- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪಾಂಡೇಶ್ವರದಲ್ಲಿರುವ ಪ್ರಧಾನ ಅಂಚೆ ಕಚೇರಿಗೂ ಬಂತು ಕೊರೋನಾ, ಸೋಮವಾರ 13 ಅಂಚೆ ಕಚೇರಿಗಳು ಬಂದ್

headpost-office [1]ಮಂಗಳೂರು :  ಪ್ರಧಾನ ಅಂಚೆ ಇಲಾಖೆಯ ಇಬ್ಬರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಮಂಗಳೂರಿನ 13 ಅಂಚೆ ಕಚೇರಿಗಳು ಸೋಮವಾರದಂದು ಸಾರ್ವಜನಿಕ ಸೇವೆ ಲಭ್ಯವಿರುವುದಿಲ್ಲ ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಎನ್ ತಿಳಿಸಿದ್ದಾರೆ.

ಮಂಗಳೂರಿನ ಪಾಂಡೇಶ್ವರದಲ್ಲಿರುವ ಪ್ರಧಾನ ಅಂಚೆ ಕಚೇರಿ, ಹಂಪನಕಟ್ಟಾ, ಅಶೋಕನಗರ, ಗಾಂಧಿನಗರ, ಬೋಳೂರು, ಕೂಳೂರು, ಕೊಂಚಾಡಿ, ಕಾವೂರು, ಬಿಜೈ, ಕೊಡಿಯಾಲ್ ಬೈಲ್, ಫಳ್ನೀರ್, ಫಿಶರಿಸ್ ಕಾಲೇಜ್, ಮಂಗಳೂರು ಕಲೆಕ್ಟರೇಟ್, ಎಸ್ ಓ ಅಂಚೆ ಕಚೇರಿಗಳು ಸೋಮವಾರದಂದು ಸಾರ್ವಜನಿಕ ಸೇವೆಗೆ ದೊರೆಯುವುದಿಲ್ಲ ಎಂದು ತಿಳಿದು ಬಂದಿದೆ.

ಮಂಗಳೂರಿನ ಪ್ರಧಾನ ಅಂಚೆ ಕಚೇರಿಯ ಇಬ್ಬರು ಸಿಬ್ಬಂದಿಗೆ ಇಂದು ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಇಬ್ಬರು ಅಂಚೆ ಇಲಾಖೆಯ ಕ್ಯಾಶ್ ಓವರ್ ಕರ್ತವ್ಯ ನಿರ್ವಹಿಸುತ್ತಿದ್ದು, ಮಂಗಳೂರಿನ ವಿವಿಧ ಅಂಚೆ ಇಲಾಖೆಗೆ ತೆರಳಿ ನಗದು ವಹಿವಾಟು ನೋಡಿಕೊಳ್ಳುತ್ತಿದ್ದರು. ಇದರಿಂದ ಇವರು ಕರ್ತವ್ಯಕ್ಕೆ ತೆರಳಿದ 13 ಅಂಚೆ ಕಚೇರಿಗಳಿಗೆ ಆತಂಕ ಎದುರಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಅಂಚೆ ಇಲಾಖೆಯಿಂದ ಇಂದು ಸ್ಯಾನಿಟೈಸೇಶನ್ ಮಾಡಲಾಗಿದೆ.

ಎಲ್ಲಾ ಅಂಚೆ ಕಚೇರಿಗಳಿಗೂ ಸ್ಯಾನಿಟೈಸೇಶನ್ ಮಾಡಲಾಗಿದ್ದು, ಸೋಮವಾರದವರೆಗೆ 13 ಅಂಚೆ ಕಚೇರಿ ಮುಚ್ಚಲಿವೆ.