ಕರೋನವೈರಸ್ ತಡೆಗಟ್ಟಲು ಕಾಂಗ್ರೆಸ್ ಕಾರ್ಯಪಡೆ ಸನ್ನದ್ಧ

9:32 PM, Saturday, April 4th, 2020
Share
1 Star2 Stars3 Stars4 Stars5 Stars
(No Ratings Yet)
Loading...

jr-lobo ಮಂಗಳೂರು:  ಕರೋನವೈರಸ್ ಹರಡುವುದನ್ನು ನಿಯಂತ್ರಿಸಲು ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಒಳಗೊಂಡ ಕಾರ್ಯಪಡೆ ಸಮಿತಿಯನ್ನು ರಚಿಸಲಾಗಿದೆ ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ಹೇಳಿದ್ದಾರೆ.

ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಏಪ್ರಿಲ್ 4 ರ ಶನಿವಾರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ನಿಯಂತ್ರಣಕ್ಕೆ ಕಾಂಗ್ರೆಸ್ ‌ನಿಂದ‌ ಟಾಸ್ಕ್‌ಪೋರ್ಸ್ ರಚನೆ ಮಾಡಲಾಗಿದೆ. ನಾವು ಜವಾಬ್ದಾರಿಯುತ ಕೆಲಸ ಮಾಡುತ್ತೇವೆ, ಸರ್ಕಾರಕ್ಕೆ ಸಲಹೆ ನೀಡುತ್ತೇವೆ ಎಂದರು.

ಸಮಿತಿಯಲ್ಲಿ ಎಂಟು ಉಪಸಮಿತಿಯನ್ನು ಮಾಡುತ್ತೇವೆ. ಆಹಾರ ಉಪಸಮಿತಿ, ಆರೋಗ್ಯ ಉಪಸಮಿತಿ, ಸಾಮಾಜಿಕ ಜಾಲತಾಣ‌ ಸಮಿತಿ ಹೀಗೆ ಒಟ್ಟು 8 ಉಪಸಮಿತಿ ಮಾಡಲಾಗುವುದು, ಇದರೊಂದಿಗೆ ವಾರ್ ರೂಮ್ ನಿರ್ಮಾಣ ಮಾಡಿದ್ದು, ಸಮಸ್ಯೆ ಬಂದಲ್ಲಿ ಕರೆ ಮಾಡಬಹುದು ಎಂದು ಮಾಜಿ ಶಾಸಕರು ಮಾಹಿತಿ ನೀಡಿದರು.

ಕೋವಿಡ್-19 ರಾಷ್ಟ್ರೀಯ ವಿಪತ್ತು, ಇದರಲ್ಲಿ ರಾಜಕೀಯ ಬೇಡ. ಎಂದು ಮಂಗಳೂರಿನಲ್ಲಿ ಮಾಜಿ ಶಾಸಕ‌ ಜೆ. ಆರ್ ಲೋಬೋ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಂಎಲ್‌ಸಿ  ಐವನ್ಡಿ ಸೋಜಾ ಅವರು ಲಾಕ್‌ಡೌನ್ ಅವಧಿಯಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸದಿರುವ ಬಗ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

“ಜನರು ದಿನನಿತ್ಯದ ಅಗತ್ಯವನ್ನು ನಿಯಮಿತವಾಗಿ ಸ್ವೀಕರಿಸದಿದ್ದರೆ ಜನರು ಹೇಗೆ ಬದುಕುಳಿಯುತ್ತಾರೆ.  ಇಂದಿರಾ ಕ್ಯಾಂಟೀನ್‌ನಲ್ಲಿ ಜನರಿಗೆ ಆಹಾರಕ್ಕಾಗಿ ಶುಲ್ಕ ವಿಧಿಸಲಾಗುತ್ತಿದೆ ಎಂದರು.

jr-lobo

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English