ಹುಬ್ಬಳ್ಳಿ : ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಲಾಕ್ ಡೌನ್ ಮಾಡಿದ್ರು ಸಹ ದಾರಿಗೆ ಬರದ ಕೋವಿಡ್ ಗೆ ಜಿಲ್ಲಾಡಳಿತ ತಲೆ ಕೆಡಿಸಿಕೊಂಡಿದೆ. ಅಲ್ಲದೆ ಮತ್ತೊಂದು ಸುತ್ತಿನ ಲಾಕ್ ಡೌನ್ ಮಾಡಲು ಈಗಾಗಲೇ ಸದ್ದಿಲ್ಲದೆ ಪ್ಲಾನ್ ಮಾಡಿದೆ.
ಹೌದು…ರಾಜ್ಯದಲ್ಲಿ ನಿತ್ಯ ಕೊರೊನಾ ಹಾವಳಿ ಹೆಚ್ಚಾಗಿದ್ದು, ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ..ಈ ಹಿನ್ನೆಲೆ ಈಗಾಗಲೇ ಲಾಕ್ ಡೌನ್ ಘೋಷಣೆ ಸಹ ಮಾಡಿದೆ.ಆದ್ರೆ ಇಷ್ಟೆಲ್ಲಾ ಮಾಡಿದ್ರು ಸಹ ಕೊರೋನಾ ರಣಕೇಕೆ ಮಾತ್ರ ನಿಂತಿಲ್ಲ. ಅಲ್ಲದೆ ಮೊದಲೆಲ್ಲ ಹತೋಟಿಯಲ್ಲಿದ್ದ ಕೊರೋನ ಮಾಯೇ ಇದೀಗ ಧಾರವಾಡ ಜಿಲ್ಲೆಯಲ್ಲಿ ಎಲ್ಲೇ ಮೀರಿ ಬೆಳೆಯುತ್ತಿದೆ. ಈ ಹಿನ್ನೆಲೆ 10 ದಿನಗಳ ಕಾಲ ಲಾಕ್ ಡೌನ್ ಮಾಡಿದ್ದು, ಆದ್ರೆ ಕೊರೋನ ನಿಯಂತ್ರಣ ಮಾತ್ರ ಕಷ್ಟ ಸಾಧ್ಯವಾಗಿದೆ. ಈ ಹಿನ್ನೆಲೆ ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆಗೆ ಸಚಿವ ಜಗದೀಶ್ ಶೆಟ್ಟರ್ ಮತ್ತೆ ಲಾಕ್ ಡೌನ್ ಮಾಡುವ ಸಲುವಾಗಿ ಮಾತುಕತೆ ಮಾಡಿದ್ದಾರೆ.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಅಟ್ಟಹಾಸ ಹೆಚ್ಚುತ್ತಲೇ ಇದೆ. ಮೊದಲೆಲ್ಲ ನಿಯಂತ್ರಣದಲ್ಲಿದ್ದ ಚೀನಾ ವೈರಸ್ ಇದೀಗ ತನ್ನ ವಿಸ್ತಾರವನ್ನು ಹೆಚ್ಚು ಮಾಡಿಕೊಂಡಿದೆ. ನಿತ್ಯವೂ 150ರ ಗಡಿ ದಾಟುತ್ತಿದ್ದು ಸದ್ಯ ಈಗಿನ ಸೋಂಕಿತರ ಸಂಖ್ಯೆ 2000 ತಲುಪಿದೆ..ಈಗಾಗಲೇ 10 ದಿನಗಳ ಲಾಕ್ ಡೌನ್ ಮಾಡಿದ್ರು ಸಹ ಹತೋಟಿಗೆ ಬರುವ ಲಕ್ಷಣ ತೀರಾ ಕಡಿಮೆಯಾಗಿದೆ. ಈ ಹಿನ್ನೆಲೆ 24 ರ ನಂತ್ರ ಮತ್ತಷ್ಟು ದಿನಗಳ ಕಾಲ ಜಿಲ್ಲೆಯನ್ನ ಲಾಕ್ ಮಾಡುವ ಪ್ಲಾನ್ ಮಾಡಲಾಗಿದೆ..ಈಗಾಗಲೇ ಸಿಎಂ ಜೊತೆಗೆ ಒಂದು ಸುತ್ತಿನ ಚರ್ಚೆ ನಡೆದಿದ್ದು, ಸಚಿವ ಸಂಪುಟ ಸಭೆಯಲ್ಲಿ ಲಾಕ್ ಡೌನ್ ಬಗ್ಗೆ ಸದ್ಯದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಅಂತ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಒಟ್ಟಾರೆ ಧಾರವಾಡ ಜಿಲ್ಲೆಯ ಪಟ್ಟಣ ಮತ್ತು ಗ್ರಾಮಗಳಿಗೂ ಡೆಡ್ಲಿ ವೈರಸ್ ಎಂಟ್ರಿ ಕೊಟ್ಟಿದ್ದು ಅದರ ವಿರುದ್ದದ ಹೋರಾಟಕ್ಕೆ ಜಿಲ್ಲಾಡಳಿತ ಮತ್ತೊಂದು ಸುತ್ತಿನ ಲಾಕ್ ಡೌನ್ ಮಾಡಲು ಮುಂದಾಗಿದ್ದು, ಇದನ್ನ ಜನರು ಹೇಗೆ ಸ್ವೀಕರಿಸಿತ್ತಾರೆ ಅಂತ ಕಾದು ನೋಡಬೇಕಿದೆ.
ವರದಿ: ಶಂಭು
ಮೆಗಾಮೀಡಿಯಾ ನ್ಯೂಸ್, ಹುಬ್ಬಳ್ಳಿ ಬ್ಯೂರೋ.
Click this button or press Ctrl+G to toggle between Kannada and English