- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ದಿನಸಿ ಅಂಗಡಿಯ ಪರವಾನಿಗೆ ಹೊಂದಿರುವವರು ಮಾರ್ಚ್ 31 ರಂದು ಕಡ್ಡಾಯವಾಗಿ ತೆರೆಯಬೇಕು : ಸಚಿವ ಕೋಟ

Kota Srinivas [1]ಬಂಟ್ವಾಳ: ಮಾರ್ಚ್ 31ರಂದು ಬೆಳಗ್ಗೆ 6ರಿಂದ ಮಧ್ಯಾಹ್ನ 3ರ ವರೆಗೆ ತೆರೆಯಲಿದ್ದು, ದಿನಸಿ ಅಂಗಡಿಯ ಪರವಾನಿಗೆ ಹೊಂದಿರುವವರು ಕಡ್ಡಾಯವಾಗಿ ಅಂಗಡಿಯನ್ನು ತೆರೆಯಬೇಕು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಬಂಟ್ವಾಳ ಶಾಸಕರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿ ಅಂಗಡಿಗಳ ಮುಂದೆ ಮಾರ್ಕಿಂಗ್ ಮಾಡುವುದಕ್ಕೆ ಸೂಚನೆ ನೀಡಲಾಗಿದ್ದು, ವಿಎ, ಗ್ರಾಮ ಸಹಾಯಕರು, ಪಿಡಿಒ, ಟಾಸ್ಕ್ ಫೋರ್ಸ್ ಸಮಿತಿಯವರು ಅದನ್ನು ನೋಡಿಕೊಳ್ಳಬೇಕಿದೆ. ಜತೆಗೆ ತಮ್ಮ ಅಂಗಡಿಗಳನ್ನು ವಸ್ತುಗಳನ್ನು ದಾಸ್ತಾನು ಇರಿಸಲು ಸೂಚನೆ ನೀಡಲಾಗಿದೆ.

ದಿನಗೂಲಿ ನೌಕರರು, ಕಾರ್ಮಿಕರು, ನಿರ್ಗತಿಕರಿಗಾಗಿ ದೇವಸ್ಥಾನಗಳ ಮೂಲಕ ಊಟ ನೀಡುವುದಕ್ಕೆ ಪಟ್ಟಿ ಸಿದ್ಧಪಡಿಸಲಾಗುತ್ತಿದೆ.

ಸಜೀಪನಡು ಗ್ರಾಮದಲ್ಲಿ ಕೋವಿಡ್ 19 ಸೋಂಕು ದೃಢಪಟ್ಟ 10 ತಿಂಗಳ ಮಗುವಿನ ಆರೋಗ್ಯ ಸ್ಥಿರವಾಗಿದ್ದು, ಗ್ರಾಮದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ತಾಲೂಕಿನಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಕೊರೊನಾ ಆತಂಕವನ್ನು ನಿರ್ವಹಿಸಲಾಗುತ್ತಿದ್ದು, ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತದ್ದೇನೆ‌ ಎಂದರು.

ಸಂಸದ ನಳಿನ್ ಕುಮಾರ್ ಕಟೀಲು, ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಬುಡಾ ಅಧ್ಯಕ್ಷ ದೇವದಾಸ್ ಶೆಟ್ಟಿ ಉಪಸ್ಥಿತರಿದ್ದರು.