- Mega Media News Kannada - https://kannada.megamedianews.com -

ಇಂದಿನಿಂದ ಹುಬ್ಬಳ್ಳಿಯಿಂದ ಬೆಂಗಳೂರು, ಹೊಸದಿಲ್ಲಿಗೆ ವಿಮಾನಯಾನ ಆರಂಭ

Hubballi Airport [1]ಹುಬ್ಬಳ್ಳಿ : ಕೊರೋನಾ ಸೋಂಕು ಪ್ರಸರಣ ತಡೆಗೆ ದೇಶದಲ್ಲಿ ಲಾಕ್‌ಡೌನ್‌ ಜಾರಿಯಾದ ಮಾರ್ಚ್‌ 25 ರಿಂದ ದೇಶೀಯ ಮತ್ತು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸ್ಥಗಿತಗೊಂಡಿತ್ತು.

ಹಂತ ಹಂತವಾಗಿ ಲಾಕ್‌ ಡೌನ್‌ ನಿರ್ಭಂದ ಸಡಿಲಿಸುತ್ತಿರುವ ಕೇಂದ್ರ ಸರಕಾರ ಮೇ.25 ಸೋಮವಾರದಿಂದ ದೇಶದಲ್ಲಿ ಆಂತರಿಕ ವಿಮಾನಯಾನ ಆರಂಭಿಸಲು ಅನುಮತಿ ನೀಡಿದೆ.

ಹೀಗಾಗಿ ಸ್ಟಾರ್‌ ಏರಲೈನ್ಸ್‌ ವಿಮಾನಯಾನ ಸಂಸ್ಥೆಯು ಮೇ.25 ಸೋಮವಾರದಿಂದ ಹುಬ್ಬಳ್ಳಿಯಿಂದ ಹೊಸದಿಲ್ಲಿ (ಹಿಂಡಾನ್)‌ ಹಾಗೂ ಬೆಂಗಳೂರಿಗೆ ವಿಮಾನಯಾನ ಆರಂಭಿಸಲಾಗುತ್ತಿದೆ ಎಂದು ಹುಬ್ಬಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ ಠಾಕ್ರೆ ಮೆಗಾಮೀಡಿಯಾ ನ್ಯೂಸ್  ಗೆ ತಿಳಿಸಿದ್ದಾರೆ.

ಸ್ಟಾರ್‌ ಏರಲೈನ್ಸ್‌ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಹುಬ್ಬಳ್ಳಿಯಿಂದ ಮಧ್ಯಾಹ್ನ1.30  ಕ್ಕೆ ಹೊಸದಿಲ್ಲಿ (ಹಿಂಡಾನ್)ಗೆ, ಸಂಜೆ 7.55 ಕ್ಕೆ ಬೆಂಗಳೂರಿಗೆ ವಿಮಾನ ಹೊರಡಲಿದೆ. ಬೆಂಗಳೂರಿನಿಂದ ಮಧ್ಯಾಹ್ನ 12 ಕ್ಕೆ ಹೊರಡುವ ವಿಮಾನ ಮಧ್ಯಾಹ್ನ 1 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ ಎಂದು ಠಾಕ್ರೆ ತಿಳಿಸಿದ್ದಾರೆ.

ಪ್ರಯಾಣಿಕರಿಗೆ ಮಾಹಿತಿ:
ವಿಮಾನಯಾನ ಮಾಡುವ ಪ್ರಯಾಣಿಕರಿಗೆ ಪ್ರಯಾಣದ ಟಿಕೆಟ್‌ ಜತೆಗೆ ಏನನ್ನು ಮಾಡಬೇಕು, ಏನನ್ನೂ ಮಾಡಬಾರದು ಎಂಬುದರ ಮಾಹಿತಿ ನೀಡಲಾಗುತ್ತಿದೆ.

ವರದಿ: ಶಂಭು
ಮೆಗಾಮೀಡಿಯಾ  ನ್ಯೂಸ್, ಹುಬ್ಬಳ್ಳಿ ಬ್ಯೂರೋ