- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೋವಿಡ್ – 19 : ಜ್ವರ ಪತ್ತೆ ಹಚ್ಚಲು 13 ಜ್ವರ ಕ್ಲಿನಿಕ್‌ ತೆರೆದ ಆರೋಗ್ಯ ಇಲಾಖೆ

fever [1]ಮಂಗಳೂರು  : ರಾಷ್ಟ್ರವ್ಯಾಪಿ ಪಸರಿಸುವ ಕೊರೋನ ವೈರಸ್/ ಕೋವಿಡ್ – 19 ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕಾರ್ಯಕ್ರಮದನ್ವಯ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸದ್ರಿ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಅವಿರತ ಶ್ರಮಿಸುತ್ತಿದ್ದು ಜನ ಸಾಮಾನ್ಯರ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಜ್ವರ ಕ್ಲಿನಿಕ್‌ಗಳನ್ನು ಪ್ರಮುಖ ಆರೋಗ್ಯ ಸಂಸ್ಥೆಗಳಲ್ಲಿ ತೆರೆಯಲಾಗಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದ.ಕ ಮಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 13 ಜ್ವರದ ಚಿಕಿತ್ಸಾಲಯಗಳನ್ನು (Fever Clinic) ತೆರೆಯಲಾಗಿದ್ದು ಅವುಗಳ ಪ್ರಯೋಜನವನ್ನು ಸಾರ್ವಜನಿಕರು ಪಡೆಯಲು ಈ ಮೂಲಕ ತಿಳಿಸಿದೆ. ಸಂಸ್ಥೆಗಳ ವಿವರ ಈ ಕೆಳಗಿನಂತಿದೆ.
1. ಎಲ್ಲಾ ತಾಲೂಕು ಆಸ್ಪತ್ರೆಗಳು
* ತಾಲೂಕು ಆಸ್ಪತ್ರೆ ಬಂಟ್ವಾಳ
* ತಾಲೂಕು ಆಸ್ಪತ್ರೆ ಬೆಳ್ತಂಗಡಿ
*ತಾಲೂಕು ಆಸ್ಪತ್ರೆ ಪುತ್ತೂರು
* ತಾಲೂಕು ಆಸ್ಪತ್ರೆ ಸುಳ್ಯ
2. ಜಿಲ್ಲೆಯ 8 ಮೆಡಿಕಲ್ ಕಾಲೇಜುಗಳು
1. ಎ.ಜೆ. ವೈದ್ಯಕೀಯ ಕಾಲೇಜು, ಕುಂಟಿಕಾನ, ಮಂಗಳೂರು.
2. ಫಾದರ್‌ಮುಲ್ಲರ್ ವೈದ್ಯಕೀಯ ಕಾಲೇಜು, ಕಂಕನಾಡಿ, ಮಂಗಳೂರು.
3. ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಅತ್ತಾವರ, ಮಂಗಳೂರು.
4. ಯೆನಪೋಯ ವೈದ್ಯಕೀಯ ಕಾಲೇಜು, ದೇರಳಕಟ್ಟೆ, ಮಂಗಳೂರು.
5. ಶ್ರೀನಿವಾಸ ವೈದ್ಯಕೀಯ ಕಾಲೇಜು, ಮುಕ್ಕ, ಮಂಗಳೂರು.
6. ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜು, ದೇರಳಕಟ್ಟೆ, ಮಂಗಳೂರು.
7. ಕೆ.ವಿ.ಜಿ. ವೈದ್ಯಕೀಯ ಕಾಲೇಜು, ಸುಳ್ಯ.
8. ಕಣಚೂರು ವೈದ್ಯಕೀಯ ಕಾಲೇಜು, ಮಂಗಳೂರು
3. ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು