- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬಂಟ್ವಾಳ ತಾಲೂಕಿನ ಅಕ್ಕ ಪಕ್ಕದ ಮನೆಯ 16 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆ

Bantwal Covid [1]ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುದು ಗ್ರಾಮದಲ್ಲಿ ಇಂದು ಒಂದೇ ದಿನ 16 ಜನರಿಗೆ ಕೋವಿಡ್-19 ಸೋಂಕು ದೃಢವಾಗಿದೆ.

ಗ್ರಾಮದ ಒಂದು ಮನೆಯ 12 ಜನರಿಗೆ ಹಾಗೂ ಇನ್ನೊಂದು ಮನೆಯ ನಾಲ್ಕು ಮಂದಿಗೆ ಸೋಂಕು ದೃಢಪಟ್ಟಿದೆ. ಕಳೆದ ಕೆಲವು ದಿನಗಳ ಹಿಂದೆ ಈ ಎರಡೂ ಮನೆಗಳ ಸದಸ್ಯರಿಗೆ ಸೋಂಕು ದೃಢಪಟ್ಟಿತ್ತು. ಇವರ ಸಂಪರ್ಕದ ಕಾರಣದಿಂದ ಸೋಂಕು ದೃಢವಾಗಿದೆ ಎನ್ನಲಾಗಿದೆ.

ತಾಲೂಕಿನ ಉಳಿದ ಪ್ರಕರಣಗಳ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ. ತಾಲೂಕಿನಲ್ಲಿ ಜು. ಎಂಟರಂದು 12, ಜು. ಒಂಬತ್ತರಂದು 26 ಪ್ರಕರಣಗಳು ದೃಢಪಟ್ಟಿತ್ತು.