- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೊರೋನಾದಿಂದ ಪಾರಾಗಲು ವಿಶಿಷ್ಟ ಔಷಧ ಕಂಡು ಹಿಡಿದ ಲಂಡನ್ ಮಹಿಳೆ

juice [1]ಲಂಡನ್  : ಕರೊನಾದಿಂದ ಪಾರಾಗಲು ಯಾರೊಬ್ಬರೂ ಔಷದಿ ಕಂಡು ಹಿಡಿದಿರಲಿಲ್ಲ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡಲ್ಲಿ ಕೊರೊನಾ ವೈರಾಣು ದೇಹದೊಳಗೆ ನುಸುಳಲು  ಹಿದೇಟು ಹಾಕುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಲಂಡನ್ನಿನ ಮಹಿಳೆಯೊಬ್ಬರು ಕರೊನಾ ರೋಗಕ್ಕೆ ವಿಶಿಷ್ಟ ಔಷದಿ ಒಂದನ್ನು ಕಂಡು ಹಿಡಿದಿದ್ದಾರೆ

ಟ್ರೇಸಿ ಕಿಸ್ (32) ಎಂಬ ಇಬ್ಬರು ಮಕ್ಕಳ ತಾಯಿ ಹೀಗೊಂದು ಪ್ರಯೋಗ ಮಾಡುತ್ತಿದ್ದಾರೆ. ಒಂದು ವಿಚಿತ್ರ ಸ್ಮೂದಿಯನ್ನು ವಾರಕ್ಕೆ ಮೂರು ಬಾರಿ ಒಂದು ಗ್ಲಾಸ್ ಗಳಷ್ಟು ಕುಡಿಯುತ್ತಿದ್ದಾರೆ..!

ಈ  ಔಷದಿ ಮತ್ತೇನಲ್ಲಆಕೆಯ ಸ್ನೇಹಿತನ ವೀರ್ಯದ ಸ್ಮೂದಿ..! ಇದು ಸ್ವಲ್ಪ ಅಸಹ್ಯ ಅನ್ನಿಸಿದರೂ ಆಕೆಯೇ ಹೇಳಿಕೊಂಡ ಸತ್ಯ..
ಕಳೆದ ಮೂರು ವರ್ಷಗಳಿಂದ ಒಂದು ದಿನವೂ ನನಗೆ ಜ್ವರವಾಗಲಿ, ಶೀತವಾಗಲಿ ಬಂದಿಲ್ಲ. ಯಾಕೆಂದರೆ ಆಗಿನಿಂದಲೂ ನಾನು ನನ್ನ ಬಾಯ್ಫ್ರೆಂಡ್ನಿಂದ ವೀರ್ಯವನ್ನು ದಾನವಾಗಿ ಪಡೆದು, ಅದರೊಂದಿಗೆ ಬೆರ್ರಿ ಹಣ್ಣುಗಳು, ಬಾಳೆಹಣ್ಣು ಮತ್ತಿತರ ವಿಟಮಿನ್ ಯುಕ್ತ ಹಣ್ಣುಗಳನ್ನು ಸೇರಿಸಿಕೊಂಡು, ಸ್ಮೂದಿ ತಯಾರು ಮಾಡಿಕೊಂಡು ವಾರಕ್ಕೆ ಮೂರು ಬಾರಿ ಕುಡಿಯುತ್ತಿದ್ದೇನೆ ಎಂದು ಟ್ರೇಸಿ ಅವರೇ ಬಹಿರಂಗ ಪಡಿಸಿದ್ದಾರೆ.

 

juice [2]ನಾನು ನನ್ನ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಒಂದು ವಿಭಿನ್ನ ಮಾರ್ಗ ಕಂಡುಕೊಂಡಿದ್ದೇನೆ. ಇದಕ್ಕೆ ಯಾವುದೇ ಖರ್ಚು ಕೂಡ ಇಲ್ಲ. ರಾಸಾಯನಿಕ ಕೂಡ ಇಲ್ಲ. ಎಲ್ಲ ಸಲವೂ ಔಷಧಿಗಳ ಮೇಲೆಯೇ ಅವಲಂಬಿತರಾಗುವುದಕ್ಕಿಂತ ಇಂತಹ ಪೌಷ್ಟಿಕಗಳನ್ನು ಪಡೆಯುವುದು ಒಳಿತು ಎನ್ನಿಸಿತು ಎಂದಿದ್ದಾರೆ.

ನಾನಿನ್ನೂ ಮಗುವಿಗೆ ಎದೆಹಾಲು ನೀಡುತ್ತಿರುವ ತಾಯಿ. ನನಗೆ ಜಾಸ್ತಿ ನ್ಯೂಟ್ರಿಷಿಯನ್ ಬೇಕು. ಹಾಗಾಗಿಯೇ ಈ ವೀರ್ಯದ ಸ್ಮೂದಿ ಕುಡಿಯುತ್ತಿದ್ದೇನೆ. ಇದು ಎಲ್ಲರಿಗೂ ಇಷ್ಟವಾಗುವುದಿಲ್ಲ. ಆದರೆ ನಾನು 2017ರಿಂದಲೂ ಕುಡಿಯುತ್ತಿದ್ದೇನೆ. ಅಂದಿನಿಂದಲೂ ಒಂದಿನವೂ ಜ್ವರ, ಶೀತದಂತಹ ಯಾವುದೇ ಸಣ್ಣ ಕಾಯಿಲೆಯೂ ಬಂದಿಲ್ಲ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಈ ವೀರ್ಯದಿಂದ ತಮ್ಮ ಫೇಸ್ಪ್ಯಾಕ್ ಮಾಡಿಕೊಳ್ಳುತ್ತಿದ್ದು, ಚರ್ಮದ ಹೊಳಪು ಹೆಚ್ಚಾಗಿದೆ ಎಂದು ಹೇಳಿಕೊಂಡಿದ್ದಾರೆ.

ಸ್ಮೂದಿ ಸೇವಿಸಲು ಚೆನ್ನಾಗಿಯೇ ಇರುತ್ತದೆ. ಆದರೆ ಖಂಡಿತ ತಮಾಷೆ ಅಲ್ಲ. ನಾನು ಕಂಡುಕೊಂಡಿದ್ದು ನೈಸರ್ಗಿಕ ವಿಧಾನ. ನನ್ನ ಆರೋಗ್ಯದಲ್ಲಿ ಆದ ಬದಲಾವಣೆಯನ್ನು ಗುರುತಿಸಿಕೊಂಡಿದ್ದೇನೆ. ಸದ್ಯ ಕರೊನಾ ವೈರಸ್ ವಿರುದ್ಧ ಹೋರಾಟಕ್ಕೂ ಇದು ಖಂಡಿತ ಸಹಕಾರಿಯಾಗುತ್ತಿದೆ ಎಂದು ಹೇಳಿದ್ದಾರೆ.