- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ 12 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆ

DK-corona [1]ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 12 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಇರುವುದು  ಜೂನ್ 22, ಸೋಮವಾರ ವರದಿಯಾಗಿದೆ.

ಹೊಸ ಪ್ರಕರಣಗಳ ಪೈಕಿ 11 ಮಂದಿ ವಿದೇಶದಿಂದ ಮರಳಿದವರಾಗಿದ್ದಾರೆ. ಒಬ್ಬರ ಪಾಸಿಟಿವ್ ಪ್ರಕರಣ ಐ ಎಲ್ ಐ ಎಂದು ಗುರುತಿಸಲಾಗಿದೆ. 7  ಪುರುಷರಲ್ಲಿ ಸೋಂಕು ದೃಢಪಟ್ಟರೆ,  45 ವರ್ಷದ ಓರ್ವ ಮಹಿಳೆಯಲ್ಲೂ ಪಾಸಿಟಿವ್ ಕಂಡುಬಂದಿದೆ. ಇಬ್ಬರು ಯುವಕರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ಈ ನಡುವೆ ಸೋಮವಾರದಂದು 257 ಮಂದಿಯ ವರದಿ ನೆಗೆಟಿವ್ ಬಂದಿದೆ.  ಹನ್ನೆರಡು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ.