ಪೀಡಿಯಾಟ್ರಿಕ್, ಸಮಾಲೋಚಕ, ಯೋಗ ಥೆರಪಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

10:13 PM, Wednesday, May 27th, 2020
Share
1 Star2 Stars3 Stars4 Stars5 Stars
(No Ratings Yet)
Loading...

pediatricಮಂಗಳೂರು : ಡಿ.ಎನ್.ಬಿ. ಕೋರ್ಸಿನ ಪೀಡಿಯಾಟ್ರಿಕ್ ಸರ್ಜರಿ ವಿಭಾಗದಲ್ಲಿ ಖಾಲಿ ಇರುವ ಒಂದು ಹುದ್ದೆಗೆ ಸೀನಿಯರ್ ಕನ್ಸಲ್ಟಂಟ್/ ಪಿ.ಜಿ. ಟೀಚರ್ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಜೂನ್ 2 ರಂದು ವೆನ್‍ಲಾಕ್ ಜಿಲ್ಲಾ ಶಸ್ತ್ರಚಿಕಿತ್ಸರ ಕಚೇರಿಯಲ್ಲಿ ನೇರ ಸಂದರ್ಶನದ ನಡೆಯಲಿದೆ.

ಸಂದರ್ಶನಕ್ಕೆ ಹಾಜರಾಗಲು ಬೇಕಾದ ಅರ್ಹತೆಗಳು ಇಂತಿವೆ: ಸಂಬಂಧಿಸಿದ ತಜ್ಞತೆಯಲ್ಲಿ ಸ್ನಾತಕೋತ್ತರ ಪದವಿ(ಎಂ.ಎಸ್/ಎಂ.ಡಿ/ಡಿ.ಎನ್.ಬಿ) ಪಡೆದು 5 ವರ್ಷಗಳ ಬೋಧನಾ ಅನುಭವವಿರಬೇಕು. ಒಟ್ಟು 10 ವರ್ಷ ಸೇವೆ ಸಲ್ಲಿಸಿರಬೇಕು. ವಯೋಮಿತಿ 67 ವರ್ಷದೊಳಗಿರಬೇಕು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ಅಧೀಕ್ಷಕರ ಕಚೇರಿ (ದೂರವಾಣಿ ಸಂಖ್ಯೆ: 0824-2413205, 0824-2421351) ಸಂಪರ್ಕಿಸಬಹುದು ಎಂದು ವೆನ್‍ಲಾಕ್ ಆಸ್ಪತ್ರೆ ಪ್ರಕಟಣೆ ತಿಳಿಸಿದೆ.

ಪ್ರಜ್ಞಾ ಕೌನ್ಸಿಲಿಂಗ್ ಕೇಂದ್ರ– ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಂಗಳೂರು : ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲತಾ ಮಂತ್ರಾಲಯ ಪ್ರಾಯೋಜಿತ ಪ್ರಜ್ಞಾ ಐ.ಆರ್.ಸಿ.ಎ (ಡಿ.ಎಡಿಕ್ಷನ್) ಕೇಂದ್ರಕ್ಕೆ ಮಾಸಿಕ ನಿಗದಿತ ಗೌರವಧನ ಆಧಾರದಲ್ಲಿ ಈ ಕೆಳಗಿನ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

1)ಸಮಾಲೋಚಕ – ವಿದ್ಯಾರ್ಹತೆ: ಎಂ.ಎಸ್.ಡಬ್ಲೂ (ಮೆಡಿಕಲ್ ಎಂಡ್ ಸೈಕ್ಯಾಟ್ರಿಕ್), 2)ನರ್ಸ್ -ವಿದ್ಯಾರ್ಹತೆ: ಎ.ಎನ್.ಎಂ ಅಥವಾ ತತ್ಸಮಾನ, 3)ಯೋಗ ಥೆರಪಿಸ್ಟ್ -ವಿದ್ಯಾರ್ಹತೆ: ಅಂಗೀಕೃತ ಸಂಸ್ಥೆಯಿಂದ ತರಬೇತಿ ಪಡೆದವರಿಂದ ಅರ್ಜಿ ಆಹ್ವಾನಿಸಲಾಗಿದೆ..

ಮೇಲಿನ ಹುದ್ದೆಗಳಿಗೆ ಕನಿಷ್ಠ 2 ವರ್ಷದ ಅನುಭವ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ಜೂನ್ 6 ರೊಳಗೆ ಠಿಡಿಚಿಟಿಚಿಛಿouಟಿseಟ@ಥಿಚಿhoo.ಛಿom ಅಥವಾ ನಿರ್ದೇಶಕರು ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್, ಫಳ್ನೀರ್ ರೋಡ್, ಕಂಕನಾಡಿ ಮಂಗಳೂರು -575005 ಇಲ್ಲಿಗೆ ಕಳುಹಿಸಬೇಕು.

ಹೆಚ್ಚಿನ ಮಾಹಿತಿಗಾಗಿ ದೂರಾವಾಣಿ ಸಂಖ್ಯೆ: 0824-2432682, 2432133ಯನ್ನು ಸಂಪರ್ಕಿಸಹುದು ಎಂದು ಪ್ರಕಟಣೆ ತಿಳಿಸಿದೆ.

1 ಪ್ರತಿಕ್ರಿಯೆ - ಶೀರ್ಷಿಕೆ - ಪೀಡಿಯಾಟ್ರಿಕ್, ಸಮಾಲೋಚಕ, ಯೋಗ ಥೆರಪಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

  1. Ashwini Tamraparni, Bangalore

    https://docs.google.com/document/d/16zpOAd8Teo71-YkpXH2BmjhbQe_1UxvQOBO7EAUu05w/edit?usp=drivesdk

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English