- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನಿರ್ಭಯಾ ಪ್ರಕರಣ : ನಾಲ್ವರು ಅಪರಾಧಿಗಳನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಬೆಳಿಗ್ಗೆ 5.30 ಕ್ಕೆ ಗಲ್ಲಿಗೇರಿಸಲಾಯಿತು

Nirbhaya [1]ನವದೆಹಲಿ: ಎಂಟು ವರ್ಷಗಳ ಹಿಂದೆ ಅಂದರೆ 2012ರ ಡಿಸೆಂಬರ್ 16ರಂದು ರಾಷ್ಟ್ರ ರಾಜಧಾನಿಯಲ್ಲಿ 23 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಚಲಿಸುತ್ತಿದ್ದ ಬಸ್ಸಿನಲ್ಲಿ ನಡೆದಿದ್ದ ಹೇಯ ಅತ್ಯಾಚಾರ ಮತ್ತು ಕ್ರೂರ ಕೊಲೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲದಲ್ಲಿ ಅಪರಾಧ ಸಾಬೀತುಗೊಂಡು ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ನಾಲ್ವರು ಅಪರಾಧಿಗಳನ್ನು ಇಂದು ಬೆಳಿಗ್ಗೆ 5.30 ಗಂಟೆಗೆ ದೆಹಲಿಯ ತಿಹಾರ್ ಜೈಲಿನಲ್ಲಿ ನೇಣಿಗೆ ಏರಿಸಲಾಗಿದೆ.

ಈ ಮೂಲಕ ಎಂಟು ವರ್ಷಗಳ ಹಿಂದೆ ರಾಷ್ಟ್ರ ರಾಜಧಾನಿಯನ್ನು ಮಾತ್ರವಲ್ಲದೇ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಈ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅಪರಾಧಿಗಳಾದ ಮುಖೇಶ್ ಸಿಂಗ್, ವಿನಯ್ ಶರ್ಮಾ, ಪವನ್ ಗುಪ್ತಾ ಹಾಗೂ ಅಕ್ಷಯ್ ಠಾಕೂರ್ ಅವರಿಗೆ ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಕಟಗೊಂಡ ಬರೋಬ್ಬರಿ ಏಳು ವರ್ಷಗಳ ಬಳಿಕ ಶಿಕ್ಷೆ ಜಾರಿಯಾದಂತಾಗಿದೆ. ಈ ಮೂಲಕ ದುರುಳರ ಅಟ್ಟಹಾಸಕ್ಕೆ ಬಲಿಯಾಗಿದ್ದ ‘ನಿರ್ಭಯಾ’ ಆತ್ಮಕ್ಕೆ ಕೊನೆಗೂ ಶಾಂತಿ ದೊರೆತಂತಾಗಿದೆ.

Nirbhaya [2]ಒಂದೇ ಪ್ರಕರಣದಲ್ಲಿ ತಮ್ಮ ಅಪರಾಧ ಸಾಬೀತುಗೊಂಡು ಗಲ್ಲು ಶಿಕ್ಷೆಗೆ ಗುರಿಯಾದ ನಾಲ್ವರು ಅಪರಾಧಿಗಳನ್ನು ಏಕಕಾಲದಲ್ಲಿ ಗಲ್ಲಿಗೇರಿಸುತ್ತಿರುವುದು ಸ್ವತಂತ್ರ ಭಾರತದ ಇತಿಹಾಸದಲ್ಲೇ ಪ್ರಥಮ ಪ್ರಕರಣ ಇದಾಗಿದೆ. ಇಷ್ಟು ಮಾತ್ರವಲ್ಲದೇ ದೇಶದ ಮಗಳೆಂದೇ ಕರೆಯಲ್ಪಡುತ್ತಿದ್ದ ‘ನಿರ್ಭಯಾ’ ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆಯಾಗುತ್ತಿರುವ ವಿಚಾರದಲ್ಲೂ ಈ ಪ್ರಕರಣ ದೇಶದ ನ್ಯಾಯಾಂಗ ಇತಿಹಾಸದಲ್ಲಿ ಪ್ರಮುಖವಾಗಿ ದಾಖಲಾಗಿದೆ.

ನವದೆಹಲಿ: ನಿರ್ಭಯಾ 1989 ರಲ್ಲಿ (ವಯಸ್ಸು 23 ವರ್ಷ; ಸಾವಿನ ಸಮಯದಲ್ಲಿ 2012 ರಂತೆ) ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಜನಿಸಿದರು.

ಅವರು ಭೌತಚಿಕಿತ್ಸೆಯಲ್ಲಿ ಪದವಿ ಪಡೆದರು. ಅವರ ತಂದೆಯ ಹೆಸರು ಬದ್ರಿನಾಥ್ ಸಿಂಗ್ ಮತ್ತು ಅವರ ತಾಯಿಯ ಹೆಸರು ಆಶಾ ದೇವಿ. ಅವಳು ಇಬ್ಬರು ಸಹೋದರರನ್ನು ಹೊಂದಿದ್ದಳು. ನಿರ್ಭಯ ನಿಜ ಹೆಸರು ಜ್ಯೋತಿ ಸಿಂಗ್.

ದಕ್ಷಿಣ ದೆಹಲಿಯ ಸಾಕೆತ್‌ನಲ್ಲಿ ಚಲನಚಿತ್ರ ನೋಡಿದ ನಂತರ ತನ್ನ ಗೆಳೆಯ ಅವಿಂದ್ರಾ ಪ್ರತಾಪ್ ಅವರೊಂದಿಗೆ ಮನೆಗೆ ಮರಳುತ್ತಿದ್ದಾಗ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಚಿತ್ರಹಿಂಸೆ ನೀಡ ಲಾಗಿತ್ತು.

Nirbhaya [3]

Nirbhaya [4]