- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ವಿಟ್ಲದ ಹಾಳೆತಟ್ಟೆ ಕಂಪನಿಯ 9ನೌಕರರಿಗೆ ಕೊರೊನಾ ಸೋಂಕು ದೃಡ, ಕಂಪೆನಿ ಸೀಲ್ ಡೌನ್

Vitla Factory [1]ವಿಟ್ಲ : ಕೊಡಂಗಾಯಿ ಬಲಿಪಗುಳಿಯಲ್ಲಿರುವ ಇಕೋ-ಬ್ಲಿಝ್  ಕಂಪನಿಯ 9ನೌಕರರಿಗೆ ಕೊರೊನಾ ಸೋಂಕು ದೃಡ ವಾಗಿದ್ದು,  ಸುಮಾರು  300ಕ್ಕೂ ಹೆಚ್ಚಿನ ಕಾರ್ಮಿಕರಲ್ಲಿ ಆತಂಕ ಮಡುಗಟ್ಟಿದೆ.

ಹಾಳೆತಟ್ಟೆ ತಯಾರಿಕೆಯಲ್ಲಿ ಅಂತರ್ರಾಷ್ಟೀಯ ಮಾರುಕಟ್ಟೆ ಹೊಂದಿರುವ ಇಕೋ-ಬ್ಲಿಝ್ ಕಂಪೆನಿಯಲ್ಲಿ ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯಗಳ ಸಾಕಷ್ಟು ಜನ ಕಾರ್ಮಿಕರಿದ್ದಾರೆ. ಅದೇ ರೀತಿ ಸ್ಥಳೀಯರು ಕೂಡಾ ಸಾಕಷ್ಟು ಸಂಖ್ಯೆಯಲ್ಲಿ ದುಡಿಯುತ್ತಿದ್ದಾರೆ. ಇದೀಗ 9ಕಾರ್ಮಿಕರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ಮಂಗಳವಾರ ಕಂಪೆನಿಗೆ ಆಗಮಿಸಿದ ಟಾಸ್ಕ್ ಫೋರ್ಸ್ ಅಧಿಕಾರಿಗಳ ತಂಡ ಸೀಲ್ ಡೌನ್ ಮಾಡಿದ್ದಾರೆ.

ಮುನ್ನೆಚ್ಚರಿಕೆಯ ಕ್ರಮವಾಗಿ ಮಾಲಿಕರಿಗೆ 14ದಿನಗಳ ಕಾಲ ಹೋಂ ಕ್ವಾರಂಟೈನ್ ಮಾಡಲಾಗಿದೆ.  ವಿಶ್ವದಾದ್ಯಂತ ಮಾರಕ ಸೋಂಕು ಜನರನ್ನು ಬಲಿಪಡೆಯುತ್ತಿದ್ದರೂ ಕಂಪನಿ ಮಾಲಿಕರು ಮತ್ತು ಆಡಳಿತ ವರ್ಗ ಸೂಕ್ತ ಮುನ್ನೆಚ್ಚರಿಕೆ ವಹಿಸದೇ ಬೇಜವಾಬ್ದಾರಿಯಿಂದ ಹೊರರಾಜ್ಯದ ಕಾರ್ಮಿಕರನ್ನು ಬಳಸಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಮಾಲಿಕರ ಮತ್ತು ಆಡಳಿತ ವರ್ಗದ ಬೇಜವಾಬ್ದಾರಿಯಿಂದಾಗಿ ವಿಟ್ಲ ಪಡ್ನೂರು ಗ್ರಾಮ, ಕೊಳ್ನಾಡು ಗ್ರಾಮ, ಸಾಲೆತ್ತೂರು ಗ್ರಾಮ, ಮಂಚಿ ಗ್ರಾಮಗಳು ನಂಜನಗೂಡಿನ ಜ್ಯುಬಿಲಿಯೆಂಟ್ ಕಾರ್ಖಾನೆಯಂತೆ ಕೊರೊನಾ ಹಾಟ್ ಸ್ಪಾಟ್  ಆಗಲಿದೆಯೋ..? ಎಂಬ ಭೀತಿ ಕಾಡುತ್ತಿದೆ.