ಇಬ್ಬರು ಮಕ್ಕಳು ಸೇರಿ, ದಕ್ಷಿಣ ಕನ್ನಡ ಜಿಲ್ಲೆಯ11 ಮಂದಿಯಲ್ಲಿ ಕೊರೊನಾ ಸೋಂಕು

4:26 PM, Wednesday, May 27th, 2020
Share
1 Star2 Stars3 Stars4 Stars5 Stars
(No Ratings Yet)
Loading...

Mangalore Covid ಮಂಗಳೂರು  : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  11 ಮಂದಿಯಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಇಂದು ದೃಢವಾದ 11 ಮಂದಿಯಲ್ಲಿ 10 ಮಂದಿ ಮಹಾರಾಷ್ಟ್ರ ಹಾಗೂ ಒಬ್ಬರು ಗುಜರಾತ್ ರಾಜ್ಯದಿಂದ ಹಿಂತಿರುಗಿದವರಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 81ಕ್ಕೆ ಏರಿಕೆಯಾಗಿದೆ.

ಬುಧವಾರದ ಆರೋಗ್ಯ ಇಲಾಖೆಯ ಬೆಳಗ್ಗಿನ ಬುಲೆಟಿನ್ ಪ್ರಕಾರ  3, 11, ವರ್ಷದ ಮಕ್ಕಳಿಗೂ ಸೋಂಕು ತಗುಲಿದೆ. ಇದಲ್ಲದೆ 36, 59,17, 45, 37 ಮಹಿಳೆ ಹಾಗೂ 35, 46, 39 ವರ್ಷದ ಪುರುಷರಲ್ಲಿ ಸೋಂಕು ದೃಢವಾಗಿದ್ದು ಇವರೆಲ್ಲರೂ ಪುತ್ತೂರು , ಬೆಳ್ತಂಗಡಿ ಹಾಗೂ ಉಳ್ಳಾಲದ ಕ್ವಾರೆಂಟೈನ್ ಗೆ ಒಳಪಡಿಸಲಾಗಿತ್ತು. ಇವರೆಲ್ಲರನ್ನೂ ನಿಗದಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿಸಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English