- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನಕಲಿ ಪಾಸ್‌ಪೋರ್ಟ್ ‌: ಬ್ರೆಜಿಲ್‌ನ ಖ್ಯಾತ ಫ‌ುಟ್‌ಬಾಲ್‌ ತಾರೆ ರೊನಾಲ್ಡಿನೊ ಬಂಧನ

brezil [1]

ರಿಯೋ ಡಿ ಜನೈರೊ : ನಕಲಿ ಪಾಸ್‌ಪೋರ್ಟ್‌ ಬಳಸಿದ ಪ್ರಕರಣದಲ್ಲಿ ಬ್ರೆಜಿಲ್‌ನ ಖ್ಯಾತ ಫ‌ುಟ್‌ಬಾಲ್‌ ತಾರೆ ರೊನಾಲ್ಡಿನೊ ಹಾಗೂ ಅವರ ಸಹೋದರ ರೊಬೆರ್ಟೊ ಆಸ್ಸಿಸ್‌ ಅವರನ್ನು ಪೆರುಗ್ವೆಯಲ್ಲಿ ಬಂಧಿಸಲಾಗಿದೆ.

39 ವರ್ಷದ ರೊನಾಲ್ಡಿನೊ ಹಾಗೂ ಅವರ ಸಹೋದರನನ್ನು ಪೆರುಗ್ವೆಯ ಯಾಚ್‌ ರೆಸಾರ್ಟ್‌ನ ಕೊಠಡಿಯಲ್ಲಿ ಪೊಲೀಸರು ಹಠಾತ್‌ ದಾಳಿ ನಡೆಸಿ ಬಂಧಿಸಿದರು.

“ರೊನಾಲ್ಡಿನೊ ಕ್ರೀಡಾಪಟು, ಅವರನ್ನು ಗೌರವಿಸುತ್ತೇನೆ, ಆದರೆ ನಕಲಿ ಪಾಸ್‌ಪೋರ್ಟ್‌ ಹೊಂದಿರುವುದು ಕ್ರಿಮಿನಲ್‌ ಪ್ರಕರಣವಾಗಿದೆ. ಈ ಹಿನ್ನೆಲೆಯಲ್ಲಿ ಯಾರೇ ಆಗಿದ್ದರೂ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಪೆರುಗ್ವೆ ಆಂತರಿಕ ಸಚಿವ ಎಸ್ವೆಡೊ ತಿಳಿಸಿದ್ದಾರೆ.