ಬಂಟ್ವಾಳ: ಅಕ್ರಮವಾಗಿ ಓಮ್ನಿ ವಾಹನದಲ್ಲಿ ಗೋಸಾಗಟ ನಡೆಸುತ್ತಿದ್ದ ತಂಡವನ್ನು ಸೋಮವಾರ ರಾತ್ರಿ ಬಂಟ್ವಾಳ ನಗರ ಪೊಲೀಸರು ತಡೆದಿದ್ದು, ಓಮ್ನಿ ಮತ್ತು ಒಂದು ದನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಾರ್ನಬೈಲು ಎಂಬಲ್ಲಿ ಒಮ್ನಿ ಕಾರೊಂದು ವೇಗವಾಗಿ ಬರುತ್ತಿದ್ದು ಪೊಲೀಸರು ನಿಲ್ಲಿಸಲು ಸೂಚನೆ ನೀಡಿದಾಗ ನಿಲ್ಲಿಸಿದೆ ನಂದವಾರ ರಸ್ತೆಯ ಮೂಲಕ ವೇಗವಾಗಿ ಕಾರು ಮುಂದೆ ಹೋಗಿದೆ. ಪೊಲೀಸರು ವಾಹನವನ್ನು ಬೆನ್ನಟ್ಟಿ ಕೊಂಡು ಹೋದಾಗ ನಂದಾವರ ಎಂಬಲ್ಲಿ ಅಂಗಡಿಯೊಂದಕ್ಕೆ ಕಾರು ಡಿಕ್ಕಿ ಹೊಡೆದು ನಿಲ್ಲಿಸಿ ಆರೋಪಿಗಳು ಪರಾರಿಯಾಗಿದ್ದಾರೆ. ವಾಹನವನ್ನು ಪರಿಶೀಲಿಸಿದಾಗ ವಾಹನದೊಳಗೆ ಒಂದು ದನವನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿಹಾಕಲಾಗಿತ್ತು.
ವಾಹನ ಹಾಗೂ ದನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಎ.ಎಸ್.ಐ.ಕುಂಜ್ಞ, ಸಿಬ್ಬಂದಿ ಗಳಾದ ಸುಜು, ಕೃಷ್ಣ ಕುಲಾಲ್, ಹಾಲೇಶ್, ಚಾಲಕ ವಿಜಯ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Click this button or press Ctrl+G to toggle between Kannada and English