಸಿಎಂ ಯಡಿಯೂರಪ್ಪ ಅವರನ್ನು ರಾಜಕೀಯ ಕಾರ್ಯದರ್ಶಿ ಆಗಿ ನೇಮಕ ಮಾಡಿಕೊಂಡಿದ್ದಾರೆ. ಇದೇನಾ ಸಿಎಂ ಯಡಿಯೂರಪ್ಪರಿಗೆ ಶಾಸಕ ರೇಣುಕಾಚಾರ್ಯ ಕಾರ್ಯದರ್ಶಿಯಾಗಿ ಹೇಳಿ ಕೊಡುತ್ತಿರುವುದು. ಬಿಜೆಪಿಯವರು ಮೊದಲು ರೇಣುಕಾಚಾರ್ಯ ಅವರ ಬಾಯಿ ಮುಚ್ಚಿಸೋ ಕೆಲಸ ಮಾಡಬೇಕು ಎಂದು ಬಿಜೆಪಿ ಮತ್ತು ರೇಣುಕಾಚಾರ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಹೊನ್ನಾಳಿ ಶಾಸಕ ರೇಣುಕಾಚಾರ್ಯ, ನಾನು ಮುಸ್ಲಿಂರಿಗೆ ಬಂದಿರುವ ಅನುದಾನವನ್ನು ಖರ್ಚು ಮಾಡಲ್ಲ. ಅದನ್ನು ಹಿಂದೂ ಧರ್ಮದವರಿಗೆ ಖರ್ಚು ಮಾಡುತ್ತೀನಿ. ಮುಸ್ಲಿಂರ ವೋಟು ನಂಗೆ ಬೇಕಾಗಿಲ್ಲ ಎಂಬ ಹೇಳಿಕೆ ನೀಡಿದ್ದರು.
ಇದೇ ವೇಳೆ ಸ್ಫೋಟದಿಂದ ಗಾಯಗೊಂಡಿದ್ದ ಶಾಸಕ ಹ್ಯಾರಿಸ್ ಆರೋಗ್ಯ ವಿಚಾರಿಸಿದ ದಿನೇಶ್ ಗುಂಡೂರಾವ್, ರಾಜಕೀಯ ನಾಯಕರಿಗೆ ಈ ರೀತಿ ಅಭದ್ರತೆ ಕಾಡುವಂತ ಪರಿಸ್ಥಿತಿ ಉಂಟಾಗಿದೆ. ಯಾವ ಉದ್ದೇಶಕ್ಕೆ ಸ್ಫೋಟ ಆಗಿದೆ, ಅದರ ಹಿನ್ನೆಲೆ ಏನು ಅನ್ನೋದನ್ನು ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
Click this button or press Ctrl+G to toggle between Kannada and English