- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸಂಪೂರ್ಣ ಲಾಕ್‌ಡೌನ್ ಮಂಗಳೂರಲ್ಲಿ ಬಂದೂಕು ಹಿಡಿದ ಪೊಲೀಸರು

police-gun [1]ಮಂಗಳೂರು  : ಲಾಕ್ ಡೌನ್ ಹಂತ ಹಂತವಾಗಿ ಸಡಿಲವಾಗುತ್ತಿದ್ದಂತೆ ಜನ ಬೇಕಾಬಿಟ್ಟಿ ಜಾಲಿ ರೇಡ್ ಹೋರಡುತ್ತಿದ್ದರು,  ಭಾನುವಾರ  ರಾಜ್ಯಾದ್ಯಂತ ಸಂಪೂರ್ಣ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಂಗಳೂರು  ಸ್ತಬ್ದವಾಗಿತ್ತು. ದಿನಾ ಲಾಠಿ ಹಿಡಿಯುತ್ತಿದ್ದ ಪೊಲೀಸರು ನಿನ್ನೆ ಮಾತ್ರ ತೊಕ್ಕೊಟ್ಟು, ಉಳ್ಳಾಲ ಬಳಿ ಸುಖಾಸುಮ್ಮನೆ ಓಡಾಡುತ್ತಿದ್ದ ವಾಹನಗಳನ್ನು ಬಂದೂಕು ಹಿಡಿದು ತಡೆದು ಎಚ್ಚರಿಕೆ ನೀಡಿ ವಾಪಸ್ಸು ಕಳುಹಿಸುತ್ತಿದ್ದರು.

ಈ ಬಾರಿ ಸೂಕ್ಷ್ಮ ದೇಶವಾಗಿರುವ ಉಳ್ಳಾಲದಲ್ಲಿ ಬಂದೋಬಸ್ತ್ ನಿರತರಾಗಿದ್ದ ಪೊಲೀಸರ ಕೈಗೆ ಬಂದೂಕು ನೀಡಲಾಗಿತ್ತು. ಇಷ್ಟುದಿನ ಪೊಲೀಸರು ಕೈಯ್ಯಲ್ಲಿ ಲಾಠಿ ಹಿಡಿದು ಲಾಕ್‌ಡೌನ್‌ ನಿಯಮ ಪಾಲನೆಯ ಪಾಠ ಮಾಡಿದ್ದರು ಆದರೆ ಇಲ್ಲಿ ಕೆಲವರು ಲಾಠಿಗೂ ಬಗ್ಗುತ್ತಿರಲಿಲ್ಲ.

ಪಾಸ್‌ ಇಲ್ಲದೆ ಅನಗತ್ಯ ಓಡಾಡುತ್ತಿರುವರನ್ನು ತಡೆದು ಪೊಲೀಸರು ಎಚ್ಚರಿಕೆ ನೀಡಿದರು. ಹಬ್ಬದ ನೆಪದಲ್ಲಿ ಮತ್ತು ವಸ್ತುಗಳ ಖರೀದಿ ಹೆಸರಲ್ಲಿ ಬೈಕ್‌ ಗಳಲ್ಲಿ ಇಲ್ಲಿ ಜಾಲಿ ರೇಡ್ ಮಾಡುತ್ತಿದ್ದರು, ಲಾಠಿ ಹಿಡಿದಿದ್ದ ಪೊಲೀಸರ ಕೈಯ್ಯಲ್ಲಿ ಬಂದೂಕು ಇದ್ದಿದ್ದನ್ನು ನೋಡಿ ಕೆಲವರು ಅರ್ಧ ದಾರಿಯಲ್ಲೇ ಬೈಕ್‌ ತಿರುಗಿಸಿ ಓಡಿ ಹೋಗುವ ದೃಶ್ಯ ಕಂಡುಬರುತ್ತಿದೆ.

ಕೇರಳ ಗಡಿಭಾಗವಾದ ತಲಪಾಡಿಯಲ್ಲಿ ಭಾನುವಾರದ ಲಾಕ್‌ಡೌನ್‌ ಹಿನ್ನಲೆಯಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಸಾರ್ವಜನಿಕರ ಸಂಚಾರ, ವಾಹನ ಸಂಚಾರವೂ ಕೂಡ ಸ್ತಬ್ಥವಾಗಿತ್ತು. ವಾಹನ ಸಂಚಾರವಿಲ್ಲದೇ ತಲಪಾಡಿ ಟೋಲ್‌ಗೇಟ್‌ನಲ್ಲೂ ಕೇರಳ ಮತ್ತು ಕರ್ನಾಟಕ ಮಧ್ಯೆ ಗೂಡ್ಸ್‌ ಲಾರಿಗಳ ಸಂಚಾರ ಹೊರತು ಯಾವುದೇ ವಾಹನ ಸಂಚಾರವಿರಲಿಲ್ಲ.

ಉಳ್ಳಾಲದ ಇತಿಹಾಸ ಪ್ರಸಿದ್ದ ಸೈಯ್ಯದ್‌ ಮದನಿ ದರ್ಗಾದಲ್ಲಿ ಹೊರಜಿಲ್ಲೆಗಳಿಂದ ಜನ ದರ್ಗಾ ಸಂದರ್ಶನಗೈದು ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸುತ್ತಿದ್ದರು. ಆದರೆ ನಿನ್ನೆ ದಿನ ಇತಿಹಾಸದಲ್ಲಿಯೇ ಪ್ರಥಮ ಬಾರಿ, ಜನರೇ ಇಲ್ಲದೆ ದರ್ಗಾ ಆವರಣ ಬಿಕೋ ಅನ್ನುತಿತ್ತು. ದರ್ಗಾ ಮುಖ್ಯ ದ್ವಾರದಲ್ಲಿ ಬ್ಯಾರಿಕೇಡ್‌ ಅಳವಡಿಸಿ ಜನ ಬಾರದಂತೆ ತಡೆಹಿಡಿಯಲಾಗಿತ್ತು.