ಚಿಕ್ಕಮಗಳೂರು : ಅಧಿಕಾರ ಕಳೆದುಕೊಂಡು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಹತಾಶರಾಗಿ ಮಾತನಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟೀಕಿಸಿದ್ದಾರೆ. ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಅದಗೆಟ್ಟು ಹೋಗಿದೆ ಎಂಬ ಸಿದ್ದಾರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡು ಹತಾಶರಾಗಿದ್ದಾರೆ, ಮತ್ತೊಂದು ಕಡೆ ಕುಮಾರಸ್ವಾಮಿ ಹತಾಶರಾಗಿ ಏನೇನು ಮಾತಾನಾಡುತ್ತಿದ್ದಾರೆ. ಇವರು ಮೈತ್ರಿ ಸರ್ಕಾರ ನಡೆಸೋಕೆ ಆಗದೇ ಸರ್ಕಾರ ಬೀಳಿಸಿಕೊಂಡ್ರು, ಈಗ ಅಧಿಕಾರ ಕಳೆದುಕೊಂಡು ಹತಾಶರಾಗಿ ಮಾತಾನಾಡುತ್ತಿದ್ದಾರೆ ಎಂದು ರಾಮುಲು ಸಿದ್ದು ಹಾಗೂ ಕುಮಾರಸ್ವಾಮಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಇನ್ನು, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನ ದಿವಾಳಿ ಮಾಡಿ, ಖಜಾನೆಯನ್ನ ಖಾಲಿ ಖಾಲಿ ಮಾಡಿ ಹೋದರು. ಸಿಎಂ ಯಡಿಯೂರಪ್ಪ ಆರ್ಥಿಕ ಪರಿಸ್ಥಿತಿ ಸರಿಪಡಿಸುವ ಕೆಲಸ ಮಡುತ್ತಿದ್ದಾರೆ. ಇರುವ ಸಂಪನ್ಮೂಲವನ್ನ ಸರಿಪಡಿಸಿಕೊಂಡು, ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಬಜೆಟ್ ಮಂಡನೆಗೆ ಸಿಎಂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಅವಕಾಶಕ್ಕಾಗಿ ಎಲ್ಲರೂ ಕಾಯಬೇಕು, ಸಿಎಂಗೆ ಅವಕಾಶ ಸಿಕ್ಕಾಗ ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ಜನಾಂಗಕ್ಕೆ ಆರ್ಶೀವಾದ ಮಾಡ್ತಾರೆ ಎಂಬ ಭರವಸೆ ನಮಗಿದೆ. ತುಂಬಾ ಕಷ್ಟಪಟ್ಟು ಯಡಿಯೂರಪ್ಪನವರು ಸರ್ಕಾರ ನಡೆಸುತ್ತಿದ್ದಾರೆ. ಅವರಿಗೆ ನನ್ನ ಮೇಲೆ ತುಂಬಾ ಪ್ರೀತಿ ಇದೆ. ಅವಕಾಶ ಸಿಕ್ಕಾಗ ಸಿಎಂ ಯಡಿಯೂರಪ್ಪನವರು ಸರಿಪಡಿಸುವ ಕೆಲಸ ಮಾಡುತ್ತಾರೆ ಎಂದು ಹೇಳಿದರು.
ಇದೇ ವೇಳೆ ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೆ ಕೆಲವರ ಅಸಮಾಧಾನ ವ್ಯಕ್ತಪಡಿಸಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಹಲವು ಹಿರಿಯ ಶಾಸಕರು ಸಚಿವರಾಗಬೇಕೆಂಬ ಆಶಯ ವ್ಯಕ್ತಪಡಿಸಿದ್ದಾರೆ. ಸಿಎಂ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅವಕಾಶ ಸಿಕ್ಕಾಗ ಎಲ್ಲರಿಗೂ ಅವಕಾಶ ಮಾಡಿಕೊಡುವ ಕೆಲಸ ಮಾಡುತ್ತಾರೆ ಎಂದರು.
ಕನ್ನಡಗರಿಗೆ ಉದ್ಯೋಗ ಮೀಸಲು ಜಾರಿಗೆ ಸಿದ್ಧತೆ ವಿಚಾರ-ಚರ್ಚೆ ಹಂತದಲ್ಲಿದೆ ಬಳ್ಳಾರಿಗೆ ಆನಂದ್ ಸಿಂಗ್ ಉಸ್ತುವಾರಿ ಸಚಿವರಾಗಿ ನೇಮಕ ಸಂಬಂಧ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿಯಲ್ಲಿ ನಾನು ಒಬ್ಬ ಸಾಮಾನ್ಯ ಕಾರ್ಯಕರ್ತ, ಬಿಜೆಪಿ ಯಲ್ಲಿ ನಾನು ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಸಿಎಂ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ. ಸಿಎಂ ಗೆ ಯಾವುದು ಸರಿ, ಯಾವುದೇ ತಪ್ಪು ಅನ್ನೋದು ತಿಳಿದಿದೆ, ಸಿಎಂ ಯಡಿಯೂರಪ್ಪ ಏನೇ ತೀರ್ಮಾನ ತೆಗೆದುಕೊಂಡ್ರು ನಾವು ಬದ್ಧರಾಗಿರುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ ಕನ್ನಡಗರಿಗೆ ಉದ್ಯೋಗ ಮೀಸಲು ಜಾರಿಗೆ ಸಿದ್ಧತೆ ವಿಚಾರವಾಗಿ ಮಾತಾನಾಡಿ ಇದು ಚರ್ಚೆ ಹಂತದಲ್ಲಿದೆ, ಮುಖ್ಯಮಂತ್ರಿಗಳು ಶ್ರೀಘ್ರದಲ್ಲೇ ತೀರ್ಮಾನ ಮಾಡ್ತಾರೆ ಎಂದರು.
Click this button or press Ctrl+G to toggle between Kannada and English