- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ದಿ. ಜಾರ್ಜ್ ಫೆರ್ನಾಂಡಿಸ್ ರ 91 ನೇ ಹುಟ್ಟು ಹಬ್ಬದ ಸಂಸ್ಮರಣೆ

george-fernandes [1]ಮುಂಬಯಿ : ಮುಂಬಯಿ ಮಹಾನಗರದಲ್ಲಿ ನಾಡಿನ ಕರಾವಳಿಯ ಮೂರು ಜಿಲ್ಲೆಗಳಾದ ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ವಿವಿಧ ಜಾತಿ ಬಾಂಧವರು ಶತಮಾನದ ಹಿಂದೆಯೇ ತಮ್ಮ ತಮ್ಮ ಜಾತೀಯ ಸಂಘಟನೆಯನ್ನು ಕಟ್ಟಿ ಮುಂಬಯಿಯಲ್ಲಿ ಮಾತ್ರವಲ್ಲ ನಾಡಿನಲ್ಲಿಯೂ ಸಮಾಜ ಸೇವೆ ಮಾಡುತ್ತಾ ಬರುವುದರೊಂದಿಗೆ ನಾಡಿನ ಹಾಗೂ ಅವರವರ ಜಾತೀಯ ಸಂಸ್ಕೃತಿಯನ್ನು ಹೊರನಾಡಿನಲ್ಲಿಯೂ ಉಳಿಸಿ ಬೆಳೆಸುತ್ತಾ ಬಂದಿರುವರು. ಮಹಾನಗರದ ವಿವಿಧ ಜಾತೀಯ ಸಂಘಟನೆಗಳ ಮುಖಂಡರು, ರಾಜಕಾರಣಿಗಳು, ಧಾರ್ಮಿಕ ನೇತಾರರು ಹಾಗೂ ವಿವಿಧ ಗಣ್ಯರ ಬೆಂಬಲದೊಂದಿಗೆ, ಕರಾವಳಿಯ ಈ ಜಿಲ್ಲೆಗಳ ಪ್ರಗತಿಗಾಗಿ ಕಳೆದ ಹಲವಾರು ವರ್ಷಗಳಿಂದ ಯಶಸ್ವಿ ಹೋರಾಟ ನಡೆಸುತ್ತಾ ಬಂದಿರುವ, ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ. ಈ ಸಮಿತಿಗೆ ಆರಂಭದಿಂದ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ, ಕೊಂಕಣ ರೈಲ್ವೆಯ ಶಿಲ್ಪಿ ಎಂದೇ ಕರೆಯಬಹುದಾದ, ಜಾರ್ಜ್ ಫೆರ್ನಾಂಡೀಸ್ ಅವರ ಜನ್ಮ ದಿನವನ್ನು ಪ್ರತೀ ವರ್ಷ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ಅದ್ದೂರಿಯಿಂದ ಆಚರಿಸುತ್ತಾ ಬಂದಿದ್ದು ಇದೀಗ ಜಗತ್ತಿಗೇ ಆತಂಕವನ್ನುಂಟುಮಾಡಿದ ಮಹಾಮಾರಿ ಕೊರೋನಾದಿಂದಾಗಿ ಸರಕಾರವು ಕೈಗೊಂಡ ಲಾಕ್ ಡೌನ್ ನಿಂದಾಗಿ ಈ ವರ್ಷದ ದಿ. ಶ್ರೀ ಜಾರ್ಜ್ ಫೆರ್ನಾಂಡಿಸ್ ರ 91 ನೇ ಹುಟ್ಟುಹಬ್ಬದ ಸಂಸ್ಮರಣೆ ಸಮಾರಂಭವನ್ನು ವೆಬಿನಾರ್ ಮೂಲಕ ಆಚರಿಸಲಾಯಿತು.

