- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪವರ್ ಟಿವಿಯ ವರದಿಗಾರನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸನಾತನ ಸಂಸ್ಥೆ ಒತ್ತಾಯ

sanatana
ಮಂಗಳೂರು : ದಿನಾಂಕ 23.1.2020 ರಂದು ಪವರ ಟಿವಿಯು “ಬಾಂಬ್ ಶರಣಗತಿ” ಕನ್ನಡ ವಾರ್ತಾ ವಾಹಿನಿಯ ಕಾರ್ಯಕ್ರಮದ ವರದಿಯಲ್ಲಿ ಮಂಗಳೂರು ವಿಮಾನನಿಲ್ದಾಣ ದಲ್ಲಿ ಸಜೀವ ಬಾಂಬ್ ಇಟ್ಟ ಆರೋಪಿ ಆದಿತ್ಯ ರಾವ್ ಇವನಿಗೆ ಸನಾತ‌ನ ಸಂಸ್ಥೆಯ ಲಿಂಕ್ ಇದೆ. ಮಂಗಳೂರು ಬಾಂಬ್ ಪ್ರಕರಣದ ಹಿಂದೆ ಸನಾತನ ಸಂಸ್ಥೆಯ ಕೈವಾಡ ಇರುವ ಬಗ್ಗೆ ಪವರ ಟಿವಿ ಬ್ರೇಕಿಂಗ್ ವರದಿಯನ್ನು ನಿರಂತರವಾಗಿ ಪ್ರಸಾರ ಮಾಡಿತ್ತು. ಇದು ಶುದ್ದ ಸುಳ್ಳಾಗಿದೆ.

ಆದಿತ್ಯರಾವ ಮತ್ತು‌ ಸನಾತನ ಸಂಸ್ಥೆಗೆ ಯಾವುದೇ ಸಂಬಂದ ಇಲ್ಲ. ಸನಾತನ ಸಂಸ್ಥೆಯು ಆದ್ಯಾತ್ಮ ಪ್ರಚಾರ ಮಾಡುವ ಸಂಸ್ಥೆಯಾಗಿದೆ. ಇಂತಹ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಿಗೆ ಅಸ್ಪದ ನೀಡುವುದಿಲ್ಲ. ಆದರೆ ಪವರ ಟಿವಿಯು ದುರುದ್ದೇಶದಿಂದ, ಸನಾತನ ಸಂಸ್ಥೆಯ ಅಪಮಾನ ಮಾಡಲು, ಟಿ.ಆರ್ .ಪಿಗಾಗಿ ಇಂತಹ ಸುಳ್ಳು ವರದಿಯನ್ನು ಪ್ರಸಾರ ಮಾಡಿದೆ. ಇದರಿಂದ ಸನಾತನ ಸಂಸ್ಥೆಯ ಕಾರ್ಯಕ್ಕೆ, ಗೌರವಕ್ಕೆ ಅಪಕೀರ್ತಿ ಬಂದಿದೆ. ಹಾಗಾಗಿ ಇಂತಹ ಸುಳ್ಳು ವರದಿ ಪ್ರಸಾರ ಮಾಡುವ, ಬೇಜವಾಬ್ದಾರಿ ಚಾನೆಲ್ ಮೇಲೆ, ಸಂಬಂಧಿಸಿದ ವರದಿಗಾರ ನ ಮೇಲೆ ಕಾನೂ‌ನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸುತ್ತೇವೆ.

sanatana [1]

ಶ್ರೀ ಲಕ್ಷ್ಮೀ ಗಣೇಶ್, ಉಪ ಪೋಲಿಸ್ ಆಯುಕ್ತರು, ಅಪರಾಧ ಮತ್ತು ಸಂಚಾರ ಇವರಿಗೆ ಸನಾತನ ಸಂಸ್ಥೆ ಮತ್ತು ಇತರ ಸಮವಿಚಾರ ಸಂಘಟನೆಗಳಿಂದ ಮನವಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಜೇಶ್ ಪವಿತ್ರನ್, ಶ್ರೀ ಮಧುಸೂದನ ಆಯಾರ್, ಶ್ರೀರಾಮ ಸೇನೆಯ ವೆಂಕಟೇಶ್ ಪಡಿಯಾರ್ ಮತ್ತು ಶ್ರೀ ಲೋಕೇಶ್ ಕುತ್ತಾರ್, ಶಶಿಧರ್ ಬಾಳಿಗ, ಶ್ರೀ ಸುರೇಶ್, ಶ್ರೀ ದಯಾನಂದ ವೊಳಚಿಲ್, ಶ್ರೀ ಪ್ರಭಾಕರ ನಾಯಕ್ ಉಪೇಂದ್ರ ಆಚಾರ್ಯ ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಚಂದ್ರ ಮೊಗೇರ ಇನ್ನಿತರರು ಉಪಸ್ಥಿತರಿದ್ದರು.