ಭೋಪಾಲ್ : ಪಕ್ಷ ತೊರೆದಿರುವ ಮಾಜಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಸಿಂಧಿಯಾ ನಡೆಯನ್ನು, ಹಲವರು ಬೆಂಬಲಿಸಿದರೆ ಇನ್ನೂ ಕೆಲವರು ಟೀಕಿಸಿದ್ದಾರೆ. ಸಿಂಧಿಯಾ ಅವರ ಎರಡನೇ ರಾಜಕೀಯ ಇನ್ನಿಂಗ್ಸ್ ಹೇಗಿರುತ್ತದೆ ಎಂಬುದನ್ನು ಕಾದು ನೋಡಲು ಪರ-ವಿರೋಧಿಗಳೂ ಕಾತರದಿಂದ ಕಾಯುತ್ತಿದ್ದಾರೆ.
ಈ ಮಧ್ಯೆ ತಮ್ಮ ತಂದೆಯ ನಿರ್ಧಾರಕ್ಕೆ ಬೆಂಬಲ ಸೂಚಿಸಿರುವ ಜ್ಯೋತಿರಾದಿತ್ಯ ಸಿಂಧಿಯಾ ಪುತ್ರ ಮಹಾನಾರ್ಯಮನ್ ಸಿಂಧಿಯಾ, ತಂದೆಯ ನಿರ್ಧಾರದ ಕುರಿತು ಹೆಮ್ಮೆಯಿದೆ ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಹಾನಾರ್ಯಮನ್ ಸಿಂಧಿಯಾ, ತಂದೆಯ ದೃಢ ನಿರ್ಧಾರಕ್ಕೆ ಹೆಮ್ಮೆಯ ಅನುಭವವಾಗುತ್ತಿದೆ ಎಂದು ಹೇಳಿದ್ದಾರೆ. ಒಂದು ಸುದೀರ್ಘ ರಾಜಕೀಯ ನಂಟನ್ನು ಕಳಚಿಕೊಳ್ಳಲೂ ಧೈರ್ಯದ ಪ್ರದರ್ಶನ ಅನಿವಾರ್ಯ. ಇಂತಹ ಧೈರ್ಯದ ಪ್ರದರ್ಶನ ತೋರಿದ ನಮ್ಮ ತಂದೆಯ ಮೇಲೆ ಹೆಮ್ಮೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನಮ್ಮ ಕುಟುಂಬ ಎಂದಿಗೂ ಅಧಿಕಾರ ರಾಜಕಾರಕ್ಕೆ ಆಸೆ ಪಟ್ಟಿಲ್ಲ. ಮಧ್ಯಪ್ರದೇಶ ಹಾಗೂ ದೇಶದ ಜನತೆಯ ಸೇವೆಯ ಕನ್ನಸನ್ನು ಹೊತ್ತುಕೊಂಡೇ ನಮ್ಮ ಕುಟುಂಬ ಮುನ್ನಡೆಯುತ್ತಿದೆ. ತಂದೆ ಅವರ ಎರಡನೇ ರಾಜಕೀಯ ಇನ್ನಿಂಗ್ಸ್ ಖಂಡಿತವಾಗಿಗೂ ಮಧ್ಯಪ್ರದೇಶ ಹಾಗೂ ದೇಶದ ಒಳಿತಿಗಾಗಿ ಇರಲಿದೆ ಎಂದು ಮಹಾನಾರ್ಯಮನ್ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಮೇಲೆ ಮುನಿಸಿಕೊಂಡಿರುವ ಸಿಂಧಿಯಾ ನಿನ್ನೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿ ಸೇರಿ ಕೇಂದ್ರ ಸಂಪುಟದಲ್ಲಿ ಸೇರ್ಪಡೆಗೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ.
Click this button or press Ctrl+G to toggle between Kannada and English