- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಂಗಳೂರು: ಊಟದ ವ್ಯವಸ್ಥೆ, 1ತಿಂಗಳ ಆಹಾರ ಸಾಮಗ್ರಿ ವಿತರಣೆ, ಔಷಧ ಮತ್ತು ಆ್ಯಂಬುಲೆನ್ಸ್‌ ಬೇಕಾದಲ್ಲಿ “ವಾರ್‌ ರೂಂ’ ಗೆ ಕರೆಮಾಡಿ

NalinKateel [1]ಮಂಗಳೂರು: ದ.ಕ. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಸಂಸದರ ಕಚೇರಿಯಲ್ಲಿ ತೆರೆದಿರುವ “ವಾರ್‌ ರೂಂ’ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ. ಬೆಳಗ್ಗೆ 7ರಿಂದ ರಾತ್ರಿ 10 ಗಂಟೆಯ ತನಕ ದೂರು ಸ್ವೀಕರಿಸಿ, ಪರಿಹರಿಸುತ್ತಿದ್ದೇವೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕರೆ ಮಾಡಿದವರಿಗೆ ಊಟದ ವ್ಯವಸ್ಥೆ, ಆರ್ಥಿಕವಾಗಿ ಹಿಂದುಳಿದವರಿಗೆ 1ತಿಂಗಳ ಆಹಾರ ಸಾಮಗ್ರಿ ವಿತರಣೆ, ಅನಾರೋಗ್ಯ ಇದ್ದವರಿಗೆ ಔಷಧ ಮತ್ತು ಆ್ಯಂಬುಲೆನ್ಸ್‌, ಮೃತರ ಶವ ಸಂಸ್ಕಾರಕ್ಕೆ ನೆರವು ನೀಡಲು ಈ ವಾರ್‌ ರೂಂ ತೆರೆಯಲಾಗಿದೆ. ಇದು ಮಾಹಿತಿ ಕೇಂದ್ರವಾಗಿಯೂ ಕಾರ್ಯಾಚರಿಸುತ್ತಿದೆ. ಈವರೆಗೆ 3,200 ಮಂದಿಗೆ ಊಟ, 1,120 ಮಂದಿಗೆ ಆಹಾರ ವಸ್ತುಗಳ ಕಿಟ್‌, 110 ಮಂದಿಗೆ ಆ್ಯಂಬುಲೆನ್ಸ್‌, 28 ಮಂದಿಗೆ ಔಷಧ ಮತ್ತು 44 ಮಂದಿಗೆ ಇತರ ಸೇವೆಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

ತಲಪಾಡಿಯಿಂದ ಕಾಸರಗೋಡಿನ ಯಾವುದೇ ಅಂತಾರಾಜ್ಯ ವಾಹನವು ದ.ಕ. ಜಿಲ್ಲೆಯನ್ನು ಪ್ರವೇಶಿಸದಂತೆ ಬಂದ್‌ ಮಾಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಯ ಜತೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.

ಆ್ಯಂಬುಲೆನ್ಸ್‌ ಸಹಿತ ಯಾವುದೇ ವಾಹನವನ್ನೂ ಜಿಲ್ಲೆಗೆ ಬಿಡದಂತೆ ಸೂಚನೆ ನೀಡಲಾಗಿದೆ. ಕೇಂದ್ರ ಸರಕಾರ ಅಥವಾ ಕೇಂದ್ರ ಸಚಿವರು ಕೂಡ ವಾಹನ ಬಿಡುವಂತೆ ಸೂಚನೆ ನೀಡಿಲ್ಲ ಎಂದು ಹೇಳಿದರು.

ಜನತೆ ಮಾಹಿತಿ, ವೈದ್ಯಕೀಯ ಸೇವೆ, ಆಹಾರ ವ್ಯವಸ್ಥೆ, ಸರಕಾರಿ ಸೇವೆಗಳಿಗೆ ಈ ವಾರ್‌ ರೂಂನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ವೈದ್ಯಕೀಯ /ಆ್ಯಂಬುಲೆನ್ಸ್‌: 0824-2448888, 94498 47134 (ಗುರುಚರಣ್‌), ಮಾಹಿತಿ /ಸರಕಾರಿ ಸೇವೆ: 94834 96726 (ಸುಧಾಕರ್‌, ಸಂಸದರ ಕಾರ್ಯಾಲಯ ಕಾರ್ಯದರ್ಶಿ), ಮಂಗಳೂರು ಮಹಾನಗರ ಪಾಲಿಕೆ ಸೇವೆ: 98451 82462 (ದಿವಾಕರ ಪಾಂಡೇಶ್ವರ, ಮೇಯರ್‌), ಆಹಾರ ಸೇವೆ: 0824-2448888 (ಕದ್ರಿ ಮನೋಹರ ಶೆಟ್ಟಿ, ಕಾರ್ಪೊರೇಟರ್‌), ಜಿಲ್ಲಾ ಸಂಚಾಲಕರು: 94484 67540 (ನಿತಿನ್‌ ಕುಮಾರ್‌), 98440 22213 (ಸುಧೀರ್‌ ಶೆಟ್ಟಿ, ಕಾರ್ಪೊರೇಟರ್‌), ಜಿಲ್ಲಾಧಿಕಾರಿ ಕಚೇರಿ ಕಂಟ್ರೋಲ್‌ ರೂಂ: 1077