- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪ್ರೀತಿಯ ಕೋತಿಗಾಗಿ ದೇವಸ್ಥಾನ ನಿರ್ಮಾಣ ಮಾಡಿದ ಮಾಜಿ ಸಚಿವ ಸಾರಾ ಮಹೇಶ್

sa-ra-mahesh [1]

ಮೈಸೂರು : ನಮ್ಮ ಪ್ರೀತಿ ಪಾತ್ರವಾಗಿದ್ದ ಯಾರೇ ಅಥವಾ ಪ್ರಾಣಿಗಳೇ ಅಗಲಿ ನಮ್ಮನ್ನು ಅಗಲಿದರೆ ತುಂಬಾ ದುಃಖವಾಗುತ್ತೆ. ಈ ದುಖಃ ವು ವರುಷಗಳ ತನಕ ಇದ್ದೇ ಇರುತ್ತದೆ . ನಮ್ಮ ಪ್ರೀತಿ ಪಾತ್ರ ಪ್ರಾಣಿಗಳನ್ನು ನಾವು ನಮ್ಮ ಒಡಹುಟ್ಟಿವೆ ಎಂದೇ ಭಾವಿಸಿಕೊಂಡಿರುತ್ತೇವೆ. . ಇದೇ ರೀತಿಯ ಪ್ರೀತಿಯಲ್ಲಿ ಅಗಲಿದ ತಮ್ಮ ಪ್ರೀತಿಯ ಕೋತಿಗಾಗಿ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ ಮಾಜಿ ಸಚಿವ ಸಾರಾ ಮಹೇಶ್. ಅವರು.

sa-ra-mahesh [2]

ತಾವು ಅತ್ಯಂತ ಪ್ರೀತಿಯಿಂದ ನೋಡಿಕೊಳ್ತಿದ್ದ ಕೋತಿ ಮರಿ ಚಿಂಟು ನೆನಪಿಗಾಗಿ ಮೈಸೂರಿನ ದಟ್ಟಗಳ್ಳಿಯಲ್ಲಿರುವ ಸಾರಾ ಅವರ ಫಾರ್ಮ್‌ ಹೌಸ್ನಲ್ಲಿ ಸುಮಾರು 20ಲಕ್ಷ ವೆಚ್ಚದಲ್ಲಿ ದೇವಾಲಯ ನಿರ್ಮಾಣ ಮಾಡಲಾಗಿದೆ. ವಿಶೇಷ ಎಂದರೆ ಕುರಿ ಮರಿಯ ಮೇಲೆ ಚಿಂಟು ಕುಳಿತಿದ್ದ ಫೋಟೋವೊಂದರ ಆಧಾರದ ಮೇಲೆ ಚಿಂಟುವಿನ ಏಕಶಿಲಾ ಸ್ಮಾರಕವನ್ನ ತಯಾರು ಮಾಡಲಾಗಿದ್ದು ಅದನ್ನೇ ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಲಿದ್ದಾರೆ.

sa-ra-mahesh [3]

ಇಂಟ್ರೆಸ್ಟಿಂಗ್‌ ವಿಚಾರ ಅಂದ್ರೆ ಚಿಂಟು ಜೊತೆ ಆತ್ಮೀಯ ಬಾಂಧವ್ಯಹೊಂದಿದ್ದ ಶಾಸಕ ಸಾರಾ ಮಹೇಶ್, ಜನವರಿ 1ರಂದು ಚಿಂಟು ಮೃತಪಟ್ಟ ಸುದ್ದಿ ತಿಳೀತಿದ್ದಂತೆ ವಿದೇಶ ಪ್ರವಾಸ ಮೊಟಕುಗೊಳಿಸಿ ತವರಿಗೆ ಓಡಿ ಬಂದಿದ್ದರು. ಅಂತ್ಯಕ್ರಿಯೆ ನೇರವೇರಿಸಿದ್ರು. ಅಲ್ಲದೆ ಜನವರಿ 11ರಂದು‌ ಶಾಸ್ತ್ರೋಕ್ತವಾಗಿ ಚಿಂಟುವಿನ ತಿಥಿಯನ್ನು ಕೂಡ ನೆರವೇರಿಸಿದ್ದರು.

sa-ra-mahesh [4]

ಜನವರಿ 1ರಂದು ತೋಟದಲ್ಲಿ ವಿದ್ಯುತ್ ತಂತಿ ತಗುಲಿ ಸಾರಾ ಅವರ ಪ್ರೀತಿಯ ಕೋತಿ ಚಿಂಟು ಸಾವನ್ನಪ್ಪಿತ್ತು. ಇನ್ನು ಮೇಕೆ ಎರಡುತಿಂಗಳ ಹಿಂದೆಯೇ ಸಾವನ್ನಪ್ಪಿತ್ತು. ಇವೆರಡರ ಸ್ನೇಹ ತುಂಬಾನೇ ಚೆನ್ನಾಗತ್ತು. ಹೀಗಾಗಿ ಕುರಿ ಮೇಲೆ ಕೋತಿ ಕೂತಿರುವಂತೆ ಶಿಲ್ಪ ನಿರ್ಮಾಣ ಮಾಡಲಾಗಿದೆ. ಮೈಸೂರಿನ ಬ್ರಹ್ಮಕಶ್ಯಪ ಶಿಲ್ಪಕಲಾನಿಕೇತನದಲ್ಲಿ ಸುಮಾರು 2.5 ಅಡಿ ಎತ್ತರದ ಏಕಶಿಲೆಯಲ್ಲಿ ಪ್ರತಿಮೆ ಕೆತ್ತನೆ ಮಾಡಲಾಗಿದೆ.

sa-ra-mahesh [5]

‌ಚಿಂಟುವನ್ನ ಅಂತ್ಯಕ್ರಿಯೆ ಮಾಡಿದ ಸ್ಥಳದಲ್ಲಿಯೇ ದೇವಾಲಯ ತಲೆ ಎತ್ತಿದ್ದು ಭಾನುವಾರ ದೇವಾಲಯ ಲೋಕಾರ್ಪಣೆಗೊಂಡಿದೆ. ಈ ದೇವಾಲಯ ನಿರ್ಮಾಣದ ಮೂಲಕ ತಮ್ಮ ದುಖಃ ಮರೆಯುತ್ತಿದ್ದಾರೆ ಮಹೇಶ್‌ ಅವರು.

ಕೋವರ್ ಕೊಲ್ಲಿ ಇಂದ್ರೇಶ್

sa-ra-mahesh [6]