ವರುಣನ ಆರ್ಭಟದಿಂದ ಪಂದ್ಯ ರದ್ದು : ಫೈನಲ್ ಗೇರಿದ ಭಾರತ ವನಿತೆಯರ ತಂಡ

2:12 PM, Thursday, March 5th, 2020
Share
1 Star2 Stars3 Stars4 Stars5 Stars
(No Ratings Yet)
Loading...

cricket

ಸಿಡ್ನಿ : ಭಾರತ-ಇಂಗ್ಲೆಡ್ ವನಿತಾ ತಂಡಗಳ ನಡುವಿನ ಬಹುನಿರೀಕ್ಷಿತ ಟಿ-20 ಸೆಮಿಫೈನಲ್ ಪಂದ್ಯ ಯಾವುದೇ ಎಸೆತವನ್ನು ಕಾಣದೆ ಮಳೆಯಿಂದ ರದ್ದಾಗಿದೆ. ಹೀಗಾಗಿ ಲೀಗ್ ನಲ್ಲಿ ಅತೀ ಹೆಚ್ಚು ಪಂದ್ಯ ಗೆದ್ದ ಭಾರತ ಫೈನಲ್ ಗೇರಿದೆ.

ಲೀಗ್ ನಲ್ಲಿ ನಡೆದ ಎಲ್ಲಾ ನಾಲ್ಕು ಪಂದ್ಯವನ್ನು ಗೆದ್ದ ಭಾರತ ಅಜೇಯವಾಗಿ ಫೈನಲ್ ಗೇರಿದ ಸಾಧನೆ ಮಾಡಿದೆ. ಮೊದಲ ಪಂದ್ಯ ಸೋತರೂ ನಂತರದ ಪಂದ್ಯಗಳನ್ನು ಗೆದ್ದಿರುವ ಇಂಗ್ಲೆಂಡ್ ಮಳೆಯ ಕಾರಣದಿಂದ ಸರಣಿಯಿಂದ ಹೊರಬಿದ್ದಿದೆ.

ಎರಡನೇ ಸೆಮಿ ಫೈನಲ್ ಪಂದ್ಯ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಸ್ಥಳೀಯ ಕಾಲಾಮಾನ ರಾತ್ರಿ 7 ಗಂಟೆಗೆ ನಡೆಯಲಿದ್ದು ಈ ಪಂದ್ಯಕ್ಕೂ ವರುಣರಾಯ ಅಡ್ಡಿಯಾಗುವ ಸಾಧ್ಯತೆ ಇದೆ. ಒಂದೆ ವೇಳೆ ಪಂದ್ಯ ರದ್ದಾರೆ ಅತೀ ಹೆಚ್ಚು ಪಂದ್ಯ ಗೆದ್ದ ದಕ್ಷಿಣ ಆಫ್ರಿಕಾ ನೇರವಾಗಿ ಪೈನಲ್ ಪ್ರವೇಶಿಸಲಿದೆ.

ಫೈನಲ್ ಪಂದ್ಯ ಭಾನುವಾರ ಮೆಲ್ಬರ್ನ್ ನಲ್ಲಿ ನಡೆಯಲಿದೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English