- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಶ್ರೀಮಂತ ವಿಚ್ಚೇದನ ಪಡೆದ ಮಹಿಳೆಯರನ್ನು ಮದುವೆ ಯಾಗುವುದಾಗಿ ನಂಬಿಸಿ ದೈಹಿಕ‌ ಸಂಪರ್ಕ ಬೆಳೆಸಿ, ಲಕ್ಷ ಹೊಡೆಯುತ್ತಿದ್ದ

jaganath [1]ಬೆಂಗಳೂರು :   ಶ್ರೀಮಂತ ವಿಚ್ಚೇದನ ಪಡೆದ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ವೈವಾಹಿಕ ಜಾಲತಾಣವಾದ ಮ್ಯಾಟ್ರಿಮೋನಿ ಮೂಲಕ  ಮದುವೆ ಮಾಡಿಕೊಳ್ಳುವುದಾಗಿ  ನಂಬಿಸಿ  ವಂಚಿಸುತ್ತಿದ್ದ ಖತರ್ನಾಕ್ ವಂಚಕನನ್ನು ಬನಶಂಕರಿ ಪೊಲೀಸರು ಹಾಸನದಲ್ಲಿ ಬಂಧಿಸಿದ್ದಾರೆ.

ಮಹೇಶ್ ಆಲಿಯಾಸ್ ಜಗನ್ನಾಥ್ ಬಂಧಿತ ಆರೋಪಿ. ಮೂಲತಃ ಬಿಜಾಪುರದವನಾಗಿದ್ದು ಹಾಸನದಲ್ಲಿ ಮನೆ ಮಾಡಿಕೊಂಡಿದ್ದ.

ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. 29 ವರ್ಷದ ಜಗನ್ನಾಥ್, ಆನ್‌ ಲೈನ್ ಮೂಲಕ ಮಹಿಳೆಯರನ್ನು ಸಂಪರ್ಕಿಸಿ  ಮದುವೆಯಾಗುವುದಾಗಿ ಹೇಳಿ ಮಹಿಳೆಯರಿಂದ ಲಕ್ಷ ಲಕ್ಷ ವಂಚಿಸಿ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿ ಸಿಮ್ ಬದಲಿಸುತ್ತಿದ್ದ.  ವಿಚ್ಚೇದನ ಪಡೆದ ಹಾಗೂ ಹಣವಿರುವ ಮಹಿಳೆಯರನ್ನು ಗುರಿಯಾಗಿಸಿಕೊಳ್ಳುತ್ತಿದ್ದ. ತಾನು ಶ್ರೀಮಂತ ಎಂದು ಬಿಂಬಿಸಿಕೊಂಡು ಮುಗ್ದ ಮಹಿಳೆಯರಿಗೆ ಮದುವೆಯಾಗುವ ಭರವಸೆ ನೀಡಿ ವಂಚಿಸುತ್ತಿದ್ದ.

ಹೀಗೆ ಆರೋಪಿ ಮಾತಿಗೆ ಮರುಳಾಗಿ ಮಹಿಳೆಯೊಬ್ಬಳು ಏಳು ಲಕ್ಷ ಹಣ ನೀಡಿ ಕೈ ಸುಟ್ಟುಕೊಂಡಿದ್ದಾರೆ. ವಂಚನೆ ಸಂಬಂಧ ಹಣ ಕಳೆದುಕೊಂಡ ಮಹಿಳೆ ಬನಶಂಕರಿ ಪೊಲೀಸ್ ಠಾಣೆಗೆ ನೀಡಿದ ದೂರಿನ್ವನಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಹಾಸನದಲ್ಲಿ ಸೆರೆ ಹಿಡಿದಿದ್ದಾರೆ.

ಈತ ಹತ್ತಕ್ಕೂ ಹೆಚ್ಚು ವಿಚ್ಚೇದಿತ ಮಹಿಳೆಯರನ್ನು ವಂಚಿಸಿ 25 ಲಕ್ಷಕ್ಕೂ ಹೆಚ್ಚು ಹಣ ವಂಚಿರುವುದು ಹಾಗೂ ‌ಐದು ಮಂದಿ ಮಹಿಳೆಯರಿಗೆ ಮದುವೆಯಾಗುವುದಾಗಿ ನಂಬಿಸಿ ದೈಹಿಕ‌ ಸಂಪರ್ಕ ಬೆಳೆಸಿರುವುದನ್ನು ವಿಚಾರಣೆ ವೇಳೆ  ಒಪ್ಪಿಕೊಂಡಿದ್ದಾನೆ. ಅಲ್ಲದೆ, ಹಾಸನ, ವಿಜಯಪುರ, ಬೆಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಮಹಿಳೆಯರಿಗೆ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ.

ಆರೋಪಿಯಿಂದ ಆರು ಲಕ್ಷ ಬೆಲೆ ಬಾಳುವ ಕಾರು, ಎರಡು ಮೊಬೈಲ್,25 ಸಿಮ್ ಕಾರ್ಡ್, 22 ಎಟಿಎಂ ಕಾರ್ಡ್,ಮೂರು ಪಾನ್ ಕಾರ್ಡ್, ಮೂರು ಓಟರ್ ಐಡಿ, ಆಧಾರ್ ಕಾರ್ಡ್, ಪಾಸ್ ಬುಕ್ ವಶಕ್ಕೆ ಪಡೆದಿದ್ದಾರೆ.‌ ಸದ್ಯ ವಂಚಕನನ್ನು ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ.