- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಹಾಮಾರಿ ಕೊರೋನಾ ಬಗ್ಗೆ ಮೊಹನದಾಸ ಪರಮಹಂಸ ಸ್ವಾಮೀಜಿಯವರು ನೀಡಿದ ಸಂದೇಶ – ವಿಡಿಯೋ

Mohanadasa Swamiji [1]ಮಂಗಳೂರು : ಭಾರತದ ಮಹಾಜನತೆ ಮಹಾಮಾರಿ ಕೊರೋನಾದಿಂದ ತಪ್ಪಿಸಿಕೊಳ್ಳಲು ಅತೀ ಜಾಗರೂಕತೆ ವಹಿಸಿಕೊಳ್ಳುವುದು ಮುಖ್ಯ. ಚೀನಾದಲ್ಲಿ ಹುಟ್ಟಿದ ವೈರಸ್ ಈಗ ದೇಶ ವ್ಯಾಪಿಯಾಗಿ ಪಸರಿಸಿದೆ. ಭಾರತಕ್ಕೂ ಕಾಲಿಟ್ಟು ಸಾಮಾನ್ಯ ಜನರನ್ನು ಕಾಡುತ್ತಿದೆ. ಈಗ ಪ್ರತಿಯೊಬ್ಬರೂ ಯೋಚಿಸಬೇಕಾದ ಸಮಯ ಬಂದಿದೆ ಎಂದು ತನ್ನ ಸಂದೇಶದಲ್ಲಿ ಮೊಹನದಾಸ ಪರಮಹಂಸ ಸ್ವಾಮೀಜಿಯವರು ಹೇಳಿದ್ದಾರೆ.

ಸ್ವಾಮೀಜಿಯವರ ತನ್ನ ಸಂದೇಶದಲ್ಲಿ ಮನುಷ್ಯನ ಪಾಪ ಕರ್ಮಗಳು ಇಂದು ವೈರಸ್ ಮೂಲಕ ಸಾಂಕ್ರಾಮಿಕ ರೋಗವಾಗಿ ವಿಶ್ವವನ್ನೇ ವಿನಾಶದತ್ತ ಕೊಂಡೊಯ್ಯುತ್ತಿದೆ. ಗಂಡು, ಹೆಣ್ಣು ಯಾಂತ್ರಿಕ ಬದುಕಿನಲ್ಲಿ ಇಂದು ಸಂಸ್ಕಾರವನ್ನೇ ಮರೆತು ಕಾಮುಕತೆ, ಕ್ರೋದ, ಮಾತ್ಸರ್ಯದಿಂದ ಬದುಕುವುದರಿಂದ ಸಾಮಾಜಿಕ ನಿಲುವುಗಳು ಅಧಪತನವಾಗಿದೆ, ಮನುಕುಲ ಮುಂದಿನ ದಿನಗಳಲ್ಲಿ ತಮ್ಮ ಬದುಕು ಕಟ್ಟಿಕೊಳ್ಳಲು ಒದ್ದಾಟ ನಡೆಸಬೇಕಾಗುತ್ತದೆ. ಒಮ್ಮೆ ಕಲಿತ ಪಾಠವನ್ನು ಮರೆತರೆ ಭಗವಂತ ಮತ್ತೆ ಮತ್ತೆ ಪಾಠ ಕಲಿಸುತ್ತಲೇ ಇರುತ್ತಾನೆ.

ಪ್ರಾಕೃತಿಕ ವಿಕೋಪ, ಸಂಕ್ರಾಮಿಕ ರೋಗ ಮುಂದೆ ವಿಶ್ವಕ್ಕೆ ಯಾವ ಕಂಟಕ ಕಾದಿದೆಯೋ ಭಗಂತನೇಬಲ್ಲ, ಈ ಎಲ್ಲಾವಿಪತ್ತುಗಳಿಂದ ನಾವು ಬದುಕಿದಷ್ಟು ದಿನ ನೆಮ್ಮದಿ ಶಾಂತಿಯಿಂದಿರಲು ಏನು ಮಾಡಬೇಕು ಎಂದು ಯತಿವರೇಣ್ಯ ಮಾಣಿಲ ಶ್ರೀ ಶ್ರೀ ಮೊಹನದಾಸ ಪರಮಹಂಸ ಸ್ವಾಮೀಜಿಯವರು ಹೇಳಿದ ಮಾತುಗಳನ್ನು ಈ ವಿಡಿಯೋದ ಮೂಲಕ ನೋಡಿ.