- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಆಟೋ ರಿಕ್ಷಾ ಬಾಡಿಗೆ ದರ ಪರಿಷ್ಕರಣೆ, ವಿರೋಧ

Auto [1]ಮಂಗಳೂರು :  ಲಾಕ್ ಡೌನ್ ನಡುವೆ ಬಸ್ ಅಥವಾ ಪರ್ಯಾಯ  ಟ್ಯಾಕ್ಸಿ ವಾಹನಗಳ ವ್ಯವಸ್ಥೆ ಇಲ್ಲದಾಗಲೇ ಆಟೋ ಬೆಲೆ  ಏರಿಕೆ ಮಾಡಿರುವುದು ಸಮಂಜಸವಲ್ಲ ಎಂದು ವಾಹನ ಬಳಕೆದಾರರ ಸದಸ್ಯರೊಬ್ಬರು ವಿರೋಧ ಪಡಿಸಿದ್ದಾರೆ.

ಒಂದೆಡೆ ಲಾಕ್ ಡೌನ್ ನಿಂದ ಜನರಿಗೆ ಆದಾಯವಿಲ್ಲ, ಜನ ಬರೀ ಗಾಲಲ್ಲೇ ನಡೆದುಕೊಂಡು ಹೋಗುತ್ತಿದ್ದಾರೆ. ಈ ಸಂದರ್ಭದಲ್ಲಿ ಕಡಿಮೆ ಮಾಡಬೇಕೆ ಹೊರತು, ಜಾಸ್ತಿ ಮಾಡಿರುವ ಆರ್.ಟಿ.ಓ. ನಿರ್ಧಾರ ಸರಿಯಿಲ್ಲ ಎಂದು ಅವರು ಹೇಳಿದ್ದಾರೆ.

ರಾಜ್ಯ ಸರಕಾರವು ಆಟೋ ವಾಲಾ ಗಳಿಗೆ ತಿಂಗಳಿಗೆ 5 ಸಾವಿರ ರೂಪಾಯಿ ಪ್ಯಾಕೇಜನ್ನು ನೀಡಿದೆ, ಎಂದು ಅವರು ತಿಳಿಸಿದರು.

2020ನೇ ಸಾಲಿನ ಫೆಬ್ರವರಿ 27 ರಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಆಟೋರಿಕ್ಷಾ ಪ್ರಯಾಣಿಕರ ವಾಹನಗಳ ಬೇಡಿಕೆ ದರವು ರೂ. 25 ರಿಂದ 30 ರವರೆಗೆ ಏರಿಸಿದ್ದು, ಹಾಗೂ ನಂತರದ ಪ್ರತೀ ಕಿಲೋ ಮೀಟರ್‍ಗೆ ರೂ. 15 ಏರಿಕೆ ಆಗಿದ್ದು, ಲಾಕ್ ಡೌನ್ ನಿಮಿತ್ತ ಈ ಬಾಡಿಗೆ ಏರಿಕೆ ಆಗಿರಲಿಲ್ಲ. ಆಟೋರಿಕ್ಷಾ ವಾಹನಗಳ ಬಾಡಿಗೆ ಮೀಟರ್ ಮಾಪನಾಂಕ ನಿರ್ಣಯ (Caliberation) ಆಗದೇ ಇರುವುದರಿಂದ ಅದಕ್ಕೆ ತಕ್ಕ ತಾಂತ್ರಿಕ ಡೀಲರುಗಳು ಲಭ್ಯವಿಲ್ಲದಕಾರಣ ಸಾರ್ವಜನಿಕರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಅಂಗೀಕರಿಸಿದ ಬಾಡಿಗೆ ಪ್ರಕಾರ ಪಟ್ಟಿ(Manual List) ಪ್ರಕಾರ ಪ್ರಯಾಣದ ದರ ನೀಡಿ ಸಹಕರಿಸಬೇಕಾಗಿ ಮಂಗಳೂರು ಆರ್.ಟಿ.ಓ. ಪ್ರಕಟಣೆ ತಿಳಿಸಿದೆ.