- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಹೈಟೆಕ್ ರೀತಿಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಾಲ್ವರು ಆರೋಪಿಗಳ ಬಂಧನ

hightek [1]

ಬೆಂಗಳೂರು : ನಗರದಲ್ಲಿ ಹೈಟೆಕ್ ರೀತಿಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕುಮಾರ್, ಭರತ್ ಕುಮಾರ್, ರಘು ಹಾಗೂ ಪ್ರಜ್ವಲ್ ಬಂಧಿತ ಆರೋಪಿಗಳು. ಬಂಧಿತರೆಲ್ಲರೂ ಬೆಂಗಳೂರು ಮೂಲದವರಾಗಿದ್ದು, ಲೊಕೆಂಟೋ ವೆಬ್ ಸೈಟ್ ಮೂಲಕ ಹೈಟೆಕ್ ಮಾದರಿಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು.

ದಂಧೆಗೆ ಬಳಸಿಕೊಳ್ಳುವ ಹೆಣ್ಣು ಮಕ್ಕಳನ್ನು ಮುಂಬೈ ಸೇರಿದಂತೆ ದೇಶದ ವಿವಿಧ ನಗರಗಳಿಂದ ಕೆಲಸ ಕೊಡಿಸುವುದಾಗಿ ನಂಬಿಸಿ‌ ಕರೆ ತರುತ್ತಿದ್ದರು. ಬಳಿಕ‌ ಇವರ ಫೊಟೋಗಳನ್ನು ಆನ್ ಲೈನ್ ಮುಖಾಂತರ ಕಳುಹಿಸಿ ಗ್ರಾಹಕರನ್ನು‌ ಆಕರ್ಷಿಸಿ, ಪ್ರತಿ ಗ್ರಾಹಕರಿಂದ 15ರಿಂದ 20 ಸಾವಿರ ರೂ. ಪಡೆಯುತ್ತಿದ್ದರು. ಕಳೆದ 10 ವರ್ಷಗಳಿಂದ ಈ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ಸದ್ಯ ದಾಳಿ ಮಾಡಿದ ಸಿಸಿಬಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.