- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕಟ್ಟಡ ದಲ್ಲಿ ಕೆಲಸ ಮಾಡುತ್ತಿದ್ದ ಯುವಕ ವಿದ್ಯುತ್ ಆಘಾತಕ್ಕೆ ಬಲಿ, ಮತ್ತೋರ್ವ ಗಂಭೀರ

electric shock [1]ಬಂಟ್ವಾಳ : ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ವಿದ್ಯುತ್‌‌ ಶಾಕ್‌‌ನಿಂದ  ಮೃತಪಟ್ಟು, ಮತ್ತೋರ್ವ ಗಾಯಗೊಂಡ ಘಟನೆ ಫರಂಗಿಪೇಟೆ ಸಮೀಪ ಪೇರಿಮಾರ್‌‌ನಲ್ಲಿ ಶನಿವಾರ ನಡೆದಿದೆ.

ಮೃತಪಟ್ಟ ಯುವಕನನ್ನು ಮುಬಾರಕ್ ಅಮ್ಮೆಮಾರ್(23) ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಫಾರೂಕ್ ಅಮ್ಮೆಮಾರ್ ಅವರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ.

ಫರಂಗಿಪೇಟೆಯ ಪೇರಿಮಾರ್‌‌‌ನಲ್ಲಿ ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.