ಮಂಗಳೂರು : ಪಶ್ವಿಮವಾಹಿನಿ ಯೋಜನೆ ಕರಾವಳಿ ಜಿಲ್ಲೆಗಳಲ್ಲಿ ಹರಿಯುತ್ತಿರುವ 13 ನದಿಗಳಿಂದ ಸಮುದ್ರಕ್ಕೆ ಸುಮಾರು 2000 ಟಿ.ಎಂ.ಸಿ ಯಷ್ಟು ನೀರು ಪೋಲಾಗುವುದನ್ನು ತಪ್ಪಿಸಿ ಸದ್ಬಳಕೆ ಮಾಡಿಕೊಳ್ಳಲು ಅನುಕೂಲವಾಗುವಂತಹ ಯೋಜನೆಗಾಗಿ 2010-11 ನೇ ಸಾಲಿನ ಅಯವ್ಯಯದಲ್ಲಿ ಅನುಷ್ಠಾನಗೊಳಿಸುಲು ಕೇಂದ್ರ ಸರಕಾರಕ್ಕೆ ವಿಶೇಷ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಮಂಗಳೂರು ಶಾಸಕ ಯೊಗೀಶ್ ಭಟ್ ಇಂದು ನರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಗೆ ತಿಳಿಸಿದರು.
ಕರಾವಳಿ ಜಿಲ್ಲೆಗಳಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಗೆ ಅಡ್ಡಲಾಗಿ ಅಲ್ಲಲ್ಲಿ ಹೊಸ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿ ನೀರಾವರಿ ಸೌಲಭ್ಯವನ್ನು ಕಲ್ಪಿಸುವ ಪಶ್ಚಿಮವಾಹಿನಿ ಯೋಜನೆ ಪ್ರಸ್ತಾವನೆಯನ್ನು ರೂ 295.00 ಕೋಟಿ ಮೊತ್ತಕ್ಕೆ ಅನುಮೋದನೆಗಾಗಿ ಕೇಂದ್ರ ಜಲ ಅಯೋಗದಿಂದ ಅನುಮೋದನೆ ಮತ್ತು ಧನ ಸಹಾಯವನ್ನು ದೊರಕಿಸಿಕೊಡುವಂತೆ ವಿನಂತಿಸಲಾಗಿದೆ ಎಂದು ಅವರು ತಿಳಿಸಿದರು.
ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪಶ್ಚಿಮಾಭಿಮುಖವಾಗಿ ಹರಿದು ಅರಬೀ ಸಮುದ್ರವನ್ನು ಸೇರುವ ನದಿ ಪಾತ್ರಗಳಲ್ಲಿ ಬಳಸಿಕೊಳ್ಳಬಹುದಾದ ನೀರಿನ ಪ್ರಮಾಣವು 1240 ಟಿ.ಎಮ.ಸಿ ಗಳಾಗಿರುತ್ತದೆ. ಈ ಎರಡು ಜಿಲ್ಲೆಗಳಲ್ಲಿ ಹರಿಯುವ ನದಿಗಳಲ್ಲಿ ಜೂನ್ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೆ ಅಂದರೆ ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಲಭ್ಯವಾಗುತ್ತಿದ್ದು, ಈ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಬೃಹತ್ ಮತ್ತು ಮಧ್ಯಮ ಅಣೆಕಟ್ಟುಗಳನ್ನು ನಿರ್ಮಿಸಿಸುವುದು ಅವಶ್ಯಕವಾಗಿರುತ್ತದೆ.
ಮಳಿಗಾಲದಲ್ಲಿ ಹರಿಯುವ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಬೃಹತ್ ಮತ್ತು ಮಧ್ಯಮ ಅಣೆಕಟ್ಟುಗಳನ್ನು ನಿಮರ್ಿಸಲು ಈ ಎರಡು ಜಿಲ್ಲೆಗಳಲ್ಲಿ ಸೂಕ್ತವಾದ ಸ್ಥಳಗಳು ದೊರೆಯದ ಕಾರಣ ಶೇಕಡಾ 30 ರಷ್ಟು ನೀರನ್ನು ಮಾತ್ರ ಸದ್ಬಳಕೆ ಮಾಡಿಕೊಳ್ಳಬಹುದಾಗಿರುತ್ತದೆ. ಉಳಿಕೆ ನೀರು ವೃರ್ಥವಾಗಿ ಸಮುದ್ರವನ್ನು ಸೇರುತ್ತದೆ. ದ,ಕ ಮತ್ತು ಉಡುಪಿ ಜಿಲ್ಲೆ ಶಾಸಕರುಗಳು ಹಾಗೂ ಮಾನ್ಯ ಮಂತ್ರಿಗಳ ಒತ್ತಾಯದ ಮೇರೆಗೆ ದ.ಕ ಜಿಲ್ಲೆ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹರಿಯುವ ನದಿಗಳಲ್ಲಿನ ನೀರನ್ನು ಸಾಧ್ಯವಾದಷ್ಟು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ 463 ಕಿಂಡಿ ಅಣೆಕಟ್ಟುಗಳು ಹಾಗೂ 15 ಉಪ್ಪು ನೀರು ತಡೆ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲು ಯೋಜನಾ ವರದಿಯನ್ನು ತಯಾರಿಸಲಾಗಿದೆ. ಸದರಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸುವುದರಿಂದ ಹೆಚ್ಚುವರಿಯಾಗಿ ಸುಮಾರು 4.61 ಟಿ.ಎಂ.ಸಿ ನೀರನ್ನು ಉಪಯೋಗಿಸಿಕೊಳ್ಳಬಹುದಾಗಿರುತ್ತದೆ. ಹಾಗೂ 12412.92 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ವನ್ನು ಕಲ್ಪಿಸಬಹುದಾಗಿರುತ್ತದೆ ಎಂದು ಭಟ್ ತಿಳಿಸಿದರು.
ದ.ಕ ಜಿಲ್ಲೆ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಗೆ ಅಡ್ಡವಾಗಿ ಕಿಂಡಿ ಅಣೆಕಟ್ಟುಗಳು ಮತ್ತು ಉಪ್ಪು ನೀರು ತಡೆ ಕಿಂಡಿ ಅಣೆಕಟ್ಟು ನಿರ್ಮಿಸಿಸುವ ಒಂದು ವಿವರಾದ ಯೋಜನೆಯನ್ನು ರೂ 374.56 ಕೋಟಿಗಳಿಗೆ ತಯಾರಿಸಿದ್ದು, ಸದರಿ ಯೋಜನೆಗೆ ಕೇಂದ್ರ ಸರಕಾರದ ಯಾವುದಾದರೂ ಯೋಜನೆಗಳಿಂದ ವಿಶೇಷ ಅನುದಾನ ದೊರಕಿಸಿಕೊಡುವಂತೆ ಕೇಂದ್ರ ಸರಕಾರವನ್ನು ವಿನಂತಿಸಿಕೊಳ್ಳಲಾಗಿದೆ ಎಂದು ತಳಿಸಿದರು
Click this button or press Ctrl+G to toggle between Kannada and English