- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಏಪ್ರಿಲ್ 28 ಆದಿ ಶಂಕರಾಚಾರ್ಯರ ಜಯಂತಿ; ಪಾಲಘರ ಸಂತರ ಹತ್ಯೆಗೆ ನ್ಯಾಯ ಸಿಗುವುದೇ

Shankaracharya [1]ಮಂಗಳವಾರ  : ಹಿಂದೂ ಧರ್ಮದ ಪುನರುತ್ಥಾನದ ಜನಕರಾಗಿರುವ ಆದಿ ಶಂಕರಾಚಾರ್ಯರ ಜಯಂತಿಯು ಎಪ್ರಿಲ್ 28 ರಂದು ಇದೆ. ಮಹಾರಾಷ್ಟ್ರದ ಪಾಲಘರದಲ್ಲಿ ಉದ್ರಿಕ್ತ ಗುಂಪು ಎಪ್ರಿಲ್ 19 ರಂದು ರಾತ್ರಿ ಪೂ. ಕಲ್ಪವೃಕ್ಷ ಗಿರಿಜೀ ಮಹಾರಾಜ ಹಾಗೂ ಪೂ. ಸುಶೀಲ ಗಿರಿಜೀ ಮಹಾರಾಜ ಈ ಇಬ್ಬರು ಸಂತರೊಂದಿಗೆ ಅವರ ವಾಹನ ಚಾಲಕರನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿತು. ಈ ಸಂತರು ಆದಿ ಶಂಕರಾಚಾರ್ಯರು ನಿರ್ಮಿಸಿದ ಆಖಾಡಾ ಪರಂಪರೆಯವರಾಗಿದ್ದರು. ಸಂತರ ಚರಣಗಳಲ್ಲಿ ಶ್ರದ್ಧಾಂಜಲಿಯನ್ನು ಅರ್ಪಿಸಲು ‘ಆದಿ ಶಂಕರಾಚಾರ್ಯರ ಜಯಂತಿ’ ಇದು ಎಲ್ಲಕ್ಕಿಂತ ಯೋಗ್ಯವಾದ ದಿನವಿದೆ.

ಈ ನಿಮಿತ್ತ ದೇಶದಾದ್ಯಂತ ಎಲ್ಲ ಹಿಂದೂಗಳು ಸಂತರ ಚರಣಗಳಲ್ಲಿ ಶ್ರದ್ಧಾಂಜಲಿಯನ್ನು ಅರ್ಪಿಸಲು, ಅದೇರೀತಿ ಈ ಕ್ರೂರ ಘಟನೆಯನ್ನು ಖಂಡಿಸಲು ಸಾಯಂಕಾಲ ದೀಪವನ್ನು ಹಚ್ಚಿ ಎಂದು ಹಿಂದೂ ಜನಜಾಗೃತಿ ಸಮಿತಿಯು ಕರೆ ನೀಡಿದೆ. ದೇಶದಾದ್ಯಂತ ಅನೇಕ ಸಂತ ಸಮಾಜ, ಹಿಂದುತ್ವನಿಷ್ಠರು ಹಾಗೂ ರಾಷ್ಟ್ರಪ್ರೇಮಿ ಸಂಘಟನೆಗಳು ಕೂಡ ಈ ರೀತಿಯಲ್ಲಿ ಜನರಿಗೆ ಕರೆಯನ್ನು ನೀಡಿದ್ದಾರೆ. ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಇವರು ಎಲ್ಲ ಹಿಂದೂಗಳಿಗೆ ಈ ಉಪಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಧರ್ಮಕರ್ತವ್ಯವನ್ನು ಪಾಲಿಸಿರಿ, ಅದೇರೀತಿ ಸಾಮಾಜಿಕ ಜಾಲತಾಣ ಗಳಲ್ಲಿಯೂ #HindusRiseAsOne ಈ ಹೆಸರಿನಲ್ಲಿ ಹಿಂದೂ ಸಂಘಟನೆಯನ್ನು ತೋರಿಸಬೇಕು, ಎಂದು  ಕರೆ ನೀಡಿದ್ದಾರೆ.

