- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮೆಸ್ಕಾಂ ನಿಂದ ವಿದ್ಯುತ್ ಬಿಲ್ಲಿನ ಬಗ್ಗೆ ಸ್ಪಷ್ಟೀಕರಣ

Mescom [1]ಮಂಗಳೂರು  : ಮೇ 2020 ರ ಮಾಹೆಯಲ್ಲಿ, 2 ತಿಂಗಳ ಬಿಲ್ಲನ್ನು ಒಟ್ಟಿಗೆ ಹೆಚ್ಚಿನ ಮೊತ್ತಕ್ಕೆ ನೀಡಿರುವುದಾಗಿ ಕೆಲವು ಮಾಧ್ಯಮಗಳಲ್ಲಿ ವರದಿ ಬಂದಿರುತ್ತದೆ. ವಿದ್ಯುತ್ ಬಿಲ್‌ಗಳ ಬಗ್ಗೆ ಗ್ರಾಹಕರಿಗೆ ಉಂಟಾಗಿರುವ ಗೊಂದಲದ ಕುರಿತು ಕೆಳಕಂಡಂತೆ ಸ್ಪಷ್ಟೀಕರಣ ನೀಡಿದೆ.

ಗ್ರಾಹಕರಿಗೆ ಬಳಕೆ ಮತ್ತು ಸ್ಲ್ಯಾಬ್ ದರಗಳನ್ನು ಮಾಸಿಕ ಬಿಲ್ಲಿಗೆ ಅನ್ವಯಿಸುವಂತೆ ಕರಾರುವಕ್ಕಾಗಿ ಹಾಗೂ ಯಾವುದೇ ಹೆಚ್ಚುವರಿ ಆಗದಂತೆ ಎರಡು ತಿಂಗಳಿಗೂ ಸಮಾನವಾಗಿ ಯುನಿಟ್ ಬಳಕೆಯನ್ನು, ಸ್ಲ್ಯಾಬ್‌ಗಳನ್ನು ದುಪ್ಪಟ್ಟುಗೊಳಿಸಿ ಕನಿಷ್ಟ ಸ್ಲ್ಯಾಬ್‌ನಿಂದ ಅನ್ವಯಿಸುವಂತೆ ಬಿಲ್ಲಿನಲ್ಲಿ ತೋರಿಸಲಾಗಿದೆ.

ಕೋವಿದ್-19 ಲಾಕ್‌ಡೌನ್ ಸಮಯದಲ್ಲಿ ಬಹುತೇಕ ಜನರು ಮನೆಯಲ್ಲೇ ಇದ್ದು IT/BT  ಮತ್ತು ಇತರೆ ಕ್ಷೇತ್ರಗಳ ಉದ್ಯೋಗಿಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸಿರುತ್ತಾರೆ ಹಾಗೂ ಬೇಸಿಗೆ ಆಗಿರುವುದರಿಂದ ಮನೆಯಲ್ಲಿ ಫ್ಯಾನ್, ಂಅ ಮತ್ತು ಹಲವು ವಿದ್ಯುತ್ ಉಪಕರಣಗಳನ್ನು ಹೆಚ್ಚಾಗಿ ಉಪಯೋಗಿಸಿದ್ದಲ್ಲಿ ವಿದ್ಯುತ್ ಬಳಕೆ ಹೆಚ್ಚಾಗಿರುವ ಸಾಧ್ಯತೆಗಳಿರುತ್ತದೆ.

ವಿದ್ಯುತ್ ಬಳಕೆ ಹೆಚ್ಚಾದಂತೆ ಹೆಚ್ಚಿನ ಸ್ಲ್ಯಾಬ್ ದರಗಳು ಅನ್ವಯವಾಗುವುದರಿಂದ ವಿದ್ಯುತ್ ಬಿಲ್ ಹೆಚ್ಚಾಗಿರುತ್ತದೆ.

ಗ್ರಾಹಕರು ಹಿಂದಿನ ಮಾಹೆಯ ಹಾಗೂ ಪ್ರಸಕ್ತ ರೀಡಿಂಗ್‌ನ್ನು ಹಾಗೂ ಸ್ಲ್ಯಾಬ್ ಲೆಕ್ಕಾಚಾರವನ್ನು ಪರಿಶೀಲಿಸಿ, ಯಾವುದಾದರೂ ನ್ಯೂನ್ಯತೆಗಳು ಕಂಡಲ್ಲಿ ಸಂಬಂಧಿಸಿದ ಉಪವಿಭಾಗವನ್ನು ಸಂಪರ್ಕಿಸಿ (ವಿವರಗಳು ಮೆಸ್ಕಾಂ ವೆಬ್‌ಸೈಟ್  https://mescom.karnataka.gov.in [2] ಜಾಲತಾಣದಲ್ಲಿ ಲಭ್ಯವಿದೆ) ಅಥವಾ ಸಹಾಯವಾಣಿ 1912 ಕ್ಕೆ ಕರೆಮಾಡಿ ತಮ್ಮ ವಿದ್ಯುತ್ ಬಿಲ್ಲಿನ ನ್ಯೂನ್ಯತೆಗಳ ಬಗ್ಗೆ ಸ್ಪಷ್ಟನೆ ಪಡೆದು ದೃಢೀಕರಿಸಿಕೊಂಡು ಪಾವತಿಸುವುದು.

ಒಂದು ವಿದ್ಯುತ್ ಬಿಲ್ಲಿನಲ್ಲಿ ನಿಗದಿತ ಶುಲ್ಕ, ವಿದ್ಯುತ್ ಶುಲ್ಕ ಮತ್ತು ತೆರಿಗೆ ಎಂಬ ಮೂರು ಅಂಶಗಳು ಸೇರಿರುತ್ತದೆ. ವಿದ್ಯುತ್ ಬಳಕೆ ಮಾಡದಿದ್ದರೂ ಸಹ ನಿಗಧಿತ ಶುಲ್ಕ ಮಾತ್ರ ಬಿಲ್ಲಿನಲ್ಲಿ ಬರುತ್ತದೆ.

ಕೆಲವು ಗ್ರಾಹಕರಿಗೆ Door Lock/Sealdown/Quarantinee ಆವರಣ ಕಾರಣದಿಂದ ಸರಾಸರಿ ಬಿಲ್ಲನ್ನು ನೀಡಲಾಗಿದೆ. ಇದು ಬಳಕೆಗಿಂತ ಹೆಚ್ಚುವರಿ ಎಂದು ಕಂಡುಬಂದಲ್ಲಿ ಅಂತಹ ಸ್ಥಾವರಗಳ ಮಾಪಕದ ರೀಡಿಂಗನ್ನು ಪುನಃ ತೆಗೆದುಕೊಳ್ಳಲಾಗುವುದು ಅಥವಾ ಗ್ರಾಹಕರು ಸ್ವತಹ ರೀಡಿಂಗನ್ನು ಸಂಬಂಧಿಸಿದ ಉಪವಿಭಾಗ ಅಥವಾ ಸಹಾಯವಾಣಿ 1912 ಕ್ಕೆ ಒದಗಿಸಿದಲ್ಲಿ ಪರಿಷ್ಕೃತ ಬಿಲ್ಲನ್ನು ನೀಡಲಾಗುವುದು.

MSME  ಕೈಗಾರಿಕಾ ಗ್ರಾಹಕರಿಗೆ ಎಪ್ರಿಲ್ ಮತ್ತು ಮೇ-2020 ರ ಮಾಹೆಯ ಬಳಕೆಯ ಬಿಲ್ಲುಗಳಿಗೆ ನಿಗದಿತ ಶುಲ್ಕವನ್ನು ಮನ್ನಾ ಮಾಡಲಾಗಿರುವುದರಿಂದ ವಿದ್ಯುತ್ ಬಳಕೆಯ ಶುಲ್ಕವನ್ನು ಮಾತ್ರ ಪಾವತಿಸುವುದು.

MSME  ಅಲ್ಲದ ಕೈಗಾರಿಕಾ ಗ್ರಾಹಕರಿಗೆ ಎಪ್ರಿಲ್ ಮತ್ತು ಮೇ-2020 ರ ಮಾಹೆಯ ಬಳಕೆಯ ಬಿಲ್ಲುಗಳಿಗೆ ನಿಗದಿತ ಶುಲ್ಕ / ಡಿಮ್ಯಾಂಡ್ ಶುಲ್ಕವನ್ನು ಪಾವತಿಸಲು ದಿನಾಂಕ 30.06.2020 ರವರೆಗೆ ಕಾಲಾವಕಾಶ ನೀಡಲಾಗಿದೆ.

30.06.2020 ರವರೆಗೆ ಬಿಲ್ ಪಾವತಿಸಿಲ್ಲದ ಕಾರಣಕ್ಕೆ ವಿದ್ಯುತ್ ನಿಲುಗಡೆ (Disconnection )ಮಾಡಲಾಗುವುದಿಲ್ಲ.

ಮೆಸ್ಕಾಂ ವ್ಯಾಪ್ತಿಯಲ್ಲಿ ಗೃಹ ಬಳಕೆ ವಿದ್ಯುತ್ ಬಿಲ್ಲಿನ ಶುಲ್ಕವನ್ನು ಈ ಕೆಳಗಿನಂತೆ ಲೆಕ್ಕಾಚಾರ ಮಾಡಲಾಗುತ್ತದೆ

ನಿಗಧಿತ ಶುಲ್ಕ ದರ (ನಗರ ಪ್ರದೇಶ) ದರ (ಗ್ರಾಮೀಣ ಪ್ರದೇಶ)
ಮೊದಲ 1 ಕಿ.ವ್ಯಾ.ಗೆ ರೂ.60,00/ಕಿ.ವ್ಯಾ.ಗೆ ರೂ.45.00/ಕಿ.ವ್ಯಾ.ಗೆ
ನಂತರದ ಹೆಚ್ಚುವರಿ ಕಿ.ವ್ಯಾ.ಗೆ ರೂ.70.00/ಕಿ.ವ್ಯಾ.ಗೆ ರೂ.60.00/ಕಿ.ವ್ಯಾ.ಗೆ

ವಿದ್ಯುತ್ ಬಳಕೆ ಶುಲ್ಕ :-

1 ತಿಂಗಳಿಗೆ ಅನ್ವಯಿಸುವ ಸ್ಲ್ಯಾಬ್ 2 ತಿಂಗಳಿಗೆ ಅನ್ವಯಿಸುವ ಸ್ಲ್ಯಾಬ್ ದರ ಪ್ರತಿ ಯುನಿಟ್‌ಗೆ (ನಗರ ಪ್ರದೇಶ) ದರ ಪ್ರತಿ ಯುನಿಟ್‌ಗೆ (ಗ್ರಾಮೀಣ ಪ್ರದೇಶ)
1ನೇ SLAB 30 ಯುನಿಟ್‌ಗಳು 60 ಯುನಿಟ್‌ಗಳು ರೂ. 3.70/- ಯುನಿಟ್‌ಗೆ ರೂ. 3.60/- ಯುನಿಟ್‌ಗೆ
2ನೇ SLAB 70 ಯುನಿಟ್‌ಗಳು 140 ಯುನಿಟ್‌ಗಳು ರೂ. 6.20/- ಯುನಿಟ್‌ಗೆ ರೂ. 4.90/- ಯುನಿಟ್‌ಗೆ
3ನೇ SLAB 100 ಯುನಿಟ್‌ಗಳು 200 ಯುನಿಟ್‌ಗಳು ರೂ. 6.25/- ಯುನಿಟ್‌ಗೆ ರೂ. 6.45/- ಯುನಿಟ್‌ಗೆ
4ನೇSLAB 200ಯುನಿಟ್‌ಗಳಿಗಿಂತ ಅಧಿಕ 400 ಯುನಿಟ್‌ಗಳಿಗಿಂತ ಅಧಿಕ ರೂ. 7.80/- ಯುನಿಟ್‌ಗೆ ರೂ. 7.30/- ಯುನಿಟ್‌ಗೆ

mescom [3]