ಮುಂಬೈ : ವಿಶ್ವದಾಖಲೆಗಳ ಮೇಲೆ ವಿಶ್ವದಾಖಲೆ ನಿರ್ಮಿಸಿ ಸಚಿನ್ ತೆಂಡುಲ್ಕರ್ ಅವರ ಎಲ್ಲ ದಾಖಲೆಗಳನ್ನು ನಿರ್ನಾಮ ಮಾಡುತ್ತಿರುವ ವಿರಾಟ್ ಕೊಹ್ಲಿ, ಹೊಸತೊಂದು ವಿಶ್ವದಾಖಲೆ ನಿರ್ಮಿಸಲು ತುದಿಗಾಲಲ್ಲಿ ನಿಂತಿದ್ದಾರೆ.
ಇನ್ನು 133 ರನ್ ಬಾರಿಸಿದರೆ, ಅತ್ಯಂತ ಕಡಿಮೆ ಇನಿಂಗ್ಸ್‌ಗಳಲ್ಲಿ ಏಕದಿನದಲ್ಲಿ 12,000 ರನ್ ಗಡಿಮುಟ್ಟಿದ ದಾಖಲೆ ಸಾಧಿಸಲಿದ್ದಾರೆ. ಸದ್ಯ ಅವರು 239 ಇನಿಂಗ್ಸ್ ಆಡಿದ್ದಾರೆ. ದ.ಆಫ್ರಿಕಾ ವಿರುದ್ಧ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಇಲ್ಲಿ ಅವರಿಗೆ 133 ರನ್ ಗಳಿಕೆ ಕಷ್ಟವಲ್ಲ ಎಂದು ಭಾವಿಸಲಾಗಿದೆ.
ಸಚಿನ್ ತೆಂಡುಲ್ಕರ್ 12,000 ರನ್ ಗಳಿಸುವಾಗ 300 ಇನಿಂಗ್ಸ್ ಆಡಿದ್ದರು. ಅವರಿಗಿಂತ ಬಹಳ ಮುನ್ನವೇ ಈ ಗಡಿಯನ್ನು ದಾಟಲಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ ಕೊಹ್ಲಿ ಸದ್ಯ ಅತ್ಯಂತ ಕಳಪೆ ಲಯದಲ್ಲಿದ್ದಾರೆ. ಹಿಂದಿನ ನ್ಯೂಜಿಲೆಂಡ್‌ನ ಇಡೀ ಪ್ರವಾಸದಲ್ಲಿ 218 ರನ್ ಮಾತ್ರ ಅವರ ಗಳಿಕೆ. ದ.ಆಫ್ರಿಕಾ ವಿರುದ್ಧ ಸಿಡಿದೆದ್ದು ಅವರು ಲಯದ ಸಮಸ್ಯೆಯನ್ನು ಸರಿಪಡಿಸಿಕೊಳ್ಳುವ ನಿರೀಕ್ಷೆಯಿದೆ.
Click this button or press Ctrl+G to toggle between Kannada and English