ಪಾಲ್ಗರ್ ಸಾಧುಗಳ ಹತ್ಯಾಕಾಂಡ

ಪಾಲ್ಗರ್ ಪ್ರದೇಶ ಕ್ರಿಶ್ಚಿಯನ್ ಮಿಶನರಿಗಳು ಮತ್ತು ತಬ್ಲಿಗಿಗಳ ಮತಾಂತರದ ಪ್ರಯೋಗಶಾಲೆ. ಹಿಂದು ಧರ್ಮದಲ್ಲಿನ ಸಾಮಾಜಿಕ ಅನಿಷ್ಟಗಳು ಮತ್ತು ತಾರತಮ್ಯಗಳಿಂದ ಬೇಸತ್ತು ಬಹುದೊಡ್ಡ ಸಂಖ್ಯೆಯಲ್ಲಿ ಅಲ್ಲಿನ‌ ಹಿಂದುಗಳು ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಕ್ಕೆ‌ ಮತಾಂತರವಾಗಿದ್ದಾರೆ.

ಸಾಧುಗಳ ಹತ್ಯೆಯ ಸಂಬಂದ 110 ಬಂದಿತರ ಪರವಾಗಿ ಜಾಮೀನು ಪಡೆಯಲು ನ್ಯಾಯಾಲಯಕ್ಕೆ ಬಂದಿರುವ ಸಂಘಟನೆಯ ಹೆಸರು “ಕ್ರಾಂತಿಕಾರಿ”. ಕ್ರಿಶ್ಚಿಯನ್ನರ ಈ ಸಂಘಟನೆಯ ಅಧ್ಯಕ್ಷ ಪ್ರದೀಪ್ ಪ್ರಭು ಒಬ್ಬ ಕ್ರಿಶ್ಚಿಯನ್ ಮತಾಂತರಿತ ಹಿಂದು. ಇತನ ನಿಜವಾದ ಹೆಸರು ಪೀಟರ್‌ ಡಿ. ಮೆಲೊ. ಮೊದಲು ಸ್ಥಳಿಯ ಚರ್ಚೊಂದರಲ್ಲಿ ಪೀಟರ್ ಪಾದ್ರಿಯಾಗಿ ಕೆಲಸ ಮಾಡಿದ್ದ.

ಹತ್ಯೆಯ ವೀಡಿಯೋದಲ್ಲಿ ಕೇಳಿಬರುತ್ತಿರುವ “ಶೊಯೆಬ್” ಎನ್ನುವ ವ್ಯಕ್ತಿಯ ಹೆಸರು FIR ನಲ್ಲಿ ದಾಖಲಾಗಿಲ್ಲ.

ಪೀಟರ್ ಡಿ. ಮೆಲೊ ಮತ್ತು ಶಿರಾಜ್ ಅಲಿಯಾಸ್ ಸಾರಾ ಹೆಸರಿನ‌ ಮುಸ್ಲಿಂ ಯುವತಿಯನ್ನು ವಿವಾಹವಾಗಿದ್ದಾನೆ.

ಪೀಟರ್ ಮತ್ತು ಸಾರಾ ದಂಪತಿಯರು “ಕ್ರಾಂತಿಕಾರಿ” ಹೆಸರಿನ ಸಂಘಟನೆಯನ್ನು ನಡೆಸುತ್ತಿದ್ದಾರೆ. ಸಂಘಟನೆಯನ್ನು ರಿಜಿಸ್ಟರ್ ಮಾಡಿದ ನಂತರ ಪಿಟರ್ ಡಿ. ಮೆಲೊ ತನ್ನ ಹೆಸರನ್ನು ಪ್ರದೀಪ್ ದೇಶಭಕ್ತ ಪ್ರಭು ಎಂದು ಹೆಸರು ಬದಲಾಯಿಸಿಕೊಂಡಿದ್ದಾನೆ.

ಪೀಟರ್ ಡಿ. ಮೆಲೊ UPA ಅವದಿಯಲ್ಲಿ ಸೋನಿಯಾ ಗಾಂಧಿ ಅಧ್ಯಕ್ಷತೆಯ NAC ಯ ಉಪಸಮಿತಿಯ ಸದಸ್ಯನಾಗಿದ್ದ.

ಒಟ್ಟಾರೆ ಈ ಹತ್ಯಾಕಾಂಡದಲ್ಲಿ ಕ್ರಿಶ್ಚಿಯನ್ ಮಿಶನರಿಗಳ, ಮತಾಂಧರ ಕೈವಾಡ ಇವೆ ಎಂಬುದು ತಿಳಿದುಬರುತ್ತಿದೆ.