- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

24 ಗಂಟೆಗಳಲ್ಲಿ ಭಾರತದಲ್ಲಿ 56 ಕೊರೋನಾ ಸೋಂಕಿತರು ಮೃತ್ಯು

corona [1]ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 25 ಸಾವಿರ ಗಡಿಯತ್ತ ಸಾಗಿದ್ದು, ಒಂದೇ ದಿನ 1,490 ಹೊಸ ಪಾಸಿಟಿವ್ ಪ್ರಕರಣ ದಾಖಲಾಗುವುದರೊಂದಿಗೆ ಶನಿವಾರ ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 24,942ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 56 ಕೊರೋನಾ ಸೋಂಕಿತರು ಸಾವನ್ನಪ್ಪಿದ್ದು ಆ ಮೂಲಕ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 779ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಮಾಹಿತಿ ನೀಡಿದೆ. 24,942 ಪ್ರಕರಣಗಳ ಪೈಕಿ ಈವರೆಗೂ 5,209 ಮಂದಿ ಸೋಂಕಿತರು ಗುಣಮುಖರಾಗಿದ್ದು, 18,953 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 111 ಮಂದಿ ವಿದೇಶಿ ಪ್ರಜೆಗಳು ಸೇರಿದ್ದಾರೆ ಎನ್ನಲಾಗಿದೆ. ದೇಶದಲ್ಲಿ ಕೊರೋನಾ ವೈರಸ್ ನಿಂದ ಗುಣಮುಖರಾದವರ ಪ್ರಮಾಣ ಶೇ.20.88ಕ್ಕೆ ಏರಿಕೆಯಾಗಿದೆ.

ಇಂದು ದೇಶದಲ್ಲಿ ಕೊರೋನಾ ವೈರಸ್ ಗೆ ಒಟ್ಟು 56 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಈ ಪೈಕಿ 18 ಮಂದಿ ಮಹಾರಾಷ್ಟ್ರದಲ್ಲಿ, 15 ಮಂದಿ ಗುಜರಾತ್ ನಲ್ಲಿ, 9 ಮಂದಿ ಮಧ್ಯ ಪ್ರದೇಶದಲ್ಲಿ, ದೆಹಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಮೂರು ಮಂದಿ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಉತ್ತರ ಪ್ರದೇಶದಲ್ಲಿ ತಲಾ ಇಬ್ಬರು ಮತ್ತು ಪಂಜಾಬ್ ಮತ್ತು ಕೇರಳದಲ್ಲಿ ತಲಾ ಒಬ್ಬ ಸೋಂಕಿತರು ಸಾವನ್ನಪ್ಪಿದ್ದಾರೆ.

ಕೊರೋನಾ ವೈರಸ್ ಗೆ ಮಹಾರಾಷ್ಟ್ರದಲ್ಲಿ ಗರಿಷ್ಠ ಸಾವು ಸಂಭವಿಸಿದ್ದು, ಕೊರೋನಾಗೆ ಬಲಿಯಾದವರ ಸಂಖ್ಯೆ ಇಲ್ಲಿ 301ಕ್ಕೆ ಏರಿಕೆಯಾಗಿದೆ. ಅಂತೆಯೇ ಗುಜರಾತ್ ನಲ್ಲಿ 127, ಮಧ್ಯ ಪ್ರದೇಶದಲ್ಲಿ 92,ದೆಹಲಿಯಲ್ಲಿ 53, ಆಂಧ್ರ ಪ್ರದೇಶದಲ್ಲಿ 31 ಮತ್ತು ರಾಜಸ್ಥಾನದಲ್ಲಿ 27 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಉತ್ತರ ಪ್ರದೇಶ, ತೆಲಂಗಾಣದಲ್ಲಿ ತಲಾ 26, ತಮಿಳುನಾಡಿನಲ್ಲಿ 22, ಕರ್ನಾಟಕ, ಪಶ್ಚಿಮ ಬಂಗಾಳದಲ್ಲಿ ತಲಾ 18, ಪಂಜಾಬ್ ನಲ್ಲಿ 17, ಜಮ್ಮು ಮತ್ತು ಕಾಶ್ಮೀರದಲ್ಲಿ ಐದು, ಕೇರಳ ನಾಲ್ಕು, ಜಾರ್ಖಂಡ್ ಮತ್ತು ಹರಿಯಾಣದಲ್ಲಿ ತಲಾ ಮೂರು, ಬಿಹಾರದಲ್ಲಿ 2, ಮೇಘಾಲಯ, ಹಿಮಾಚಲ ಪ್ರದೇಶ, ಒಡಿಶಾ ಮತ್ತು ಅಸ್ಸಾಂನಲ್ಲಿ ತಲಾ ಒಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ.

ಇನ್ನು ಗರಿಷ್ಠ ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಗರಿಷ್ಠ ಸ್ಥಾನದಲ್ಲಿದ್ದು, ಈ ವರೆಗೂ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 6,817ಕ್ಕೆ ಏರಿಕೆಯಾಗಿದೆ. ಬಳಿಕ ಗುಜರಾತ್ (2,815), ದೆಹಲಿ (2,514), ರಾಜಸ್ಥಾನ (2,034), ಮಧ್ಯಪ್ರದೇಶ (1,952) ಮತ್ತು ಉತ್ತರ ಪ್ರದೇಶ (1,778), ತಮಿಳುನಾಡಿನಲ್ಲಿ 1,755, ಆಂಧ್ರಪ್ರದೇಶದಲ್ಲಿ 1,061 ಮತ್ತು ತೆಲಂಗಾಣದಲ್ಲಿ 984, ಪಶ್ಚಿಮ ಬಂಗಾಳದಲ್ಲಿ 571, ಕರ್ನಾಟಕದಲ್ಲಿ 489, ಜಮ್ಮು ಮತ್ತು ಕಾಶ್ಮೀರದಲ್ಲಿ 454, ಕೇರಳದಲ್ಲಿ 451, ಪಂಜಾಬ್‌ನಲ್ಲಿ 298 ಮತ್ತು ಹರಿಯಾಣದಲ್ಲಿ 272, ಬಿಹಾರದಲ್ಲಿ 228, ಒಡಿಶಾದಲ್ಲಿ 94, ಜಾರ್ಖಂಡ್ ನಲ್ಲಿ 59, ಉತ್ತರಾಖಂಡದಲ್ಲಿ 48, ಹಿಮಾಚಲ ಪ್ರದೇಶದಲ್ಲಿ 40, ಛತ್ತೀಸ್ ಘಡ ಮತ್ತು ಅಸ್ಸಾಂನಲ್ಲಿ ತಲಾ 36 ಪಾಸಿಟಿವ್ ಪ್ರಕರಣಗಳಿವೆ. ಇದಲ್ಲದೆ ಚಂಡೀಘಡದಲ್ಲಿ 28, ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ 27, ಲಡಾಖ್ ನಲ್ಲಿ 20, ಮೇಘಾಲಯದಲ್ಲಿ 12, ಗೋವಾ ಮತ್ತು ಪುದುಚೇರಿಯಲ್ಲಿ ತಲಾ 7 ಸೋಂಕು ಪ್ರಕರಣಗಳಿವೆ. ಮಣಿಪುರ ಮತ್ತು ತ್ರಿಪುರಾದಲ್ಲಿ ತಲಾ ಎರಡು ಪ್ರಕರಣಗಳು ಮಾತ್ರ ಇವೆ, ಮೆಜೋರಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ತಲಾ ಒಂದು ಪ್ರಕರಣಗಳಿವೆ.