- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಜಿತೇಂದರ್​ಗೆ ಬೆಳ್ಳಿ ಪದಕ : ಏಷ್ಯನ್ ಕುಸ್ತಿಯಲ್ಲಿ ದೀಪಕ್ ಪೂನಿಯಾ, ರಾಹುಲ್ ಅವಾರೆಗೆ ಕಂಚು ಪದಕ

jithendar [1]

ನವದೆಹಲಿ : ಭಾರತ ತಂಡ ಏಷ್ಯನ್ ಕುಸ್ತಿ ಚಾಂಪಿಯನ್ಷಿಪ್ನ ಅಂತಿಮ ದಿನ ಸ್ವರ್ಣ ಪದಕ ಗೆಲ್ಲುವಲ್ಲಿ ವಿಫಲವಾಯಿತು. 74 ಕೆಜಿ ವಿಭಾಗದಲ್ಲಿ ಫೈನಲ್ಗೇರಿದ್ದ ಜಿತೇಂದರ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರೆ, ವಿಶ್ವ ಚಾಂಪಿಯನ್ಷಿಪ್ ಬೆಳ್ಳಿ ವಪಕದ ವಿಜೇತ ದೀಪಕ್ ಪೂನಿಯಾ ಹಾಗೂ ರಾಹುಲ್ ಅವಾರೆ ಕಂಚಿನ ಪದಕ ಜಯಿಸಿದರು. ಇದರಿಂದಾಗಿ ಭಾರತ ಕೂಟದಲ್ಲಿ 5 ಚಿನ್ನ, 6 ಬೆಳ್ಳಿ, 8 ಕಂಚಿನೊಂದಿಗೆ 19 ಪದಕ ಜಯಿಸಿ ಮೂರನೇ ಸ್ಥಾನಿಯಾಗಿ ಕೂಟ ಮುಗಿಸಿತು.

ಭಾನುವಾರ ನಡೆದ ಪುರುಷರ ಫ್ರೀಸ್ಟೈಲ್ನ 74 ಕೆಜಿ ವಿಭಾಗದ ಫೈನಲ್ನಲ್ಲಿ ಜಿತೇಂದರ್ 2-3 ರಿಂ ಕಜಾಕಿಸ್ತಾನದ ಡಾನಿಯರ್ ಕೈಸಾನೋವ್ಗೆ ಶರಣಾದರು. ಅದರೊಂದಿಗೆ ರ್ಕಿಗಿಸ್ತಾನದಲ್ಲಿ ನಡೆಯಲಿರುವ ಒಲಿಂಪಿಕ್ ಅರ್ಹತಾ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಯಶ ಕಂಡರು.

ಇನ್ನೊಂದೆಡೆ ಸ್ವರ್ಣ ಗೆಲ್ಲುವ ಫೇವರಿಟ್ ಗಳಾಗಿದ್ದ ರಾಹುಲ್ ಅವಾರೆ ಹಾಗೂ ದೀಪಕ್ ಪೂನಿಯಾ ಸೆಮಿಫೈನಲ್ ಹಂತದಲ್ಲಿಯೇ ಸೋಲು ಕಂಡು ನಿರಾಸೆ ಎದುರಿಸಿದ್ದರು. 86 ಕೆಜಿ ವಿಭಾಗದ ಕಂಚಿನ ಪದಕದ ಹೋರಾಟದಲ್ಲಿ ದೀಪಕ್ ಪೂನಿಯಾ 10-0ಯಿಂದ ಇರಾಕ್ನ ಅಲ್ ಒಬೈದಿಯನ್ನು ಮಣಿಸಿದರೆ, 61 ಕೆಜಿ ವಿಭಾಗದ ಕಂಚಿನ ಪದಕದ ಹೋರಾಟದಲ್ಲಿ ರಾಹುಲ್ ಅವಾರೆ 5-2 ರಿಂದ ಇರಾನ್ನ ಮಜೀದ್ ಅಲ್ಮಾಸ್ರನ್ನು ಸೋಲಿಸಿದರು.