- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕತಾರಿನಿಂದ ಬೆಂಗಳೂರು ಹಾಗು ಮಂಗಳೂರಿಗೆ ಹೆಚ್ಚುವರಿ ವಿಮಾನ ಸೇವೆಯನ್ನು ಯಾಚಿಸಿ ಪತ್ರ

hakki-pikki-dubai [1]ಕತಾರ್  :  ಕರೋನಾ ಮಹಾಮಾರಿಯ ತಾಂಡವ ಕತಾರಿನಲ್ಲಿ ಇನ್ನೂ ಹೆಚ್ಚುತ್ತಿರುವ ಕಾರಣ, ಹೆಚ್ಚಿನ ಪ್ರಮಾಣದಲ್ಲಿ ಕನ್ನಡಿಗರು ಕೆಲಸ ಕಳೆದುಕೊಂಡು, ಅನ್ನಾಹಾರಗಳಿಗೆ ಕಷ್ಟಪಡುತ್ತಿರುವರು, ಕೆಲವರ ಕುಟುಂಬದ ಸದಸ್ಯರು ಕರ್ನಾಟಕದಲ್ಲಿ ಕಾಲವಾಗಿ ಹೋಗಿರುವರು, ಅವರು ಹಿಂತಿರುಗಲು ತುದಿಗಾಲಿನಲ್ಲಿರುವರು, 6 ಜನ ಹಕ್ಕಿ-ಪಿಕ್ಕಿಗಳನ್ನು ಹಿಂದಕ್ಕೆ ಕಳುಹಿಸಬೇಕಾಗಿದೆ, ಕೆಲವರಿಗೆ ಅನಾರೋಗ್ಯದ ಕಾರಣ ಮಾತೃಭೂಮಿಗೆ ಹಿಂತಿರುಗಬೇಕಾಗಿದೆ, ಮತ್ತು ಹಲವರು ನಿರಾಶ್ರಿತರಾಗಿ ಬೇರೆ ದಾರಿ ಕಾಣದೆ ತಾಯ್ನಾಡಿಗೆ ಹೋಗಲು ಚಡಪಡಿಸುತ್ತಿರುವರು. ದಿನೇ ದಿನೇ ಇಂತಹವರ ಸಂಖ್ಯೆ ಹೆಚ್ಚುತ್ತಿದೆ ಹಾಗೂ ಪರಿಸ್ಥಿತಿ ಗಂಭೀರವಾಗುತ್ತಿದೆ ಎಂದು ಕನ್ನಡಿಗರ ಸಂಸ್ಥೆ ಭಾರತ ಸಮುದಾಯ ಹಿತೈಷಿ ವೇದಿಕೆ ಕೇಳಿಕೊಂಡಿದೆ.

ಭಾರತ ಸರಕಾರದಲ್ಲಿ ಕನ್ನಡಿಗರಾದ ಶ್ರೀ ಸದಾನಂದಗೌಡ, ಕೇಂದ್ರ ಮಂತ್ರಿಗಳು – ರಾಸಾಯನ ಹಾಗು ಗೊಬ್ಬರ ಮಂತ್ರಾಲಯ, ಮತ್ತು ಶ್ರೀ ಸುರೇಶ ಅಂಗಡಿ, ರಾಜ್ಯ ಮಂತ್ರಿಗಳು – ರೈಲ್ವೇ ಮಂತ್ರಾಲಯ, ಇವರುಗಳ ಸಹಕಾರ ಸಹಯೋಗದಿಂದ, ಮತ್ತು ಕರ್ನಾಟಕ ಸರಕಾರದ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್. ಎಡಿಯೂರಪ್ಪ, ಶ್ರೀ ನಳಿನ್ ಕುಮಾರ್ ಕಟಿಲ್, ಅಧ್ಯಕ್ಷರು – ಭಾರತೀಯ ಜನತಾ ಪಾರ್ಟಿ, ಕರ್ನಾಟಕ ರಾಜ್ಯ, ಹಾಗು ಶ್ರೀ ಸಿ.ಟಿ. ರವಿ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಸಚಿವರು, ಕರ್ನಾಟಕ ರಾಜ್ಯ ಸರಕಾರ, ಇವರುಗಳಿಗೆ ಕರ್ನಾಟಕ ಸಂಘ ಕತಾರ್ ಹಾಗು ಕರ್ನಾಟಕ ಮೂಲದ ಇತರ ಸಹೋದರ ಸಂಸ್ಥೆಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕನ್ನಡಿಗರನ್ನು ಕತಾರಿನಿಂದ ಮಾತೃಭೂಮಿಗೆ ಹಿಂತಿರುಗಲು ವಿಮಾನದ ವ್ಯವಸ್ಥೆ ಮಾಡುವಂತೆ ಕೋರಿಕೊಳ್ಳುತ್ತಿದೆ. ಇದರಿಂದ ಬಹು ದೊಡ್ಡ ಉಪಕಾರವಾಗುವುದೆಂದು ಪುನರುಚ್ಚರಿಸುತ್ತಾ, ಮನವಿ ಸಲ್ಲಿಸಲಾಗುತ್ತಿದೆ. ಹಿಂತಿರುಗುವವರು ನಿಯಮಾನುಸಾರ ಕರೋನಾ ಸಂಬಂಧಿಸಿದಂತೆ ಸರಕಾರದ ಸೂಚನೆಗಳನ್ನು ಪಾಲಿಸುವವರು. ’ಭಾರತ ಸಮುದಾಯ ಹಿತೈಷಿ ವೇದಿಕೆ’ಯ (ಐ.ಸಿ.ಬಿ.ಎಫ಼್) ಕರ್ನಾಟಕ ಪ್ರತಿನಿಧಿಗಳಾದ ಶ್ರೀ ಮಹೇಶ್ ಗೌಡ, ಉಪಾಧ್ಯಕ್ಷರು, ಐ.ಸಿ.ಬಿ.ಎಫ಼್ ಮತ್ತು ಶ್ರೀ ಸುಬ್ರಮಣ್ಯ ಹೆಬ್ಬಾಗಿಲು, ಜಂಟಿ ಕಾರ್ಯದರ್ಶಿ, ಐ.ಸಿ.ಬಿ.ಎಫ಼್, ಮತ್ತು ಕರ್ನಾಟಕ ಸಂಘ ಕತಾರಿನ ಅಧ್ಯಕ್ಷರಾದ ಶ್ರೀ ನಾಗೇಶ್ ರಾಯರು, ಕತಾರಿನಲ್ಲಿರುವ ಕನ್ನಡಿಗರನ್ನು ಸಂತೈಸುತ್ತಾ, ಅವರ ಹಾರೈಕೆ ಮಾಡುತ್ತಿರುವವರು, ತಮಗೆ ಸಾಧ್ಯವಾದ ಸಹಾಯವನ್ನು ಮಾಡುತ್ತಿರುವರು. ಇವರುಗಳ ವಿಮಾನ ಸೇವೆಗಾಗಿ ಪರಿಶ್ರಮಿಸುತ್ತಿರುವವರು.