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಮಾರ್ಗದರ್ಶಕರೂ, ದೇಶದ ಅಪ್ರತಿಮ ಜನ ಮೆಚ್ಚಿದ ನಾಯಕರೂ, ಕಾರ್ಮಿಕ ಮುಖಂಡರೂ ಮತ್ತು ಮಾಜಿ ರಕ್ಷಣಾ ಮಂತ್ರಿಯಾಗಿದ್ದ ಶ್ರೀ ಜಾರ್ಜ್ ಫೆರ್ನಾಂಡಿಸ್ ಅವರು ಕಳೆದ ವರ್ಷ ನಮ್ಮೆಲ್ಲರನ್ನು ಅಗಲಿದ್ದು ಅವರ 91 ನೇ ಹುಟ್ಟುಹಬ್ಬದ ಸಂಸ್ಮರಣೆಯನ್ನು ಜೂ. 3 ರಂದು ಜಾಲತಾಣದಲ್ಲಿ ನಡೆಸಿದ ಸಭೆಯಲ್ಲಿ ಆಚರಿಸಲಾಗಿದ್ದು ಪ್ರಾರಂಭದಲ್ಲಿ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನದಾಸ್ ಅವರು ಸರ್ವರನ್ನೂ ಸ್ವಾಗತಿಸಿ ಸಮಿತಿಯ ದಿವ್ಯ ಚೇತನರಾಗಿದ್ದ ದಿವಂಗತ ಜಾರ್ಜ್ ಫೆರ್ನಾಂಡಿಸ್ ಅವರ ಹುಟ್ಟುಹಬ್ಬದ ಸಾಂಕೇತಿಕ ಆಚರಣೆಯ ಬಗ್ಗೆ ಪ್ರಸ್ತುತ ಪಡಿಸಿದರು. ಜಾರ್ಜ್ ಫೆರ್ನಾಂಡಿಸ್ ರ ನಿಕಟ ವರ್ತಿಗಳೂ, ಸಮಿತಿಯ ಸಂಸ್ಥಾಪಕರೂ ಮತ್ತು ಅಧ್ಯಕ್ಷರಾದ ತೋನ್ಸೆ ಜಯಕೃಷ್ಣ ಎ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಸಮಿತಿಯ ಗೌರವ ಕೋಶಾಧಿಕಾರಿ ಸುರೇಂದ್ರ ಸಾಲಿಯಾನ್, ಮಾಜಿ ಅಧ್ಯಕ್ಷರಾದ ಹರೀಶ್ ಕುಮಾರ್ ಶೆಟ್ಟಿ, ಜವಾಬ್ ಅಧ್ಯಕ್ಷರಾದ ಸಿ ಎ ಐ ಆರ್ ಶೆಟ್ಟಿ, ಬಿಲ್ಲವರ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷರಾದ ಎಲ್ ವಿ ಅಮೀನ್ ಮತ್ತು ನಿತ್ಯಾನಂದ ಡಿ ಕೋಟ್ಯಾನ್, ಹಿರಿಯ ಕಾರ್ಮಿಕ ನಾಯಕರಾದ ಫೆಲಿಕ್ಸ್ ಡಿ ಸೋಜಾ, ಮೊಗವೀರ ವ್ಯವಸ್ಥಾಪಕ ಮಂಡಳಿ, ಮುಂಬೈ ಇದರ ಅಧ್ಯಕ್ಷರಾದ ಕೆ ಎಲ್ ಬಂಗೇರ, ಸಮಿತಿಯ ಉಪಾಧ್ಯಕ್ಷರಾದ ಪಿ .