- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಉಡುಪಿ : ಹುಂಜದ ಜೊತೆ ನವಿಲಿನ ಫೈಟ್ ಸಖತ್ ವೈರಲ್

 peacock [1]ಉಡುಪಿ : ಕುಂದಾಪುರದಲ್ಲಿ ವ್ಯಕ್ತಿಯೊಬ್ಬರ‌ ಮನೆ‌ ಮುಂದೆ ನವಿಲು-ಕೋಳಿ ಕಾಳಗ ನಡೆದಿದ್ದು, ಸ್ಥಳೀಯರು ಆಶ್ಚರ್ಯಚಕಿತರಾಗಿ ಈ ದೃಶ್ಯವನ್ನುಸೆರೆ ಹಿಡಿದಿದ್ದಾರೆ.  ಟಗರು, ಬುಲ್, ಕೋಳಿ ಕಾಳಗ ಸಾಮಾನ್ಯ. ಆದರೆ ನವಿಲು ಹುಂಜದ ಜೊತೆ ಕಾಳಗ ಮಾಡಿರುವುದು ಅಲ್ಲಿದ್ದವರಿಗೆ ಆಶ್ಚರ್ಯ ಮೂಡಿಸಿದೆ. ಇನ್ನು ವಯ್ಯಾರಕ್ಕೆ ಹೆಸರಾದ ನವಿಲಿನ ಫೈಟ್ ಹುಂಜದ ಜತೆ ಈಗ ವೈರಲ್ ಆಗಿದೆ.

ಹೆಣ್ಣುಕೋಳಿ ಸುತ್ತ ಗಿರಕಿ ಹೊಡೆಯುತ್ತಿದ್ದ ಹುಂಜಕ್ಕೂ ಬೋರ್ ಆಗಿರಬೇಕು. ಮತ್ತೊಂದು ಹುಂಜದ ಜೊತೆಗೆ ಫೈಟ್ ಮಾಡೋದನ್ನ ಬಿಟ್ಟು ನವಿಲಿನ ವಿರುದ್ಧ ಕಾದಟಕ್ಕಿಳಿದಿತ್ತು. ಮಳೆ ಬಂದ್ರೆ ಗರಿಬಿಚ್ಚಿ ಕುಣಿದು ಹೆಣ್ಣುನವಿಲುನ್ನು ರಮಿಸುವುದರಲ್ಲಿ ಬಿಜಿಯಾಗುವ ಮಯೂರ ಕೂಡ, ನರ್ತನ ಬಿಟ್ಟು ಕುಕ್ಕುಟದ ಜತೆ ‌ಕಾದಾಡುವುದರಲ್ಲೇ‌ ಮೈ ಮರೆತಿತ್ತು.

ತನಗಿಂತ ಬಲಿಷ್ಠ ಗಾತ್ರದ ನವಿಲಿನ ಜೊತೆ ಕಾದಾಡಿದ ಹುಂಜನಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೆ ಈ ವಿಡಿಯೋ ಸಖತ್ ವೈರಲ್ ಆಗಿದೆ.

 peacock [2]