ಕಾರಗೆಜ್ಜೆ ಬೆಡಗಿ ವೀಕ್ಷಾ ಪ್ರಕಾಶ್ ಗಟ್ಟಿ ಈಗ ಪುಟ್ಟಕ್ಕ

12:50 PM, Monday, April 27th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Vikshaಮಂಗಳೂರು  :  ಇಲ್ಲಿ  ಅದೆಷ್ಟೋ ಬಾಲ ನಟ ನಟಿಯರು ಸಾಧನೆಯನ್ನ ಮಾಡಿದ್ದಾರೆ. ನಟನೆಯಲ್ಲಿ ಎಲ್ಲರ ಮನಸನ್ನೂ ಗೆಲ್ಲುತ್ತಾರೆ ಅಂತಹ ಪ್ರತಿಭೆಯಲ್ಲಿ ಈ ಬಾಲ ನಟಿಯು ಒಬ್ಬಳು.ವೀಕ್ಷಾಪ್ರಕಾಶ್ ಗಟ್ಟಿ ಪಾಣೆಮಂಗಳೂರಿನ ನಂದಾವರದ ಆಶಾಪ್ರಕಾಶ್ ಗಟ್ಟಿ ದಂಪತಿಯ ಪುತ್ರಿ. ಎಸ್.ಎಲ್‌.ಎಂ.ಪಿ ವಿದ್ಯಾಲಯ ಪಾಣೆಮಂಗಳೂರಿನಲ್ಲಿ ನಾಲ್ಕನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನ ನಡೆಸುತ್ತಿದ್ದು, ಓದಿನ ಜೊತೆ ಜೊತೆಗೆ ಭರನಾಟ್ಯ ತರಗತಿಯನ್ನ ಪಡೆದುಕೊಂಡರು. ತನ್ನ ನಗುಮುಖದಲ್ಲೆ‌ ಎಲ್ಲರ ಮನಸನ್ನ ಗೆಲ್ಲುವ ಇವಳು ನಟನೆಯ ಕಡೆಗೆ ಹೆಜ್ಜೆ ಇಟ್ಟಳು. ಹರ್ಶಿತ್ ಸೋಮೇಶ್ವರ ಇವರ ನಿರ್ದೇಶನ ದಲ್ಲಿ ಮೋನಿಶ್ ಕುಮಾರ್ ಪಾವೂರು ಇವರ ಸಾಹಿತ್ಯದಲ್ಲಿ ತುಳುನಾಡ ಖ್ಯಾತ ಗಾಯಕ ಸಂತೋಷ್ ಬೇಂಕ್ಯ ಇವರ ಸ್ವರದಲ್ಲಿ ಮೂಡಿ ಬಂದ ಕಾರಗೆಜ್ಜೆ ಎಂಬ ತುಳು ಆಲ್ಬಮ್ ಸಾಂಗ್ ಗೆ ಬಾಲ ನಟ ಅಭಿಶೇಕ್ ಶೆಟ್ಟಿ ಯ ಜೊತೆ ನಾಯಕಿಯ ಪಾತ್ರವನ್ನ ಮಾಡಿ ಇಡೀ ಮಂಗಳೂರಿನಲ್ಲೇ ಮೆಚ್ಚುಗೆಯನ್ನ ಪಡೆದರು. ನಂತರ ಈ ಪುಟ್ಟ ಬಾಲಕಿಯ ನಟನೆಗೆ ಎಲ್ಲರೂ ಮನಸೋತು ಹಲವಾರು ಆಲ್ಬಮ್ ಸಾಂಗ್ ಗಳು ಇವರ ಕಡೆಗೆ ಬಂದವು.

ರಚಿನ್ ಶೆಟ್ಟಿ ಹಾಗೂ ಅಭಿಶೇಕ್ ರಾವ್ ಇವರ ನಿರ್ದೇಶನದಲ್ಲಿ., ರಕ್ಷಣ್ ಮಾಡೂರು ಅವರ ಸಾಹಿತ್ಯದಲ್ಲಿ , ಸಂತೋಷ್ ಬೇಂಕ್ಯ ಇವರ ಸ್ವರದಲ್ಲಿ ಮೂಡಿ ಬರಲಿರುವ ಪುಟ್ಟಕ್ಕ ಎಂಬ ಅದ್ಬುತ ಕಥೆಯುಳ್ಳ ಆಲ್ಬಮ್ ಸಾಂಗ್ ಗೆ ನಟನೆಯನ್ನ ಮಾಡಿದ್ದಾರೆ. ಇದೇ ತಿಂಗಳ ಎಪ್ರಿಲ್ 27ಕ್ಕೆ ರಿಲೀಸ್ ಆಗಲಿದೆ. ನಿರ್ದೇಶಕ ಹರ್ಶಿತ್ ಸೋಮೇಶ್ವರ‌ ಇವರು ಕಾರಗೆಜ್ಜೆ-2 ಮಾಡಲು ತಯಾರಿಯನ್ನ ನಡೆಸುತ್ತಿದ್ದಾರೆ. ಮುಂಬರುವ ತುಳು ಚಿತ್ರಗಳಲ್ಲಿ ಈ ಬಾಲ ನಟಿ ಬರಲಿದ್ದಾಳೆ ಎಂದು ಮಾತುಗಳೂ ಕೇಳಿ ಬರುತ್ತಿದೆ. ಈ ಪುಟ್ಟ ವಯಸ್ಸಿನಲ್ಲಿಯೆ ಅಭಿಮಾನಿಗಳನ್ನ ಸಂಪಾದಿಸುತ್ತಿದ್ದು‌ ಎಲ್ಲರ ಮನಸನ್ನ ಗೆದ್ದಿದ್ದಾಳೆ.

veeksha

veeksha

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English