- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಇಡ್ಯಾ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ : ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಂಡು ಹಿಂದಿರುಗಿದರೆ ನಮ್ಮ ಜೀವನದಲ್ಲಿ ನಿತ್ಯೋತ್ಸವ; ಪೇಜಾವರ ಶ್ರೀ

sri [1]
ಸುರತ್ಕಲ್ ‌: ಇಡ್ಯಾ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ನಾಗಮಂಡಲೋತ್ಸವವು 07.02.2020 ರಂದು ಶುಕ್ರವಾರದಂದು ನಡೆದಿದೆ.

ದೇವರನ್ನು ಹೃದಯದಲ್ಲಿ ಪ್ರತಿಷ್ಠಾಪಿಸಿಕೊಂಡು ನಾವು ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಂಡು ಹಿಂದಿರುಗಿದರೆ ನಮ್ಮ ಜೀವನದಲ್ಲಿ ನಿತ್ಯೋತ್ಸವವೇ ತುಂಬಿರುತ್ತದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು. ಮತ್ತು ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಬ್ರಹ್ಮಕಲಶೋತ್ಸವದಿಂದ ಒಂದು ದೇವಸ್ಥಾನ ಮಾತ್ರವಲ್ಲದೆ ಗ್ರಾಮವಿಡೀ ಕಳೆಗಟ್ಟುತ್ತದೆ; ಅಭಿವೃದ್ಧಿಯಾಗುತ್ತದೆ ಎಂದರು.

sri [2]

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಶಾಸಕ ಡಾ| ಭರತ್‌ ಶೆಟ್ಟಿ ವೈ. ಶುಭ ಹಾರೈಸಿದರು. ಕಟೀಲು ಕ್ಷೇತ್ರದ ವೇ|ಮೂ| ಲಕ್ಷ್ಮೀನಾರಾಯಣ ಆಸ್ರಣ್ಣ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪಂಜ ಭಾಸ್ಕರ ಭಟ್‌ ಉಪನ್ಯಾಸ ನೀಡಿದರು. ಬಿಎಎಸ್‌ಎಫ್‌ನ ಸೈಟ್‌ ಡೈರೆಕ್ಟರ್‌ ಶ್ರೀನಿವಾಸ್‌ ಪ್ರಾಣೇಶ್‌, ಮೂಲ್ಕಿ ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಅರವಿಂದ ಪೂಂಜಾ, ಯಕ್ಷ ಧ್ರುವ ಫೌಂಡೇಶನ್‌ ಅಧ್ಯಕ್ಷ ಪಟ್ಲ ಸತೀಶ್‌ ಶೆಟ್ಟಿ, ಉದಯಕೃಷ್ಣ ಶೆಟ್ಟಿ ಚಾರಿಟೆಬಲ್‌ ಟ್ರಸ್ಟ್‌ ಅಧ್ಯಕ್ಷ ಮುನಿಯಾಲು ಉದಯಕುಮಾರ್‌ ಶೆಟ್ಟಿ, ಉದ್ಯಮಿಗಳಾದ ಪಿ.ಪಿ. ಶೆಟ್ಟಿ, ಜೆ.ಡಿ ವೀರಪ್ಪ, ರಘುನಾಥ ಸೋಮಯಾಜಿ, ಕೂಟ ಮಹಾಜಗತ್ತಿನ ಉಪಾಧ್ಯಕ್ಷ ಪ್ರಕಾಶ ಕಾರಂತ, ಸಿವಿಲ್‌ ಗುತ್ತಿಗೆದಾರ ಗೋಪಾಲಕೃಷ್ಣ ಇಡ್ಯಾ, ಮನಪಾ ಸದಸ್ಯೆ ನಯನಾ ಆರ್‌.ಕೋಟ್ಯಾನ್‌, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ, ಗೌರವಾಧ್ಯಕ್ಷರಾದ ಐ.ಕೆ. ನಾರಾಯಣ ರಾವ್‌, ದೊಂಬಯ್ಯ ಗುರಿಕಾರ, ಉದಯಶಂಕರ್‌ ಭಟ್‌,ಗೋಪಾಲಕೃಷ್ಣ ಇಡ್ಯಾ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಅಗರಿ ರಾಘವೇಂದ್ರ ರಾವ್‌, ಸತ್ಯಜಿತ್‌ ಸುರತ್ಕಲ್‌, ಟಿ.ಎನ್‌. ರಮೇಶ್‌, ಪ್ರಧಾನ ಸಂಚಾಲಕ ಅಣ್ಣಪ್ಪ ದೇವಾಡಿಗ ಉಪಸ್ಥಿತರಿದ್ದರು.

idya [3]

ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಐ. ರಮಾನಂದ ಭಟ್‌ ಪ್ರಸ್ತಾವನೆಗೈದರು. ಸಂತೋಷ್‌ ಕುಮಾರ್‌ ಶೆಟ್ಟಿ ಸ್ವಾಗತಿಸಿದರು. ಮಹೇಶ್‌ ಮೂರ್ತಿ ಸುರತ್ಕಲ್‌ ಮತ್ತು ಗುಣವತಿ ರಮೇಶ್‌ ನಿರೂಪಿಸಿದರು. ಕೃಷ್ಣಕುಮಾರ್‌ ಇಡ್ಯಾ ವಂದಿಸಿದರು.

 Agari [4]

BottomBharth [5]

BottomMahabala [6]

BottomMayya [7]