ಉಡುಪಿ ಜಿಲ್ಲೆ14 ದಿನ ಸಂಪೂರ್ಣ ಲಾಕ್ ಡೌನ್, ಗಡಿಗಳು ಬಂದ್, ಬಸ್ಸು ಸಂಚಾರ ಇಲ್ಲ

9:21 PM, Wednesday, July 15th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

udupi DCಉಡುಪಿ  : ರಾಜ್ಯ ಸರಕಾರ ಕೋವಿಡ್ 19  ನಿಯಂತ್ರಣಕ್ಕಾಗಿ ಲಾಕ್ ಡೌನ್ ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನೀಡಿ ರುವ ಹಿನ್ನಲೆ . ಉಡುಪಿ ಜಿಲ್ಲೆಯಲ್ಲಿ ಲಾಕ್ ಡೌನ್ ವಿಧಿಸದಿರುವ ತೀರ್ಮಾನವನ್ನು ಮಂಗಳವಾರ ಜಿಲ್ಲಾಧಿಕಾರಿ ಜಿ. ಜಗದೀಶ್ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಜುಲೈ 15ರ ರಾತ್ರಿ 8 ಗಂಟೆಯಿಂದ ಜುಲೈ 29ರವರೆಗೆ ಅಂದರೆ 14 ದಿನಗಳ ಕಾಲ ಜಿಲ್ಲೆಯ ಗಡಿಗಳನ್ನು ಸಂಪೂರ್ಣ ಸೀಲ್ ಡೌನ್ ಮಾಡುವ ನಿರ್ಧಾರಕ್ಕೆ ಸಭೆ ಬಂದಿತ್ತು. ಮತ್ತು ಈ 14 ದಿನಗಳ ಕಾಲ ಉಡುಪಿ ಜಿಲ್ಲೆಯಲ್ಲಿ ಖಾಸಗಿ ಮತ್ತು ಸರಕಾರಿ ಬಸ್ಸುಗಳು ಸೇರಿದಂತೆ ಸಾರ್ವಜನಿಕ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸುವ ನಿರ್ಧಾರವನ್ನೂ ಈ ಸಭೆಯಲ್ಲಿ ಮಾಡಲಾಗಿತ್ತು.

ಹಾಗಾಗಿ ಜುಲೈ 15ರ ರಾತ್ರಿ 8 ಗಂಟೆಯಿಂದ ಜುಲೈ 29ರವರೆಗೆ ಉಡುಪಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಬಸ್ಸುಗಳ ಸಂಚಾರ ಇರುವುದಿಲ್ಲ.

ಹೊರ ಜಿಲ್ಲೆ, ಹೊರ ರಾಜ್ಯದಿಂದ ಬರುವವರು,ಹೋಗುವವರು ಜು. 15ರ ರಾತ್ರಿ 8 ಗಂಟೆಯೊಳಗೆ ಬರಲು, ಹೋಗಲು ಅವಕಾಶ. ಜಿಲ್ಲೆಯ ಗಡಿಗಳನ್ನು ದಾಟಿ ಕೆಲಸದ ನಿಮಿತ್ತ ನಿತ್ಯ ಹೋಗುವವರಿಗೆ, ತುರ್ತು ಸಂದರ್ಭಗಳಲ್ಲಿ ಹೋಗುವವರಿಗೆ, ವಿಮಾನ ನಿಲ್ದಾಣಕ್ಕೆ ಹೋಗುವವರಿಗೆ ಜಿಲ್ಲಾಡಳಿತದಿಂದ ಪಾಸ್‌ಗಳನ್ನು ನೀಡಲಾಗುವುದು ಎಂದು ತಿಳಿಸಲಾಗಿದೆ.

ಯಾವುದೇ ಧಾರ್ಮಿಕ, ರಾಜಕೀಯ, ಸಾಮಾಜಿಕ ಸಭೆ ಸಮಾರಂಭ ನಡೆಯುವಂತಿಲ್ಲ. ಯಾವುದೇ ಕಾರ್ಯಕ್ರಮ ನಡೆಯುವುದು ನಿಷಿದ್ಧ. ಸಂತೆಗಳು ಇರುವುದಿಲ್ಲ. ಸಾರ್ವಜನಿಕ ಹಬ್ಬ ಆಚರಣೆ ಇರುವುದಿಲ್ಲ. ಪೂರ್ವನಿರ್ಧರಿತ ಮದುವೆ ಮಾತ್ರ ತಹಶೀಲ್ದಾರರಿಂದ ಅನುಮತಿ ಪಡೆದು 50 ಜನರೊಳಗೆ ನಡೆಸಬಹುದು.

ಅಗತ್ಯ ವಸ್ತುಗಳು ಹಾಲು, ಮೆಡಿಕಲ್  ದಿನಸಿ ಅಂಗಡಿ, ಶಾಪ್‌ ಗಳು ತೆರೆದಿರುತ್ತವೆ.

 

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English