ಮಂಗಳೂರು: ಸಿಗರೇಟ್ ಸೇದುವುದರಿಂದ ನಮ್ಮ ಶ್ವಾಸಕೋಶದ ಮೇಲೆ ಕೋವಿಡ್-19 ವೈರಾಣು ದಾಳಿ ಮಾಡುವುದನ್ನು ತಡೆಯಬಹುದು ಎಂದು ಫ್ರಾನ್ಸ್‍ನಲ್ಲಿ ನಡೆದ ಅಧ್ಯಯನವೊಂದು ದೃಢಪಡಿಸಿದೆ.
ಈ ಮಾರಕ ಕಾಯಿಲೆಯನ್ನು ತಡೆಯಲು ಸಿಗರೇಟ್‍ನಲ್ಲಿರುವ ನಿಕೋಟಿನ್ ಅಂಶವನ್ನು ಬಳಸಬಹುದೇ ಎಂಬ ಬಗ್ಗೆ ಪ್ರಯೋಗ ನಡೆಸಲು ಕೂಡಾ ಉದ್ದೇಶಿಸಲಾಗಿದೆ.
ಪ್ಯಾರೀಸ್‍ನ ಅಗ್ರಗಣ್ಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ 343 ಕೊರೋನಾವೈರಸ್ ಸೋಂಕಿತರನ್ನು ಪರೀಕ್ಷೆಗೆ ಗುರಿಪಡಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಫ್ರಾನ್ಸ್‍ನಲ್ಲಿ ಶೇಕಡ 35ರಷ್ಟು ಧೂಮಪಾನ ಮಾಡುವವರಿದ್ದರೆ, ದಾಖಲಾದ ಬಹುತೇಕ ಯಾವ ರೋಗಿಗಳೂ ಸಿಗರೇಟ್ ಸೇದುತ್ತಿರಲಿಲ್ಲ ಎನ್ನುವುದು ಅಧ್ಯಯನದಿಂದ ತಿಳಿದುಬಂದಿದೆ. “ಈ ರೋಗಿಗಳ ಪೈಕಿ ಶೇಕಡ 5ರಷ್ಟು ಮಾತ್ರ ಧೂಮಪಾನ ಮಾಡುವವರು” ಎಂದು ಅಧ್ಯಯನ ತಂಡದ ಮುಖ್ಯಸ್ಥರಾಗಿದ್ದ ಜಹೀರ್ ಅಮೋರಾ ಹೇಳಿದ್ದಾರೆ.
ಚೀನಾದಲ್ಲಿ ನಡೆದ ಅಧ್ಯಯನವೊಂದರ ಪ್ರಕಾರ ಚೀನಾದಲ್ಲಿ ಸೋಂಕಿತರಾದ 1000 ಮಂದಿಯ ಪರೀಕ್ಷೆ ನಡೆಸಿದಾಗ ಶೇಕಡ 12.6ರಷ್ಟು ಮಂದಿ ಮಾತ್ರ ಧೂಮಪಾನಿಗಳು ಎಂದು ತಿಳಿದುಬಂದಿದೆ. ಚೀನಾದಲ್ಲಿ ಒಟ್ಟಾರೆ ಶೇಕಡ 26ರಷ್ಟು ಧೂಮಪಾನ ಮಾಡುವವರಿದ್ದಾರೆ ಎನ್ನುವುದನ್ನು ಕೂಡಾ ಈ ಅಧ್ಯಯನ ವರದಿ ಉಲ್ಲೇಖಿಸಿದೆ.
ಈ ಹಿನ್ನೆಲೆಯಲ್ಲಿ ಕೊರೋನಾ ಸೋಂಕು ತಡೆಗೆ ನಿಕೋಟಿನ್ ಬಳಸಬಹುದೇ ಎಂಬ ಬಗ್ಗೆ ಕೂಡಾ ಫ್ರಾನ್ಸ್‍ನಲ್ಲಿ ಪ್ರಯೋಗ ನಡೆಯುತ್ತಿದೆ. ಕೊರೋನಾ ವೈರಾಣು ದಾಳಿ ಮಾಡಿದಾಗ ದೇಹದ ಪ್ರತಿರೋಧ ಶಕ್ತಿಯ ಮೇಲೆ ನಡೆಯುವ “ಸೈಟೊಕಿನ್ ಸ್ಟಾರ್ಮ್” ತಡೆಯಲು ನಿಕೋಟಿನ್ ಬಳಸುವ ಬಗ್ಗೆ ಪ್ರಯೋಗಗಳು ನಡೆಯುತ್ತಿವೆ.
ಆದರೆ ಇದರ ಅಡ್ಡ ಪರಿಣಾಮಗಳ ಬಗ್ಗೆಯೂ ಆಳವಾದ ಅಧ್ಯಯನ ನಡೆಯಬೇಕು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
Click this button or press Ctrl+G to toggle between Kannada and English