- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೊರೊನಾ ರೋಗಿಯ ಚಿಕಿತ್ಸೆಗೆ ಇಂಡಿಯಾನ ಆಸ್ಪತ್ರೆಯ ಬಿಲ್ 1,98,664 ರೂಪಾಯಿ

indiana Hospital [1]ಮಂಗಳೂರು : ಬಡವರನ್ನ ಹಿಂಡಿ ಹಿಪ್ಪೆ ಮಾಡುವ ಆಸ್ಪತ್ರೆಗಳು ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿವೆ. ಉಸಿರಾಟ ದ ತೊಂದರೆಯಿಂದ ಇಲ್ಲಿನ ಆಸ್ಪತ್ರೆಗಳಿಗೆ ದಾಖಲಾಗ ಬೇಕಾದರೆ ಕನಿಷ್ಠ ಒಂದು ಲಕ್ಷ ಡೆಪಾಸಿಟ್ ಇಡಬೇಕು, ಮತ್ತೆ ರೋಗಿ ಗುಣ ಮುಖನಾಗಿ ಹೊರಬರಬೇಕಾದರೆ  ಬಿಲ್ ಕಟ್ಟಲು ತನ್ನ ಅಸ್ತಿಯನ್ನೇ ಮಾರಬೇಕಾದ ಪರಿಸ್ಥಿತಿ ಬರಬಹುದು.

ಮಂಗಳೂರಿನ ಪಂಪ್ ವೆಲ್ ನಲ್ಲಿರುವ ಇಂಡಿಯಾನ ಆಸ್ಪತ್ರೆಯು ಕೊರೊನಾ ರೋಗಿಗಳಿಂದ ಅಧಿಕ ಮೊತ್ತದ ಹಣವನ್ನು ಪಡೆಯುತ್ತಿರುವುದಾಗಿ ಆರೋಪ ಕೇಳಿಬಂದಿತ್ತು. ಕೊರೊನಾ ರೋಗಿಗೆ 1,98,664 ರೂಪಾಯಿ ಬಿಲ್ ವಿಧಿಸಿದ್ದು, ಈ ಹಿನ್ನೆಲೆಯಲ್ಲಿ ಇಂಡಿಯಾನ ಆಸ್ಪತ್ರೆಯು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗೆ ಗ್ರಾಸವಾಗಿತ್ತು.

ಕೊರೊನಾ ರೋಗಿಯ ಚಿಕಿತ್ಸೆಗೆ ಲಕ್ಷಕ್ಕೂ ಅಧಿಕ ಬಿಲ್ ವಸೂಲಿ ಮಾಡಿದ್ದರ ಕುರಿತು ದೂರು ಕೇಳಿಬಂದಿತ್ತು. ಈ ದೂರಿನ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ತಂಡ ಇಂದು ಆಸ್ಪತ್ರೆಗೆ ಭೇಟಿ ನೀಡಿತ್ತು.

ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಆರೋಗ್ಯಾಧಿಕಾರಿಗಳಿದ್ದ ತಂಡ ಇಂದು ಬೆಳಿಗ್ಗೆ ಆಸ್ಪತ್ರೆಗೆ ಬಂದಿದ್ದು, ಆಸ್ಪತ್ರೆಯಲ್ಲಿ ಸಭೆ ನಡೆಸಿ ಮಾಹಿತಿ ಪರಿಶೀಲನೆ ನಡೆಸಿದರು.

ಬಿಲ್ ಬಗ್ಗೆ ಸ್ಪಷ್ಟನೆ ನೀಡಿದ ಆಸ್ಪತ್ರೆ ನಿರ್ದೇಶಕ ಸರ್ಕಾರಕ್ಕೆ ಬಿಲ್ ಬಗ್ಗೆ ದಾಖಲೆ ನೀಡುವುದಾಗಿ ತಿಳಿಸಿದ್ದಾರೆ.