ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಒಂದೇ ದಿನ 2062 ಕ್ಕೆ ಏರಿಕೆ

12:04 AM, Thursday, July 9th, 2020
Share
1 Star2 Stars3 Stars4 Stars5 Stars
(No Ratings Yet)
Loading...

karnataka corona ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಎರಡು ಸಾವಿರದ ಗಡಿ ದಾಟಿದ್ದು ಬುಧವಾರ 2062 ಮಂದಿಗೆ ಕೊರೋನಾ ತಗುಲಿದೆ ಇದರೊಂದಿಗೆ ರಾಜ್ಯದ ಒಟ್ಟಾರೆ ಕೊರೋನಾ ಸೋಂಕಿತರ ಸಂಖ್ಯೆ 28,877 ತಲುಪಿದೆ. ಅಲ್ಲದೆ ಕಳೆದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಸೋಂಕಿನಿಂದಾಗಿ 54 ಮಂದಿ ಸಾವನ್ನಪ್ಪಿದ್ದಾರೆ. ಇದು ಕೊರೋನಾ ಪ್ರಾರಂಭವಾದಂದಿನಿಂದ ರಾಜ್ಯದಲ್ಲಿ ಒಂದೇ ದಿನ ಸಂಭವಿಸಿದ ಸಾವಿನ ಪ್ರಮಾಣದ ಅತಿ ದೊಡ್ಡ ಸಂಖ್ಯೆಯಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು 1148 ಪ್ರಕರಣಗಳು ವರದಿಯಾಗಿದ್ದರೆ ಒಟ್ಟು ಸಂಖ್ಯೆ 12,509ಕ್ಕೆ ಏರಿಕೆಯಾಗಿದೆ. ಅಲ್ಲದೆ ದಕ್ಷಿಣ ಕನ್ನಡ 183, ಧಾರವಾಡ 89, ಕಲಬುರಗಿ 66, ಬಳ್ಳಾರಿ 59 ಹಾಗೂ ಮೈಸೂರು ಜಿಲ್ಲೆಯಲ್ಲಿ 59 ಜನರಿಗೆ ಕೊರೋನಾ ದೃಢವಾಗಿದೆ. ಚಾಮರಾಜನಗರ, ಕೊಡಗು ಜಿಲ್ಲೆಯಲ್ಲಿ ಸೋಂಕು ಪ್ರಕರಣಗಳು ಇಂದು ವರದಿಯಾಗಿಲ್ಲ.

ರಾಜ್ಯದಲ್ಲಿ 16 ಸಾವಿರದ 527 ಸಕ್ರಿಯ ಪ್ರಕರಣಗಳು ವೈದ್ಯರ ನಿಗಾದಲ್ಲಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.

ಬೆಂಗಳೂರು ನಗರದಲ್ಲಿ ಇಂದು 22 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ನಗರದಲ್ಲಿ ಮೃತಪಟ್ಟವರ ಸಂಖ್ಯೆ 177 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ತುರ್ತು ನಿಗಾ ಘಟಕದಲ್ಲಿ452 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಕ್ಷಿಣ ಕನ್ನಡ 183 , ಧಾರವಾಡ 89 , ಕಲಬುರಗಿ 66, ಬಳ್ಳಾರಿ, ಮೈಸೂರು ತಲಾ 59, ಬೆಂಗಳೂರು ಗ್ರಾಮಾಂತರ 37 , ರಾಮನಗರ 34, ಚಿಕ್ಕಬಳ್ಳಾಪುರ 32, ಉಡುಪಿ31, ಹಾವೇರಿ 31, ಬೀದರ್ 29, ಬೆಳಗಾವಿ 27, ಹಾಸನ 26, ಬಾಗಲಕೋಟೆ ತುಮಕೂರು 24, ಚಿಕ್ಕಮಗಳೂರು 23, ಮಂಡ್ಯ 29, ಉತ್ತರ ಕನ್ನಡ 19, ದಾವಣಗೆರೆ 18, ರಾಯಚೂರು, ಶಿವಮೊಗ್ಗ 17, ಕೋಲಾರ 16, ಯಾದಗಿರಿ, ಕೊಪ್ಪಳ 11, ಗದಗ 5, ವಿಜಯಪುರ 4, ಚಿತ್ರದುರ್ಗ 2 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English