hakki-pikki-dubai [2]ಕತಾರಿನ ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಭಾರತೀಯ ರಾಯಭಾರಿ ಕಚೇರಿಯು ಐ.ಸಿ.ಬಿ.ಎಫ಼್ ಮೂಲಕ ದಕ್ಷಿಣ ಭಾರತದ ರಾಜ್ಯಗಳ ರಾಜಧಾನಿಗಳಿಗೆ ವಿಶೇಷ ವಿಮಾನಗಳನ್ನು ನಿಗದಿಪಡಿಸಲಾಗುತ್ತಿದೆ. ವಿಶೇಷ ವಿಮಾನಕ್ಕೆ ಬೇಕಾದ ಕಾಗದ ಪತ್ರಗಳು, ಅನುಮತಿ-ಪರವಾನಿಗೆಗಳನ್ನು ಶ್ರೀ ಮಹೇಶ್ ಗೌಡ ಮತ್ತು ಶ್ರೀ ಸುಬ್ರಮಣ್ಯ ಹೆಬ್ಬಾಗಿಲು ಅವರು ಪ್ರತ್ಯೇಕವಾಗಿ ವ್ಯವಸ್ಥೆ ಮಾಡುತ್ತಿರುವರು.

ಕೊಲ್ಲಿದೇಶವಾದ ಕತಾರಿನಲ್ಲಿರುವ ಕನ್ನಡಿಗರಿಗೆ, ಭಾರತ ಸರಕಾರ ಹಾಗು ಕರ್ನಾಟಕ ಸರಕಾರವು ಮತ್ತೆ ತಮ್ಮ ವಿಶಾಲ ಹೃದಯದಿಂದ, ಅಭಯ ಹಸ್ತವನ್ನು ನೀಡಿ ಸಹಾಯ ಮಾಡಿ, ಬೆಂಗಳೂರಿಗೆ ಮತ್ತು ಮಂಗಳೂರಿಗೆ ವಿಮಾನ ಸೇವೆಯನ್ನು ವ್ಯವಸ್ಥೆ ಮಾಡುವುದೆಂದು ನಂಬಿ, ಅದೇ ವಿಶ್ವಾಸ, ಆಸೆ ಹೊತ್ತು ಮತ್ತೊಮ್ಮೆ ಈ ಮೂಲಕ ಕೋರಿಕೊಳ್ಳಲಾಗುತ್ತಿದೆ ಎಂದು  ಕತಾರಿನಲ್ಲಿರುವ ಐ.ಸಿ.ಬಿ.ಎಫ಼್ (ಭಾರತೀಯ ಸಮುದಾಯ ಹಿತೈಷಿ ಸಮಿತಿ) ಸಂಸ್ಥೆಯ ಪ್ರತಿನಿಧಿ ಸುಬ್ರಮಣ್ಯ ಹೆಬ್ಬಾಗಿಲು  ಕೊಂಡಿದ್ದಾರೆ.

ಜೊತೆಗೆ  ಕತಾರಿನಿಂದ ಕನ್ನಡಿಗರ ಆರ್ತನಾದವನ್ನು ಕೇಳಿ, ಸ್ಪಂದಿಸಿದ ಭಾರತ ಹಾಗು ಕರ್ನಾಟಕ ಸರಕಾರವು, ದಿನಾಂಕ 22-ಮೇ-2020 ರಂದು “ಒಂದೇ ಭಾರತ ನಿಯೋಗ”ದ ಅಡಿಯಲ್ಲಿ ದೋಹಾದಿಂದ ಬೆಂಗಳೂರಿಗೆ ಪ್ರತ್ಯೇಕ ವಿಮಾನವನ್ನು ನಿಗದಿಪಡಿಸಿ ಹಾರಲು ವ್ಯವಸ್ಥೆ ಮಾಡಿದುದಕ್ಕೆ ಅನಂತಾನಂತ ವಂದನೆಗಳನ್ನು ಸಲ್ಲಿಸಿದ್ದಾರೆ.