ಹುಬ್ಬಳ್ಳಿಯಿಂದ ಮತ್ತೆ ವಿಮಾನ ಹಾರಾಟ ಸಾಧ್ಯತೆ

4:56 PM, Friday, June 19th, 2020
Share
1 Star2 Stars3 Stars4 Stars5 Stars
(No Ratings Yet)
Loading...

indigo flightಹುಬ್ಬಳ್ಳಿ : ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಬಂದ್‌ ಆಗಿದ್ದ ಹುಬ್ಬಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜೂ.೨೪ ರಿಂದ ವಿಮಾನ ಸಂಚಾರ ಆರಂಭಿಸಲು ಇಂಡಿಗೋ ಏರಲೈನ್ಸ್‌ ಸಿದ್ಧತೆ ನಡೆಸಿದೆ.

ಈ ಕುರಿತು ಮಾಹಿತಿ ನೀಡಿರುವ ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ್‌ ಠಾಕ್ರೆ, ಹುಬ್ಬಳ್ಳಿ-ಕಣ್ಣೂರು ಮತ್ತು ಹುಬ್ಬಳ್ಳಿ- ಗೋವಾ ವಿಮಾನ ಸಂಚಾರಕ್ಕೆ ಅವಶ್ಯಕತೆಯಿರುವಷ್ಟು ಪ್ರಯಾಣಿಕರು ಬಂದರೆ ವಿಮಾನ ಹಾರಲಿವೆ ಎಂದಿದ್ದಾರೆ.

ಈ ಹಿಂದೆಯೂ ವಿಮಾನ ಪ್ರಯಾಣ ಆರಂಭಿಸಲು ಪ್ರಯತ್ನಿಸಲಾಗಿತ್ತು ಆದರೆ ಸೂಕ್ತ ಪ್ರಮಾಣದಲ್ಲಿ ಪ್ರಯಾಣಿಕರು ಬರದೇ ಇರದ್ದರಿಂದ ಬಂದ್‌ ಮಾಡಲಾಗಿತ್ತು.

ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ನಿರೀಕ್ಷೆಯಷ್ಟು ಪ್ರಯಾಣಿಕರು ಬಂದರೆ ವಿಮಾನ ಸಂಚಾರ ಆರಂಭಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English