ಉಡುಪಿ ಜಿಲ್ಲೆಯಲ್ಲಿ ಜೂನ್ 2 ರಂದು 150 ಜನರ ಕರೋನ ವರದಿ ಪಾಸಿಟಿವ್

9:31 PM, Tuesday, June 2nd, 2020
Share
1 Star2 Stars3 Stars4 Stars5 Stars
(No Ratings Yet)
Loading...

corona Udupiಉಡುಪಿ : ಜೂನ್ 2 ರ ಮಂಗಳವಾರ ಉಡುಪಿ ಜಿಲ್ಲೆಯಲ್ಲಿ ಅತಿಹೆಚ್ಚು ಕರೋನ ವೈರಸ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ.

ಇಂದು ಮಧ್ಯಾಹ್ನ, ಕಂದಾಯ ಸಚಿವ ಅಶೋಕ ಅವರು 210 ಜನರು ಕರೋನವೈರಸ್ ಸೋಂಕಿನ ಪಾಸಿಟಿವ್ ವರದಿ ಬಂದಿದೆ ಎಂದು ಸುಳಿವು ನೀಡಿದ್ದರು.

ಆದರೆ ಸಂಜೆಯ ವೇಳೆಗೆ, ಜಿಲ್ಲಾಡಳಿತದ ಹೊಸ ಮಾಹಿತಿ ಪ್ರಕಾರ ಕೋವಿಡ್ 19 ಗೆ 150 ಜನರ ಪಾಸಿಟಿವ್ ಪ್ರಕರಣಗಳು ಬಂದಿದೆ ಎಂದಿದ್ದಾರೆ, ಈಗ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ  410 ಕ್ಕೆ ಏರಿಕೆಯಾಗಿದೆ. 627 ಮಂದಿಯ ವರದಿ ನೆಗೆಟಿವ್ ಆಗಿದೆ.

ಇನ್ನು ಮಂಗಳವಾರದಂದು ಉಡುಪಿ ಜಿಲ್ಲೆಯಲ್ಲಿ ಪತ್ತೆಯಾದ ಎಲ್ಲಾ 150 ಮಂದಿ ಸೋಂಕಿತರು ಮುಂಬೈನಿಂದ ಬಂದವರು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ. ಇನ್ನು ಎರಡು ದಿನಗಳಲ್ಲಿ ಎರಡು ಸಾವಿರ ಮಂದಿಯನ್ನು ಪರೀಕ್ಷೆ ನಡೆಸಲಾಗಿದೆ. ಈ ಕಾರಣದಿಂದ ಒಂದೇ ದಿನ 150 ಮಂದಿಯಲ್ಲಿ ಪಾಸಿಟಿವ್ ಕಂಡುಬಂದಿದೆ. ಇದರಿಂದ ಜಿಲ್ಲೆಯ ಜನತೆ ಆತಂಕ, ಗಾಬರಿ ಪಡುವ ಅಗತ್ಯವಿಲ್ಲ. ಎಲ್ಲರಿಗೂ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ.

ಇಂದು ಕರೋನ ವೈರಸ್ ಪಾಸಿಟಿವ್ ವರದಿಯಲ್ಲಿ 9 ಮಂದಿ -10 ವರ್ಷದೊಳಗಿನ ಮಕ್ಕಳು, 3 ಮಂದಿ 60 ವರ್ಷಕ್ಕಿಂತ ಮೇಲ್ಪಟ್ಟವರು,  120 ಮಂದಿ ಪುರುಷರು, 30 ಮಂದಿ ಮಹಿಳೆಯರು ಒಳಗೊಂಡಿದ್ದರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English