ಡಿ. ಶೆಟ್ಟಿ, ಸಮಿತಿಯ ಉಪಾಧ್ಯಕ್ಷ, ತೀಯಾ ಸಮಾಜ ಮುಂಬಯಿಯ ಮಾಜಿ ಅಧ್ಯಕ್ಷರಾದ ಚಂದ್ರ ಶೇಖರ್ ಬೆಲ್ಚಡ, ಸಮಿತಿಯ ಜೊತೆ ಕಾರ್ಯದರ್ಶಿ ಹ್ಯಾರಿ ಸಿಕ್ವೇರಾ, ಅಡ್ವೋಕೇಟ್ ಮೋರ್ಲಾ ರತ್ನಾಕರ್ ಶೆಟ್ಟಿ, ವಿಶ್ವಕರ್ಮ ಅಸೋಸಿಯೇಷನ್ ಅಧ್ಯಕ್ಷರಾದ ಸದಾನಂದ ಆಚಾರ್ಯ, ದೇವಾಡಿಗ ಸಂಘ ಮುಂಬಯಿಯ ಅಧ್ಯಕ್ಷರಾದ ರವಿ ಎಸ್ ದೇವಾಡಿಗ, ಕುಲಾಲ ಸಂಘ ಮುಂಬಯಿಯ ಅಧ್ಯಕ್ಷರಾದ ದೇವದಾಸ್ ಕುಲಾಲ್, ಭಂಡಾರಿ ಸೇವಾ ಸಂಘ ಮುಂಬಯಿಯ ಅಧ್ಯಕ್ಷರಾದ ಅಡ್ವೋಕೇಟ್ ಆರ್ ಎಮ್ ಭಂಡಾರಿ, ಹಿರಿಯ ಪತ್ರಕರ್ತರಾದ ದಯಾಸಾಗರ ಚೌಟ, ಸಮಿತಿಯ ಗೌರವ ಕಾರ್ಯದರ್ಶಿ ಪ್ರೊಫೆಸರ್ ಶಂಕರ್ ಉಡುಪಿ, ವಿದ್ಯಾದಾಯಿನಿ ಸಭಾದ ಕಾರ್ಯದರ್ಶಿ ಚಿತ್ರಾಪು ಕೆ ಎಮ್ . ಕೋಟ್ಯಾನ್, ಬಿಲ್ಲವರ ಅಸೋಸಿಯೇಷನ್ ಚೆಂಬೂರು ಸ್ಥಳೀಯ ಸಮಿತಿ ಕಾರ್ಯಾಧ್ಯಕ್ಷರಾದ ಎಮ್ ಎನ್ ಕರ್ಕೇರ, ಪದ್ಮಶಾಲಿ ಸೇವಾ ಸಂಘ ಮುಂಬಯಿಯ ಅಧ್ಯಕ್ಷರಾದ ಉತ್ತಮ ಶೆಟ್ಟಿಗಾರ್, ಒಕ್ಕಲಿಗರ ಮಹಾ ಮಂಡಲ ಮುಂಬಯಿಯ ಅಧ್ಯಕ್ಷರಾದ ಜಿತೇಂದ್ರ ಗೌಡ, ಸಮಿತಿಯ ಸದಸ್ಯರುಗಳಾದ ನ್ಯಾ. ದಯಾನಂದ ಶೆಟ್ಟಿ, ಬಂಟ್ಸ್ ಲಾ ಫ಼ೋರಂ ನ ಕಾರ್ಯಾಧ್ಯಕ್ಷ ನ್ಯಾ. , ಡಾ. ಪ್ರಭಾಕರ ಶೆಟ್ಟಿ, ಬೋಳ ಡಿ. ಕೆ. ಶೆಟ್ಟಿ, ಅಡ್ವೋಕೇಟ್ ಶಿವರಾಮ ನಾಯ್ಕ್, ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ನ ಕಾರ್ಯಾಧ್ಯಕ್ಷ ಕುಟ್ಪಾಡಿ ಚಂದ್ರ ಶೆಟ್ಟಿ, ಶಂಕರ್ ಶೆಟ್ಟಿ, ಚಿತ್ತರಂಜನ್ ಶೆಟ್ಟಿ, ವಸಂತ್ ಶೆಟ್ಟಿ, ತೇಜಸ್ವಿ ಶಂಕರ್ ವೆಬಿನಾರ್ ಸಭೆಯಲ್ಲಿ ಉಪಸ್ಥಿತರಿದ್ದರು.

