ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದ ಪ್ರತಿಯೊಬ್ಬರಿಗೂ ಸೂರು: ಸಚಿವ ವಿ.ಸೋಮಣ್ಣ

9:36 PM, Saturday, May 30th, 2020
Share
1 Star2 Stars3 Stars4 Stars5 Stars
(No Ratings Yet)
Loading...

v-somannaಬೆಂಗಳೂರು : ಬೆಂಗಳೂರು ನಗರ ಜಿಲ್ಲೆ ಜಿಗಣಿ ಹೋಬಳಿಯ ಸ್ವಾಮಿ ವಿವೇಕಾನಂದ ಯೋಗ ವಿಶ್ವವಿದ್ಯಾನಿಲಯದ ಬಳಿ 1938 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕವಾದ ಮೂಲ ಸೌಕರ್ಯಗಳುಳ್ಳ 30000 ನಿವೇಶನಗಳ ಪ್ರಧಾನಮಂತ್ರಿ ಟೌನ್‍ಶಿಪ್ ನಿರ್ಮಿಸಲು ಕ್ರಮ ವಹಿಸಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ತಿಳಿಸಿದರು.

ಇಂದು ವಿಕಾಸಸೌಧದಲ್ಲಿರುವ ತಮ್ಮ ಕೊಠಡಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಹರಪನಹಳ್ಳಿ, ಸೂರ್ಯನಗರದ ರಾಜಾಪುರ ಗ್ರಾಮ, ಉಡುಪಿ ಜಿಲ್ಲೆಯ ಕೊರಂಗಪಾಡಿ, ಬೆಂಗಳೂರು ದಕ್ಷಿಣ ತಾಲ್ಲೂಕು ದೊಣ್ಣೇನಹಳ್ಳಿ, ನೆಲಮಂಗಲದ ಬಳಿ ಮಾಚೋನಾಯಕನ ಹಳ್ಳಿಗಳಲ್ಲಿ ಸುಮಾರು 400 ಎಕರೆ ಜಮೀನಿನಲ್ಲಿ 6000 ನಿವೇಶನಗಳನ್ನು ರಚಿಸಲು ಕಾಮಗಾರಿ ಪ್ರಾರಂಭಿಸಲಾಗುತ್ತಿದೆ ಎಂದು ಹೇಳಿದರು.

ಕನಕಪುರದ ರಾಯಸಂದ್ರ , ನೆಲಮಂಗಲದ ಮಾಚೋನಾಯಕನಹಳ್ಳಿ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಮೈಸೂರು ಜಿಲ್ಲೆಯ ಇಲವಾಲ, ಗದಗ ಜಿಲ್ಲೆಯ ಮುಂಡರಗಿ ಮತ್ತು ಕೊಪ್ಪಳ ಗಳಲ್ಲಿನ 340 ಎಕರೆ ಜಮೀನಿನಲ್ಲಿ ಸುಮಾರು 5100 ನಿವೇಶನಗಳನ್ನು ರಚಿಸುವ ಕಾಮಗಾರಿಗಳಿಗೆ ಡಿ.ಪಿ.ಆರ್. ತಯಾರಿಸಲಾಗಿದ್ದು ಟೆಂಡರ್ ಕರೆಯಲು ಕ್ರಮಕೈಗೊಳ್ಳಲಾಗಿದೆ. ರಾಜ್ಯಾದ್ಯಂತ 21 ಸ್ಥಳಗಳಲ್ಲಿ ಒಟ್ಟು ಸುಮಾರು 1600 ಎಕರೆ ಜಮೀನನ್ನು ಪಾಲುದಾರಿಕೆಯಡಿಯಲ್ಲಿ ಸಂಗ್ರಹಿಸಿ 24000 ನಿವೇಶನಗಳನ್ನು ನಿರ್ಮಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English