ಸಮಿತಿಯ ಉಪಾಧ್ಯಕ್ಷರೂ ಆದ ನಿತ್ಯಾನಂದ ಡಿ. ಕೋಟ್ಯಾನ್ ರವರು ಪ್ರಾರಂಭದಲ್ಲಿ ಮಾತನಾಡುತ್ತ ಸಮಿತಿಯ ಕಳೆದ ಇಪ್ಪತ್ತು ವರ್ಷಗಳಲ್ಲಿನ ಕಾರ್ಯ ಸಾಧನೆಗಳಲ್ಲಿ ಜಾರ್ಜ್ ಫೆರ್ನಾಂಡಿಸ್ ರ ಮಾರ್ಗದರ್ಶನ ಮತ್ತು ಬೆಂಬಲದ ಬಗ್ಗೆ ಸವಿಸ್ತಾರವಾಗಿ ಮಾತನಾಡಿ ಅವರಿಗೆ ಗೌರವಾರ್ಪಣೆಗೈದರು.

ಸಭೆಯಲ್ಲಿ ಉಪಸ್ಥಿತರಿದ್ದರು ಸರ್ವ ಮುಖಂಡರು ಶ್ರೀ ಜಾರ್ಜ್ ಫೆರ್ನಾಂಡಿಸ್ ರ ಜೀವನ ಚರಿತ್ರೆ, ಕಾರ್ಯಸಾಧನೆ, ನಾಯಕತ್ವದ ಗುಣಗಳು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶ್ರೇಷ್ಠ ರಾಜಕಾರಣಿ, ಮರೆಯಲಾಗದ ದಿವ್ಯ ಚೇತನದ ಬಗ್ಗೆ ಮಾತನಾಡಿ ಗೌರವ ಸಲ್ಲಿಸಿದರು

ಅಧ್ಯಕ್ಷತೆಯನ್ನು ವಹಿಸಿದ ತೋನ್ಸೆ ಜಯಕೃಷ್ಣ ಎ ಶೆಟ್ಟಿ ಯವರು ಮಾತನಾಡುತ್ತಾ ಜಾರ್ಜ್ ಫೆರ್ನಾಂಡಿಸ್ ಮಹಾನ್ ಚೇತನ ಸಾರ್ವಜನಿಕ ಕ್ಷೇತ್ರಗಳ ಲ್ಲಿ ಸೇವೆ ಮಾಡುವುವರಿಗೆ ಆದರ್ಶಪ್ರಾಯವಾದುದು, ಅವರ ಆಶೀರ್ವಾದ ಸದಾ ಸಮಿತಿಯ ಮೇಲಿದ್ದು ಸಮಿತಿಯ ಎಲ್ಲಾ ಯೋಜನೆಗಳು ಜಾರ್ಜ್ ಫೆರ್ನಾಂಡಿಸ್ ರ ಚಿಂತನೆ ಯಂತೆಯೇ ಮುಂದುವರಿಯುವುದೆಂದರು. ಅವರು ಜಾರ್ಜ್ ಫೆರ್ನಾಂಡಿಸ್ ರ ಅಂತಿಮ ದಿನಗಳನ್ನು ಮರುಕಳಿಸುತ್ತ, ಅದರಪೂರ್ವಕ ಗೌರವಾರ್ಪಣೆಗೈದರು.

ಜಾಲತಾಣದಲ್ಲಿ ಸಭೆ ನಡೆಸುವರೇ ಉಡುಪಿಯ ತೇಜಸ್ವಿ ಶಂಕರ್ ಮತ್ತು ಸಮಿತಿಯ ಮಾಜಿ ಅಧ್ಯಕ್ಷರಾದ ಹರೀಶ್ ಕುಮಾರ್ ಎಮ್ ಶೆಟ್ಟೆಯವರು ಸಹಕರಿಸಿದ್ದರು.

ವರದಿ : ಈಶ್ವರ ಎಂ. ಐಲ್